Breaking News

ಸಹೋದರರ ಜಗಳ: ಅಣ್ಣನಿಂದಲೇ ತಮ್ಮನ ಹತ್ಯೆ

ಬೆಳಗಾವಿ : ಸಮೀಪದ ನುಗ್ಗಾನಟ್ಟಿ ಗ್ರಾಮದಲ್ಲಿ ಹೊಲಕ್ಕೆ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಹತ್ಯೆಗೆ ತಿರುಗಿದ ಘಟನೆ ಶನಿವಾರ ನಡೆದಿದೆ. ಯಲ್ಲಪ್ಪ ಸಣ್ಣಮ್ಮನವರ (45) ಮೃತಪಟ್ಟವರು. ಈ ಪ್ರಕರಣದಲ್ಲಿ ಅಣ್ಣ ಮಹಾದೇವಪ್ಪ ಸಣ್ಣಮ್ಮನವರ (55) ಅವರನ್ನು ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಹೊಲದಲ್ಲಿ ಬೆಳೆಗೆ ನೀರು ಹರಿಸುವ ವಿಚಾರವಾಗಿ ಇಬ್ಬರು ಸಹೋದರರ ನಡುವೆ ವಾಗ್ವಾದ ಉಂಟಾಗಿ, ಇದರಿಂದ ಸಿಟ್ಟುಗೊಂಡ ಮಹಾದೇವಪ್ಪ, ಯಲ್ಲಪ್ಪ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *