Breaking News

ಸಂಬಳ‌ ಕೊಡದೆ ದೌರ್ಜನ್ಯ : ಕೇಸು

ಕುಂದಾಪುರ: ಹೆಮ್ಮಾಡಿಯ ಕಬ್ಬೈಲು ಎಂಬಲ್ಲಿನ ಮನೆಯೊಂದರಲ್ಲಿ ಕನ್ಯಾನ ಗ್ರಾಮದ ನಿವಾಸಿ ಕೊರಗ ಸಮುದಾಯದ ನಾಗ (65) ಅವರನ್ನು ಕಳೆದ 30 ವರ್ಷಗಳಿಂದ ಜೀತದಾಳಾಗಿಸಿ, ಸಂಬಳವೂ ಕೊಡದೇ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಹೆಮ್ಮಾಡಿಯ ಕಬ್ಬೈಲಿನ ಸುಬ್ಬಣ್ಣ ಶೆಟ್ಟಿ ಹಾಗೂ ಅವರ ಅನಂತರ ಅವರ ಪುತ್ರಿ ರಜನಿ ಶೆಟ್ಟಿ ಹಾಗೂ ಪತಿ ಕರುಣಾಕರ ಶೆಟ್ಟಿ ವಿರುದ್ಧ ದೂರು ನೀಡಿದ್ದು, ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದನ ಕಾಯಲು, ತೋಟದ ಕೆಲಸ ಮಾಡಲು ನಾಗ ಅವರು ಈ ಮನೆಗೆ ಸೇರಿಕೊಂಡಿದ್ದು, ದನ,ಎಮ್ಮೆ ಸೆಗಣಿ ತೆಗೆದು, ಮನೆಯ ಶೌಚಾಲಯ ಸ್ವಚ್ಛತೆ, ಮಾಡಿಸಿಕೊಳ್ಳುತ್ತಿದ್ದರು. ದನದ ಕೊಟ್ಟಿಗೆಯಲ್ಲಿಯೇ ವಾಸ ಸ್ಥಳವಾಗಿ ನೀಡಿದ್ದು, ತಿಂಡಿ, ತಟ್ಟೆ, ಬಟ್ಟೆ ಎಲ್ಲ ಅಲ್ಲಿಯೇ ಇಡುವಂತೆ ಒತ್ತಾಯಿಸುತ್ತಿದ್ದರು. ಊಟ ಸಹ ಬಾಳೆ ಎಲೆಯಲ್ಲಿ ಅಲ್ಲಿಯೇ ಮಾಡಬೇಕಿತ್ತು. 30 ವರ್ಷಗಳಿಂದ ಬಲವಂತವಾಗಿ ಜೀತದಾಳಾಗಿಸಿ ದೌರ್ಜನ್ಯ ಎಸಗಿರುಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *