Breaking News

Breaking News

ಕಾಲು ಟಚ್ ಆಗಿದ್ದಕ್ಕೆ ಕೊಲೆ ಕೇಸ್.. ಇಬ್ಬರ ಅರೆಸ್ಟ್..

ಬೆಂಗಳೂರು : ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಬಸವೇಶ್ವರ ನಗರದಲ್ಲಿ ನಡೆದಿದ್ದ ಕೊಲೆ ಕೇಸ್ ನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಸವೇಶ್ವರನಗರದ ಹೋಟೆಲ್ ನಲ್ಲಿ ಕೊಲೆ ಪ್ರಕರಣ ಸಂಬಂಧ ಮಂಜುನಾಥ್, ಭಾಗ್ಯರಾಜ್ ಎಂಬುವರ ಬಂಧನವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮಾ.2ರ ರಾತ್ರಿ ಶಶಿಕುಮಾರ್ ಎಂಬಾತನ ಕೊಲೆಯಾಗಿತ್ತು. ಮೊದಲಿಗೆ ಕಾಲು ಟಚ್ ಆದ ವಿಚಾರಕ್ಕೆ ಜಗಳ ನಡೆದಿತ್ತು. ಶಶಿಕುಮಾರ್ & ಮಂಜುನಾಥ್ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ಮನೆಯಿಂದ ತಮ್ಮ …

Read More »

ಲಂಚ ಪಡೆಯುತ್ತಿದ್ದ ಜಿಬಿಎ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಂಗಳೂರು: 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಬಿಎ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾವಲು ಬೈರಸಂದ್ರ ವಿಭಾಗದ ಸ್ಯಾನಿಟರಿ ಸೂಪರ್ ವೈಸರ್ ಎಂ. ನಾಗರಾಜು(39) ಬಂಧಿತರು. ಆರ್.ಟಿ. ನಗರ ಸಮೀಪ ಆದರ್ಶ ನಗರ ನಿವಾಸಿ ಅಬ್ದುಲ್ ರೆಹಮಾನ್ ಎಂಬುವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗರಾಜು ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ದೂರುದಾರ ಅಬ್ದುಲ್ ರೆಹಮಾನ್ ಅವರಿಗೆ ಸೇರಿದ ರಸ್ತೆ ಕತ್ತರಿಸುವ ಚಿಪ್ಪಿಂಗ್ ಯಂತ್ರವನ್ನು …

Read More »

ಲಾರಿ ಚಕ್ರಕ್ಕೆ ಸಿಲುಕಿದ ಬೈಕ್: ಸವಾರ ಸ್ಥಳದಲ್ಲೇ ಸಾವು

ನೆಲಮಂಗಲ: ಬೈಕ್‌ ಆಯತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ತಾಳೇಕೆರೆ ಗ್ರಾಮದ ಬೆಂಗಳೂರು-ತುಮಕೂರು ರಸ್ತೆಯಲ್ಲಿ ನಡೆದಿದೆ. ಜಾರ್ಖಂಡ್‌ ಮೂಲದ ಮೋಹನ್‌ ಪಂಡಿತ್‌ (27) ಮೃತ ದುರ್ದೈವಿ. ಫೈರ್‌ ಯಂತ್ರ ಅಳವಡಿಕೆ ಕೆಲಸ ಮಾಡುತ್ತಿದ್ದನು. ಈತ ಬುಧವಾರ ಬೆಳಗ್ಗೆ ನೆಲಮಂಗಲದ ಲ್ಯಾಂಕೋ ಟೋಲ್‌ ಕಡೆಯಿರುವ ಗೋದಾಮಿನಲ್ಲಿ ಯಂತ್ರ ಅಳವಡಿಕೆ ಕೆಲಸ ಮುಗಿಸಿಕೊಂಡು ದಾಬಸ್‌ಪೇಟೆಗೆ ಬರುವಾಗ ತಾಳೆಕೆರೆ ಸಮೀಪ ಬೈಕ್‌ ಆಯತಪ್ಪಿಆದ ಪರಿಣಾಮ …

Read More »

