Breaking News

Breaking News

ನಕಲಿ ಆರ್ಡರ್-ಆಫರ್ ಲೆಟರ್: ಕೆಲಸದ ಆಮಿಷ ತೋರಿ ವಂಚನೆ, ಕೋಟಿ-ಕೋಟಿ ಲೂಟಿ ಮಾಡಿದ್ದ ದಂಪತಿ ಅರೆಸ್ಟ್!

ಬಸವೇಶ್ವರನಗರ: ಕೋರ್ಟ್‌ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದ ಜೋಡಿ, ಜೈಸನ್ ಡಿಸೋಜಾ ಮತ್ತು ಲವೀನಾ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಂಪತಿಗಳು ನಿರೋದ್ಯೋಗಿ ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅಮಾಯಕರನ್ನು ಟಾರ್ಗೆಟ್ ಮಾಡುತ್ತಾ, ಒಬ್ಬರಿಂದ 10-25 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಹತ್ತಾರು ಜನರಿಂದ ಒಟ್ಟು 25 ಕೋಟಿ ರೂಪಾಯಿಗೆ ಹೆಚ್ಚು ವಂಚನೆ ನಡೆಸಿದ್ದ ಈ ಜೋಡಿ, ನ್ಯಾಯಾಧೀಶರ ಸಹಿಯ ನಕಲು ಮಾಡಿ ನಕಲಿ …

Read More »

ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಕೇಸ್ : ಮಗನ ಕೈಗೆ ಕಾರು ಕೊಟ್ಟ ತಂದೆ ಸೇರಿ, ಇಬ್ಬರು ಅರೆಸ್ಟ್!

ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕನ ಸಾವಿಗೆ ಕಾರಣರಾದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೋಲಿಸರಿಂದ ನಾಗರಾಜ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಪ್ರಾಪ್ತ ಮಗನ ಕೈಯಲ್ಲಿ ಕಾರು ಕೊಟ್ಟು ಇದೀಗ ನಾಗರಾಜ್ ಜೈಲು ಸೇರಿದ್ದಾನೆ. ಕಾರು ಮಾಲಿಕ ನಾಗರಾಜ್ ರಾಯ್ಕರ್ ಸೇರಿ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕ್ಷನ್ ರಿಲ್ಸ್ ವೇಳೆ 15 ವರ್ಷದ ನಮಿಷ ಸಂಗಳದ ಮೃತಪಟ್ಟಿದ್ದ. ಆಡಿ ಕಾರು …

Read More »

ಅಡಿಕೆ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಚಿಕ್ಕಮಗಳೂರು: ಅಡಿಕೆ ತೋಟದಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದ ಬಳಿ ನಡೆದಿದೆ. ಪ್ರವೀಣ್(25) ಮೃತಪಟ್ಟ ಯುವಕ. ಭಾನುವಾರ ಮಧ್ಯಾಹ್ನ ತಮ್ಮ ಮನೆ ಸಮೀಪದ ಅಡಿಕೆ ತೋಟಕ್ಕೆ ನೀರು ಹಾಯಿಸಲು ಬೋರ್ವೆಲ್ ಬಳಿ ತೆರಳಿದ್ದಾರೆ.ಈ ವೇಳೆ ಸ್ವಿಚ್ ಆನ್ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನೀರು ಹಾಯಿಸಲು ಹೋಗಿದ್ದ ಪ್ರವೀಣ್ ಗಂಟೆ ಕಳೆದರೂ …

Read More »

ಸಹೋದರರ ಜಗಳ: ಅಣ್ಣನಿಂದಲೇ ತಮ್ಮನ ಹತ್ಯೆ

ಬೆಳಗಾವಿ : ಸಮೀಪದ ನುಗ್ಗಾನಟ್ಟಿ ಗ್ರಾಮದಲ್ಲಿ ಹೊಲಕ್ಕೆ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಹತ್ಯೆಗೆ ತಿರುಗಿದ ಘಟನೆ ಶನಿವಾರ ನಡೆದಿದೆ. ಯಲ್ಲಪ್ಪ ಸಣ್ಣಮ್ಮನವರ (45) ಮೃತಪಟ್ಟವರು. ಈ ಪ್ರಕರಣದಲ್ಲಿ ಅಣ್ಣ ಮಹಾದೇವಪ್ಪ ಸಣ್ಣಮ್ಮನವರ (55) ಅವರನ್ನು ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಹೊಲದಲ್ಲಿ ಬೆಳೆಗೆ ನೀರು ಹರಿಸುವ ವಿಚಾರವಾಗಿ ಇಬ್ಬರು ಸಹೋದರರ ನಡುವೆ ವಾಗ್ವಾದ ಉಂಟಾಗಿ, ಇದರಿಂದ ಸಿಟ್ಟುಗೊಂಡ ಮಹಾದೇವಪ್ಪ, ಯಲ್ಲಪ್ಪ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ …

Read More »

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ: ಎಂಡಿಎಂಎ ಮಾತ್ರೆ, ಗಾಂಜಾ ವಶ

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು, ₹52 ಸಾವಿರ ಮೌಲ್ಯದ 14 ಗ್ರಾಂ ಎಂಡಿಎಂಎ ಮಾತ್ರೆ ಹಾಗೂ 94 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪುರ ರೈಲ್ವೆ ನಿಲ್ದಾಣದ ಸಮೀಪ ಪೊಲೀಸರು ದಾಳಿ ಮಾಡಿ, ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು …

Read More »

ಹೂಡಿಕೆ ನೆಪದಲ್ಲಿ ಮಹಿಳೆಗೆ 11.75 ಲಕ್ಷ ರೂ. ವಂಚನೆ

ಉಡುಪಿ: ಟ್ರೇಡಿಂಗ್ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75 ಲಕ್ಷ ರೂ. ಆನ್ಲೈನ್ ವಂಚನೆಗೆ ಒಳಗಾಗಿದ್ದು, ಉಡುಪಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಸಹನಾ ಎಂಬುವರು ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದು, ಮುಂದೆ 15 ದಿನಗಳ ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದಾನೆ. ಅದರಲ್ಲಿ ಲಿಂಕ್ ಕಳುಹಿಸಿ ಇ-ಕೆವೈಸಿ ಡಿಟೇಲ್ ಭರ್ತಿ ಮಾಡುವಂತೆ ತಿಳಿಸಲಾಗಿದೆ. ನಂತರ ಟ್ರೇಡಿಂಗ್ …

Read More »

ಬೇಗೂರು: ಅಪಾರ್ಟ್‌ಮೆಂಟಲ್ಲಿ 2 ಎಲ್‌ಪಿಜಿ ಸಿಲಿಂಡರ್‌ ಕಳ್ಳತನ

ಬೆಂಗಳೂರು: ಬೇಗೂರು ಬಳಿಯ ಆರ್‌ .ಸಿ ಲೇಔಟ್‌ನ ವಿಶ್ವಪ್ರಿಯ ಅಪಾರ್ಟ್‌ಮೆಂಟ್‌ನ ಆವರಣದಲ್ಲಿದ್ದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಳ್ಳರು ಕದೊಯ್ದಿದ್ದಾರೆ. ಹೆಲ್ಮೆಟ್‌ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು, ಅಪಾಟ್‌ ìಮೆಂಟ್‌ ಒಳಗೆ ಬಂದು 2 ಸಿಲಿಂಡರ್‌ ಗಳನ್ನು ಕಳವು ಮಾಡಲಾಗಿದೆ. ಬಳಿಕ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು ಗಮನಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ದ್ವಿಚಕ್ರ ವಾಹನದಲ್ಲಿ ಬಂದ ಒಬ್ಬ ಹೊರಗೆ ನಿಂತಿದ್ದ. ಮತ್ತೂಬ್ಬ ದ್ವಿಚಕ್ರ ವಾಹನ ಸಮೇತ ಒಳಗೆ ಹೋಗಿ ಎರಡು ಸಿಲಿಂಡರ್‌ಗಳನ್ನು ಹೊರಕ್ಕೆ …

Read More »

ರಸ್ತೆ ಅಪಘಾತದಲ್ಲಿ ಒಬ್ಬ ಸಾವು, ಮತ್ತೊಬ್ಬ ಗಾಯ

ಮೇಲುಕೋಟೆ: ಹೋಬಳಿಯ ಬೆಳ್ಳಾಳೆ ಸರ್ಕಾರಿ ಫ್ರೌಡಶಾಲೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ನಾಗಮಂಗಲ ಹಳ್ಳಿಕೆರೆ ಗ್ರಾಮದ ಸೋಮೇಶ್ (35) ಮೃತ. ಇಲ್ಲಿನ ಮೈಸೂರು-ಜೀವರ್ಗಿ ಹೆದ್ದಾರಿಯ ಬೆಳ್ಳಾಳೆ ಬಳಿ ಶನಿವಾರ ನಾಗಮಂಗಲದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದ ಯುವಕನ ತಲೆಗೆ ಗಾಯಗೊಂಡು ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. …

Read More »

ದೇವಸ್ಥಾನದಲ್ಲಿ ದಲಿತ ಯುವಕರ ಮೇಲೆ ಹಲ್ಲೆ, ಯಾದಗಿರಿಯಲ್ಲಿ ಅಮಾನವೀಯ ಘಟನೆ

ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದ ಕಾರಣಕ್ಕೆ ದಲಿತ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಈ ಅಹಿತಕರ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಇಲ್ಲಿನ ಸ್ಥಳೀಯ ದೇವಸ್ಥಾನದ ಆವರಣದಲ್ಲಿ ಕುಳಿತಿದ್ದ ಯುವಕರನ್ನು ಕಂಡು ಕೆರಳಿದ ಮೇಲ್ವರ್ಗದ ಕೆಲವರು, ಅವರನ್ನು ಅಲ್ಲಿಂದ ಎದ್ದು ಹೋಗುವಂತೆ ಧಮಕಿ ಹಾಕಿದ್ದಾರೆ. ಕೇವಲ ಮಾತಿನ ಚಕಮಕಿಯಷ್ಟೇ ಅಲ್ಲದೆ, ಯುವಕರ …

Read More »

ಮಂಗಳೂರು| ಕೋಮುಪ್ರಚೋದನೆಯ ಪೋಸ್ಟ್ ಹಾಕಿದ ಆರೋಪ: ಯುವತಿ ಸೆರೆ

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಬೆಳ್ತಂಗಡಿ ಮೂಲದ ಯುವತಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2025ರಲ್ಲಿ ಯುವತಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಳು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಮು ಪ್ರಚೋದನೆಯ ಪೋಸ್ಟ್‌ಗಳನ್ನು ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಮಾ.19ರಂದು ಆಕೆಯನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾಳೆ …

Read More »