ಬೆಂಗಳೂರು: ನಾನು ಕಾನೂನನ್ನು ಗೌರವಿಸುವವನು. ಕಾನೂನು ರಕ್ಷಣೆ ಮಾಡುವ ಖಾತೆ ನಿಭಾಯಿಸುವವನಾಗಿ ಅದಕ್ಕೆ ಗೌರವ ಕೊಡಬೇಕಲ್ಲವೇ? ಕಾನೂನು ಏನು ಕ್ರಮ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧನಾಗಿದ್ದೇನೆ. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೆಟ್ಟಿಂಗ್ ಪ್ರೋತ್ಸಾಹಿಸುತ್ತೇನೆ ಎಂದರೆ ಅದು ಶುದ್ಧ ಸುಳ್ಳು. ಮಾತನ್ನು ಅರ್ಥೈಸಿಕೊಳ್ಳುವುದರ ಮೇಲೆ ಹೋಗುತ್ತದೆ.ಈಗ ತಮಾಷೆಯನ್ನೂ ಮಾಡುವಂತಿಲ್ಲ ಎಂಬಂತಾಗಿದೆ ಎಂದು ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ಕಬಡ್ಡಿ ಬೆಟ್ಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಬೆಟ್ಟಿಂಗ್ ಕುರಿತಂತೆ ಕೋರ್ಟ್ ಆದೇಶದ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಕಬಡ್ಡಿ ಆಟ ನಡೆಯುವಾಗ ಹಳ್ಳಿಯಲ್ಲಿ ಎಲ್ಲರೂ ಮಾತಾಡುವ ಹಾಗೆಯೇ ನಾನು ಹೇಳಿದ್ದೇನೆ. ಕಾನೂನು ದೃಷ್ಟಿಯಿಂದ ಅದು ತಪ್ಪು. ಆದರೆ, ನಾನು ಯಾವ ರೀತಿ ಹೇಳಿದ್ದೇನೆ ಎನ್ನುವುದು ಮುಖ್ಯ. ನಾನೇನಾದರೂ ಬೆಟ್ಟಿಂಗ್ ಪ್ರೋತ್ಸಾಹಿಸುವ ರೀತಿಯಲ್ಲಿ ಹೇಳಿದ್ದರೆ ಸರಿಯಲ್ಲ ಎಂದರು. ಕೋರ್ಟ್‌ನಿಂದ ನೋಟಿಸ್ ಕೊಟ್ಟಿರಲಿಲ್ಲ. ಒಂದು ವೇಳೆ ನೋಟಿಸ್ ಬಂದಿದ್ದರೆ ಅರ್ಥೈಸಲಾಗುತ್ತಿತ್ತು. ಗಂಭೀರವಾಗಿ ಪರಿಗಣಿಸಬೇಡಿ ಎಂದು ಮನವರಿಕೆ ಮಾಡಲಾಗುತ್ತಿತ್ತು. ನೋಟಿಸ್ ಬಂದಿಲ್ಲ. ಏಕಾಏಕಿಯಾಗಿ ಆದೇಶ ಮಾಡಿದ್ದಾರೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

