Breaking News

ನಕಲಿ ಆರ್ಡರ್-ಆಫರ್ ಲೆಟರ್: ಕೆಲಸದ ಆಮಿಷ ತೋರಿ ವಂಚನೆ, ಕೋಟಿ-ಕೋಟಿ ಲೂಟಿ ಮಾಡಿದ್ದ ದಂಪತಿ ಅರೆಸ್ಟ್!

ಬಸವೇಶ್ವರನಗರ: ಕೋರ್ಟ್‌ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದ ಜೋಡಿ, ಜೈಸನ್ ಡಿಸೋಜಾ ಮತ್ತು ಲವೀನಾ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಂಪತಿಗಳು ನಿರೋದ್ಯೋಗಿ ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅಮಾಯಕರನ್ನು ಟಾರ್ಗೆಟ್ ಮಾಡುತ್ತಾ, ಒಬ್ಬರಿಂದ 10-25 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಹತ್ತಾರು ಜನರಿಂದ ಒಟ್ಟು 25 ಕೋಟಿ ರೂಪಾಯಿಗೆ ಹೆಚ್ಚು ವಂಚನೆ ನಡೆಸಿದ್ದ ಈ ಜೋಡಿ, ನ್ಯಾಯಾಧೀಶರ ಸಹಿಯ ನಕಲು ಮಾಡಿ ನಕಲಿ ಆರ್ಡರ್ ತೋರಿಸುತ್ತಿದ್ದರು. ಕೆಲವರು ಖಾಸಗಿ ಹೋಟೆಲ್‌ಗೆ ಕರೆಸಿ ನಕಲಿ ಆಫರ್ ಲೆಟರ್ ನೀಡುವ ಮೂಲಕ ಜನರನ್ನು ನಂಬಿಸುತ್ತಿದ್ದರು.
ಸಂತ್ರಸ್ಥರು ವಂಚನೆ ಬಗ್ಗೆ ಸಿಸಿಬಿಗೆ ದೂರು ನೀಡಿದ ಬಳಿಕ, ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ದಂಪತಿ ಹಿಂದೂ 2024 ರಲ್ಲಿ ಕೂಡ ಇದೇ ರೀತಿಯ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಬಿಡುಗಡೆ ಹೊಂದಿದ್ದರು.
ಸಿಸಿಬಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಮತ್ತು ಪ್ರತ್ಯೇಕ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದಾರೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *