Breaking News

ಹೊನ್ನಾವರ| ಚಿನ್ನದ ಸರ ಕಳವು: ಪ್ರಕರಣ ದಾಖಲು

ಹೊನ್ನಾವರ: ಗುಣವಂತೆ ಸಮೀಪದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚತ ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ನಡೆಯಿತು. ಗುಣವಂತೆ ಶಿವನಗರ ನಿವಾಸಿ ಹನುಮಿ ಶಂಭು ಗೌಡ ಚಿನ್ನದ ಸರ ಕಳೆದುಕೊಂಡವರು. ಅಪರಿಚಿತ ವ್ಯಕ್ತಿಯೋರ್ವ ಹಿಂದಿನಿಂದ ಬಂದು ಹನುಮಿ ಗೌಡ ಅವರ ಕುತ್ತಿಗೆಗೆ ಕೈ ಹಾಕಿ 15 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ನಾಜಗಾರ ಕಡೆಗೆ ಹೋಗಿದ್ದಾನೆ’ ಎಂದು ಹನುಮಿ ಅವರ ಮಗ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *