Breaking News

ನಿಮ್ಮ ಪುಂಗಿ ನಮ್ಮ ಕಡೆ ನಡಿಯೋದಿಲ್ಲ ಗಣೇಶ ಮಂಡಳಿಗಳಿಗೆ ಇಸ್ಪೆಕ್ಟರ್ ಸಜ್ಜನ ಎಚ್ಚರಿಕೆ

ಹುಬ್ಬಳ್ಳಿ : ನಾವು ನಮ್ಮ ಪುಂಗಿ ಊದುತ್ತೇವೆ , ನಮ್ಮ ಪುಂಗಿ ಮುಂದ ನಿಮ್ಮ ಪುಂಗಿ ನಡಿಯೋದಿಲ್ಲ ಗಣೇಶ ಮಂಡಳಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸ್ ಅಧಿಕಾರಿ ಸಜ್ಜನರ ವಿಡಿಯೋ ವೈರಲ್ ಆಗಿದೆ ನಗರದ ಬೆಂಡಿಗೇರಿ ಪೊಲೀಸ ಠಾಣೆಯ ಇನ್ಸ್‌ಪೆಕ್ಟರ್ ಸಜ್ಜನರ ಅವರು ತಮ್ಮದೆ ಆದ ಶೈಲಿಯಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಹಚ್ಚಲು ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆ ನೀಡಿರುವ ಇನ್ಸ್‌ಪೆಕ್ಟರ್ ಸಜ್ಜನರ ಅವರು , ಪರೋಕ್ಷವಾಗಿ ಪೊಲೀಸರ ಎದುರು ಯಾರೂ ಏನೂ ನಡೆಯೋದಿಲ್ಲ ಎಂದು ಹೇಳಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *