BigTv News
March 11, 2026
Breaking News
ಖೋಟಾ ನೋಟು ಮುದ್ರಿಸಿ, ಚಲಾವಣೆ ಮಾಡುತ್ತಿದ್ದ ಇಬ್ಬರು ಅಪರಾಧಿಗಳಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 40,000 ದಂಡ ವಿಧಿಸಿದೆ. ದಾವಣಗೆರೆಯ ಯಲ್ಲಮ್ಮ ನಗರದ ನಿವಾಸಿ ಎಸ್. ಅಶೋಕ (40) ಹಾಗೂ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದ ನಿವಾಸಿ ಹಾಲೇಶ ಶಿಕ್ಷೆಗೆ ಗುರಿಯಾದವರು. 2022ರಲ್ಲಿ ಯಲ್ಲಮ್ಮ ನಗರದಲ್ಲಿ ಅಪರಾಧಿಗಳು ಖೋಟಾ ನೋಟು ಚಲಾವಣೆಯಲ್ಲಿ ತೊಡಗಿದ್ದರು. …
Read More »
BigTv News
March 11, 2026
Breaking News
ಕಾರ್ಕಳ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ನಗರ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಬ್ರಾಹಿಂ ಅಲಿಯಾಸ್ ಇಬ್ಬು ಎಂದು ಗುರುತಿಸಲಾಗಿದೆ. ಈತ ಕಾರ್ಕಳ ನಗರ ಪೊಲೀಸ್ ಠಾಣೆಯ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪೊಲೀಸ್ ಇಲಾಖೆ ಕಣ್ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಕಾರ್ಕಳ ನಗರ ಠಾಣೆಯ ವಾರಂಟ್ ಸಿಬಂದಿ ಲೋಕೇಶ್, ಸಂಜಯ್ ಅವರು ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. …
Read More »
BigTv News
March 11, 2026
Breaking News
ಸೊರಬ (ಶಿವಮೊಗ್ಗ): ತಾಲ್ಲೂಕಿನ ಸಾಗರ ರಸ್ತೆಯ ಮಳಲಗದ್ದೆ-ಅವಲಗೋಡು ಮಾರ್ಗ ಮಧ್ಯೆ ಚಲಿಸುತ್ತಿದ್ದ ಕಾರಿನಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಪಟ್ಟಣದ ದೊಡ್ಡಪೇಟೆಯ ಸಚಿನ್ ಎಂಬುವರಿಗೆ ಸೇರಿದ ಪೋರ್ಡ್ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಕೊಂಡಿದ್ದು, ಕ್ಷಣಾರ್ಧದಲ್ಲಿ ಕಾರು ಸುಟ್ಟು ಕರಕಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿತ್ತು. ಅದೃಷ್ವವಶಾಥ್ ಯಾವುದೇ …
Read More »
BigTv News
March 11, 2026
Breaking News
ಕಳೆದ ಕೆಲವು ತಿಂಗಳ ಹಿಂದೆ ವಿಜಯಪುರ ನಗರದಲ್ಲಿ ಕೃಷ್ಣ ಪ್ಯಾಲೇಸ್ ಹೋಟೆಲ್ , ಸಂಪೂರ್ಣವಾಗಿ ಸುಟ್ಟು ಬೆಂಕಿಗೆ ಆಹುತಿಯಾಗಿತ್ತು. ಇದೀಗ ಶಾರ್ಟ್ ಸರ್ಕ್ಯೂಟ್‌ನಿಂದ ಹೋಟೆಲ್‌ನಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹೊತ್ತಿಯುರಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಹೊಟೇಲ್‌ವೊಂದರಲ್ಲ ನಡೆದಿದೆ. ಹೌದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಹೋಟೆಲ್‌ನಲ್ಲಿ ಏಕಾಏಕಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ಅಪಾರ ಪ್ರಮಾಣದ ವಸ್ತುಗಳು …
Read More »
BigTv News
March 11, 2026
Breaking News
ವ್ಯಕ್ತಿಯೋರ್ವನಿಗೆ ಜಾತಿ ನಿಂದನೆ ಮಾಡಿ ಹಲ್ಲೆಗೈದ ಆರೋಪದ ಮೇಲೆ ಸುಣ್ಣದಹಳ್ಳಿ ಗ್ರಾಮದ ನಾಲ್ವರು ಆರೋಪಿಗಳಿಗೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹ 1.73 ದಂಡ ವಿಧಿಸಿದ್ದಾರೆ. ಸುಣ್ಣದಹಳ್ಳಿ ಗ್ರಾಮದ ನಿವಾಸಿಗಳಾದ ಜಗದೀಶ್, ಕಾಂತರಾಜು, ನಾಗೇಶ, ಮಂಜುನಾಥ್ ಹಾಗೂ ಪ್ರೇಮ ಶಿಕ್ಷೆಗೊಳಗಾದವರು. ಸುಣ್ಣದಹಳ್ಳಿ ಗ್ರಾಮದಲ್ಲಿ ವಿ. ಆರ್ಮುಗಂ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸರ್ವೇ ಕಾರ್ಯ …
Read More »
BigTv News
March 11, 2026
Breaking News
ಕುಂದಾಪುರ: ಹೆಮ್ಮಾಡಿಯ ಕಬ್ಬೈಲು ಎಂಬಲ್ಲಿನ ಮನೆಯೊಂದರಲ್ಲಿ ಕನ್ಯಾನ ಗ್ರಾಮದ ನಿವಾಸಿ ಕೊರಗ ಸಮುದಾಯದ ನಾಗ (65) ಅವರನ್ನು ಕಳೆದ 30 ವರ್ಷಗಳಿಂದ ಜೀತದಾಳಾಗಿಸಿ, ಸಂಬಳವೂ ಕೊಡದೇ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಹೆಮ್ಮಾಡಿಯ ಕಬ್ಬೈಲಿನ ಸುಬ್ಬಣ್ಣ ಶೆಟ್ಟಿ ಹಾಗೂ ಅವರ ಅನಂತರ ಅವರ ಪುತ್ರಿ ರಜನಿ ಶೆಟ್ಟಿ ಹಾಗೂ ಪತಿ ಕರುಣಾಕರ ಶೆಟ್ಟಿ ವಿರುದ್ಧ ದೂರು ನೀಡಿದ್ದು, ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದನ ಕಾಯಲು, …
Read More »
BigTv News
March 11, 2026
Breaking News
ಮಂಗಳೂರು: ಅನ್ನೋಡಿ ಎಂಬಲ್ಲಿ ಫಲ್ಗುಣಿ ನದಿ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕುತ್ತಿಗೆಗೆ ಶೂ ಲೇಸ್ ನಿಂದ ಬಿಗಿದು ಇನ್ನೊಂದು ಬದಿಯನ್ನುಇಂಟರ್ ಲಾಕ್ ಕಲ್ಲಿಗೆ ಬಿಗಿದು ಕಟ್ಟಲಾಗಿದೆ. ಮೃತದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಲ ಕೈಯಲ್ಲಿ ಶಿಲುಬೆ ಚಿಹ್ನೆ, ಹಾರ್ಟ್ ಗುರುತು ಹಾಗೂ ಒಳಗೆ ಇಂಗ್ಲಿಷ್ ನಲ್ಲಿ ‘ಆರ್’ ಎಂದು …
Read More »
BigTv News
March 11, 2026
Breaking News
ಹುಬ್ಬಳ್ಳಿ | ಮನೆಯಿಂದ ಹೊರಹೋದ ಜೀವದ ಗೆಳೆಯರು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘೋರ ದುರಂತ ಹುಬ್ಬಳ್ಳಿಯ ನವನಗರದ ಆರ್‌ಎನ್ ಶೆಟ್ಟಿ ಗಲ್ಫ್ ಗ್ರೌಂಡ್ ಬಳಿ ನಡೆದಿದೆ. ಬೈರಿದೇವರಕೊಪ್ಪದ ರೇಣುಕಾ ನಗರದ ಸಮರ್ಥ (17) ಹಾಗೂ ಹರೀಶ (17) ಮೃತ ದುರ್ದೈವಿಗಳು. ಒಂದೇ ಕಾಲೋನಿಯಲ್ಲಿ ವಾಸಿಸುತ್ತಿದ್ದ ಗೆಳೆಯರು, ಮನೆಯ ಬಳಿ ಯಲ್ಲಮ್ಮನ ಪೂಜೆ ತಯಾರಿಗೆ ತೆರಳಿ ಪೂಜೆಯ ಕೆಲಸ ಕಾರ್ಯದಲ್ಲಿ ಭಾಗಿಯಾಗಿದ್ದರು. ಆ ಬಳಿಕ ಮಧ್ಯಾಹ್ನ ನಂತರ ಈಜಲು ತೆರಳಿದ್ದ ಬಾಲಕರು, …
Read More »
BigTv News
March 11, 2026
Breaking News
ತುಮಕೂರು: ಎರಡು ವರ್ಷದ ಕಂದಮ್ಮನ ಜೊತೆ ತಾಯಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಈ ಘಟನೆ ನಡೆದಿದೆ. ಗಂಗಾಮಣಿ(30), ಪ್ರೇಕ್ಷಾ (2) ಮೃತರು.ತಾಯಿ ಮಗು ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಾಮಣಿ ಅವರಿಗೆ ಗರ್ಭಕೋಶದ ಸಮಸ್ಯೆಯಿತ್ತು. ಇದರಿಂದ ಮನನೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಗಂಗಾಮಣಿ ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ …
Read More »
BigTv News
March 11, 2026
Breaking News
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಹಲವು ಹಳೆಯ ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಉದ್ದೇಶಪೂರ್ವಕ ಘಟನೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರ್ಯಾಲಯದ ಸಭಾಂಗಣ ಆವರಣ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಹೊಸಪೇಟೆ ತಹಸೀಲ್ದಾರ್ ಶೃತಿ ಹಾಗೂ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯನಾ …
Read More »