Breaking News

Breaking News

ಷೇರು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ನಷ್ಟ ; ಮನನೊಂದು ಸಿದ್ದಾಪುರದಲ್ಲಿ ಯುವಕ ಆತ್ಮಹತ್ಯೆ

ಉತ್ತರ ಕನ್ನಡ : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ನಿವಾಸಿ ಹರ್ಷವರ್ಧನ್ (22) ಮೃತಪಟ್ಟ ಯುವಕನಾಗಿದ್ದು, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಉಂಟಾದ ಹಣಕಾಸಿನ ಮುಗ್ಗಟ್ಟೇ ಈ ತೀವ್ರ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದೆ. ಮೃತಯುವಕನನ್ನು ಹರ್ಷವರ್ಧನ್ (22) ಎಂದು ಗುರುತಿಸಲಾಗಿದೆ. ಹರ್ಷವರ್ಧನ್ ತನ್ನ …

Read More »

ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ, ಹಿಗ್ಗಾಮುಗ್ಗ ಥಳಿಸಿದ ತಂದೆ

ಬಂದಾ, ಏಪ್ರಿಲ್ 23: ಮದುವೆ ಒಂದು ವಾರವಿರುವಾಗ ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಲು ಯತ್ನಿಸಿರುವ ಘಟನೆ ಬಂದಾದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಕುಟುಂಬವು ಆಕೆಯನ್ನು ಹಿಡಿದಿತ್ತು. ಆಕೆಯ ಸಹೋದರ ಹಾಗೂ ತಂದೆ ಇಬ್ಬರು ಸೇರಿ ಆಕೆಯನ್ನು ಥಳಿಸಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದಿನ ವಾರ ಮದುವೆ, ಮಗಳು ಇಂಥಾ ಕೆಲಸ ಮಾಡಿ ತನ್ನ ಮರ್ಯಾದೆ ತೆಗೆಯಲು ಹೊರಟಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ರಸ್ತೆಯಲ್ಲೇ ಥಳಿಸಿದ್ದಾರೆ.

Read More »

ಯಾದಗಿರಿ: ಲೋಕಾಯುಕ್ತ ಬಲೆಗೆ ಟ್ರಾಫಿಕ್ ಹೆಡ್‌ಕಾನ್‌ಸ್ಟೆಬಲ್‌ ನಾಗೇಶ

ಅಪಘಾತ ಪ್ರಕರಣವೊಂದರ ಬೈಕ್ ಬಿಟ್ಟುಕೊಡಲು ₹ 13 ಸಾವಿರ ಲಂಚ ಪಡೆದ ಆರೋಪದಡಿ ಯಾದಗಿರಿ ಸಂಚಾರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.ಹೆಡ್‌ಕಾನ್‌ಸ್ಟೆಬಲ್‌ ನಾಗೇಶ ಲಂಚ ಪಡೆದ ಆರೋಪಿ. ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾ ನಿವಾಸಿ ಅಣ್ಣಯ್ಯ ರಾಠೋಡ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಅಪಘಾತ ಪ್ರಕರಣದಲ್ಲಿ ಅಣ್ಣಯ್ಯ ಅವರ ಬೈಕ್‌ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಪ್ರಕರಣ ಇತ್ಯರ್ಥವಾದರೂ ಮಾಲೀಕರಿಗೆ …

Read More »

ಕಳ್ಳಸಾಗಣೆ ಮಾಡಲಾಗಿದ್ದ 9ನೇ ಶತಮಾನದ ವಿಗ್ರಹ ವಶ

ಬೆಂಗಳೂರು : ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಪಾಳದಿಂದ ಕಳ್ಳಸಾಗಣೆ ಮಾಡಲಾಗಿದ್ದ 9ನೇ ಶತಮಾನದ ಅಪರೂಪ ಪದ್ಮಪಾಣಿ ವಿಗ್ರಹವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರ್ ಕಾರ್ಗೋ ವಿಭಾಗಕ್ಕೆ ಆಸ್ಟ್ರೀಯಾದ ವಿಯೆನ್ನಾದಿಂದ ಕಲ್ಲಿನ ವಿಗ್ರಹ ಬಂದಿದೆ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬೂದು ಬಣ್ಣದ ಶಿಲೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಈ ಶಿಲೆ 9ನೇ ಶತಮಾನದ ಸೇರಿದ ನೇಪಾಳದ ಪದ್ಮಪಾಣಿ ಎಂದು ದೃಢಪಟ್ಟಿದೆ. ಕಲ್ಲಿನ …

Read More »

ಅಬ್ಬಾ. ಎಂಥಾ ಘೋರ ಘಟನೆ! ಹೆತ್ತ ಮಗುವಿನ ಕತ್ತು ಕೊಯ್ದು ಟಾಯ್ಲೆಟ್ʼಗೆ ಎಸೆದ ಪಾಪಿ ತಾಯಿ.!

ದೇವನಹಳ್ಳಿ: ಪಾಪಿ ತಾಯಿಯೊಬ್ಬಳು ಹುಟ್ಟಿದ ಮಗುವನ್ನೇ ಕೊಂದ ಧಾರುಣ ಘಟನೆ ಬೆಳಕಿಗೆ ಬಂದಿದೆ. ಹೌದು ನವಜಾತ ಶಿಶುವಿನ ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಸಮೀಪದಲ್ಲಿರುವ ಫಾಕ್ಸ್‌ಕಾನ್ ಕಂಪೆನಿಯಲ್ಲಿ ನಡೆದಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಶೌಚಾಲಯಕ್ಕೆ ತೆರಳಿದ ವೇಳೆ ಅಕಸ್ಮಾತ್ ಹೆರಿಗೆ ಸಂಭವಿಸಿದೆ. ಮದುವೆಯಾಗದಿರುವ ಕಾರಣ ಭಯಗೊಂಡು, ಆಕೆ ನವಜಾತ ಶಿಶುವಿನ ಜೀವ ತೆಗೆದಿದ್ದಾಳೆ. ನಂತರ ಬೇರೊಬ್ಬರು ಶೌಚಾಲಯಕ್ಕೆ ತೆರಳಿದಾಗ ಘಟನೆ …

Read More »

ಹೋಟೆಲ್ ನಲ್ಲಿ ಏಕಾಏಕಿ 2 ಸಿಲಿಂಡರ್ ಬ್ಲಾಸ್ಟ್ – ಬಾಲಕನಿಗೆ ಗಂಭೀರ ಗಾಯ

ಬಳ್ಳಾರಿ: ಹೋಟೆಲ್‌ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಹೋಟೆಲ್ ಹೊತ್ತಿ ಉರಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ. ತೆಕ್ಕಲಕೋಟೆಯ ಈರಣ್ಣ ಎನ್ನುವವರಿಗೆ ಸೇರಿದ ಹೋಟೆಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಹೋಟೆಲ್‌ನಲ್ಲಿ ಈರಣ್ಣನ ಕುಟುಂಬಸ್ಥರು 9 ಜನ ಮಲಗಿದ್ದರು ಎನ್ನಲಾಗಿದೆ. 9 ಜನರ ಪೈಕಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 10 ವರ್ಷದ ಶ್ರೀನಿವಾಸ್‌ಗೆ ಗಂಭೀರ ಗಾಯಗಳಾಗಿವೆ. …

Read More »

ಬಿಟ್‌ ಕಾಯಿನ್‌ ಆರೋಪಿಗಳಿಂದ ಕೇಸ್‌ ರದ್ದತಿಗೆ ಕೋರ್ಟ್‌ ಮೊರೆ

ಬೆಂಗಳೂರು: ಬಿಟ್‌ ಕಾಯಿನ್‌ ಪ್ರಕರಣದಲ್ಲಿನ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಜತೆಗೆ ಸಹ ಆರೋಪಿಗಳಾಗಿರುವ ಸುನೀಶ್‌ ಹೆಗ್ಡೆ, ಪ್ರಸಿದ್ಧ ಶೆಟ್ಟಿ ತಮ್ಮ ಮೇಲಿನ ಆರೋಪ ರದ್ದು ಪಡಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಎ.25ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಕೀಲರು, ಎಸ್‌ಐಟಿ ತನಿಖೆಯಲ್ಲಿ ಇವರ ವಿರುದ್ಧ ಆರೋಪ ಕಂಡುಬಂದಿಲ್ಲ. ಹೀಗಾಗಿ ಪ್ರಕರಣ ರದ್ದು ಪಡಿಸಬೇಕೆಂದು ಮನವಿ ಮಾಡಿದರು. …

Read More »

ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಮುಳಬಾಗಿಲು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮುಳಬಾಗಿಲು ನಗರ ಠಾಣೆಯ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಪುಂಗನೂರು ಪಟ್ಟಣದ ಆವುಲ ರವಿ (27) ಬಂಧಿತ ಆರೋಪಿ. ಮುಳಬಾಗಿಲಿನ ಮಂಜುನಾಥ ಕಾಲೊನಿ ಸಮೀಪದ ಕಾಲೇಶ ದರ್ಗಾದ ಬಳಿ ನಾಲ್ಕು ಪೊಟ್ಟಣಗಳಲ್ಲಿ 8.40 ಕೆ.ಜಿ ತೂಕದ ಗಾಂಜಾವನ್ನು ಬೈಕ್‌ನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಕೃತ್ಯಕ್ಕೆ ಬಳಸಿದ್ದ …

Read More »

ಈಗ ತಮಾಷೆಯನ್ನೂ ಮಾಡುವಂತಿಲ್ಲ: ಬೆಟ್ಟಿಂಗ್‌ ಕೇಸ್‌ಗೆ ಪರಮೇಶ್ವರ್‌ ಅಳಲು

ಬೆಂಗಳೂರು: ನಾನು ಕಾನೂನನ್ನು ಗೌರವಿಸುವವನು. ಕಾನೂನು ರಕ್ಷಣೆ ಮಾಡುವ ಖಾತೆ ನಿಭಾಯಿಸುವವನಾಗಿ ಅದಕ್ಕೆ ಗೌರವ ಕೊಡಬೇಕಲ್ಲವೇ? ಕಾನೂನು ಏನು ಕ್ರಮ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧನಾಗಿದ್ದೇನೆ. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೆಟ್ಟಿಂಗ್‌ ಪ್ರೋತ್ಸಾಹಿಸುತ್ತೇನೆ ಎಂದರೆ ಅದು ಶುದ್ಧ ಸುಳ್ಳು.‌ ಮಾತನ್ನು ಅರ್ಥೈಸಿಕೊಳ್ಳುವುದರ ಮೇಲೆ ಹೋಗುತ್ತದೆ.ಈಗ ತಮಾಷೆಯನ್ನೂ ಮಾಡುವಂತಿಲ್ಲ‌ ಎಂಬಂತಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ಬೇಸರ ವ್ಯಕ್ತಪಡಿಸಿದರು. ಕಬಡ್ಡಿ ಬೆಟ್ಟಿಂಗ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಬೆಟ್ಟಿಂಗ್ ಕುರಿತಂತೆ ಕೋರ್ಟ್ ಆದೇಶದ ಬಗ್ಗೆ ಹೆಚ್ಚು …

Read More »

ಹಿರಿಯ ಅಧಿಕಾರಿಯ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ

ಹೊಸದಿಲ್ಲಿ, : ಹಿರಿಯ ಸರಕಾರಿ ಅಧಿಕಾರಿಯೊಬ್ಬರ 22 ವರ್ಷದ ಪುತ್ರಿ ಆಗ್ನೇಯ ದಿಲ್ಲಿಯ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಬೆಳಗ್ಗೆ ಕೊಲೆಯಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಧಿಕಾರಿಯ ಪುತ್ರಿ ಎಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಹತ್ಯೆಗೈಯುವ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯುವತಿಯ ಕತ್ತು ಹಿಸುಕಿ ಹತ್ಯೆಗೈಯಲು ಮೊಬೈಲ್ ಚಾರ್ಜರ್‌ ನ ಕೇಬಲ್ …

Read More »