₹1.61 ಕೋಟಿ ವಂಚನೆ; ಮೂವರ ವಿರುದ್ಧ ಪ್ರಕರಣ ದಾಖಲು

ಕೋಟ: ಬ್ರಹ್ಮಾವರದ ಕ್ಯಾಶ್ಯೂ ಇಂಡಸ್ಟ್ರೀಸ್‌ನಲ್ಲಿ 1.61 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ. ಶಿರಿಯಾರ ನಿವಾಸಿ ಎಸ್. ಯೋಗೀಶ್‌ ವಂಚನೆಗೊಳಗಾದವರು. ಇವರು ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕರಾಗಿದ್ದು, ಸಂಸ್ಥೆಯಲ್ಲಿ ತೆಂಗಿನ ಕಾಯಿ, ಕೊಬ್ಬರಿ ಹಾಗೂ ಅಡುಗೆ ಎಣ್ಣೆ ಖರೀದಿ-ಮಾರಾಟ ಮತ್ತು ಗೇರು ಬೀಜ ಸಂಸ್ಕರಣೆ ಕಾರ್ಯ ನಡೆಸುತ್ತಿದ್ದರು. ಸಂಸ್ಥೆಯಲ್ಲಿ ಲೆಕ್ಕಪತ್ರ ನಿರ್ವಹಣೆ ಹಾಗೂ ದಾಸ್ತಾನು ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದ ರತೀಶ್‌ ತನ್ನ ಸ್ನೇಹಿತರಾದ ರಾಜೇಶ್‌ ಮತ್ತು …

Read More »

ಬೀದರ್‌ನಲ್ಲಿ ಹೈಡ್ರಾಮಾ: ಠಾಣೆ ಮುಂದೆ ಗಲಾಟೆ, 20 ಜನ ಬಂಧನ!

ಬೀದರ್‌: ಜಿಲ್ಲೆಯಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಠಾಣೆ ಮುಂದೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಈ ಪ್ರಕರಣದಲ್ಲಿ ದಾಖಲಾದ 49 ಆರೋಪಿಗಳ ಪೈಕಿ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಎದುರು ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನ ಸೇರಿದಂತೆ ಇಲಾಖೆಯ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕಲ್ಲು ತೂರಾಟದಿಂದ ಡಿಎಆರ್ ವಾಹನಕ್ಕೂ ಹಾನಿ ಉಂಟಾಗಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ …

Read More »

₹10,000 ಲಂಚ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪಾಲಿಕೆ ಸಿಬ್ಬಂದಿ ಬಂಧನ

ಬೆಂಗಳೂರು: ಗುತ್ತಿಗೆದಾರರೊಬ್ಬರಿಂದ ₹10,000 ಲಂಚ ಪಡೆಯುತ್ತಿದ್ದ ವೇಳೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪಾಲಿಕೆಯ ಸ್ಯಾನಿಟರಿ ಸೂಪರ್‌ವೈಸರ್‌ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ನಗರದ ಕಾವಲ್‌ ಬೈರಸಂದ್ರದ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಅಬ್ದುಲ್‌ ರೆಹಮಾನ್‌ ಅವರು ರಸ್ತೆ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಅಲ್ಲಿದ್ದ ಚಿಪ್ಪಿಂಗ್‌ ಯಂತ್ರವನ್ನು ನಗರ ಪಾಲಿಕೆಯ ಆರೋಗ್ಯ ವಿಭಾಗದ ಸ್ಯಾನಿಟರಿ ಸೂಪರ್‌ವೈಸರ್‌ ಎಂ.ನಾಗರಾಜ ಅವರು ಅನಧಿಕೃತವಾಗಿ ಜಪ್ತಿ ಮಾಡಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಯಂತ್ರವನ್ನು ಬಿಡುಗಡೆ …

Read More »

ಬೈಕ್-ಕಾರ್ ಮುಖಾಮುಖಿ ಡಿಕ್ಕಿ: ಗದಗದಲ್ಲಿ ಮೂವರು ಸವಾರರು ದುರ್ಮರಣ

ಗದಗ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು ಜಂತಲಿ ಗ್ರಾಮದ ಶಿವು ಪಾಟ್ಲಿ (28), ಆನಂದ ಲಕ್ಷ್ಮೇಶ್ವರಮಠ (30) ಹಾಗೂ ಮುತ್ತು ಮುದುಗಣ್ಣವರ್ (30) ಎಂದು ಗುರುತಿಸಲಾಗಿದೆ. ಮುಂಡರಗಿಯಿಂದ ಜಂತ್ಲಿಶಿರೂರು …

Read More »

5 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ: ನಕಲಿ ಪತ್ರಕರ್ತ ಅರೆಸ್ಟ್

ಹಾವೇರಿ: 5 ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ ಅತ್ಯಾಚಾರ ಎಸಗಿದ ಬಳಿಕ ಖಾಸಗಿ ಕ್ಷಣದ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ನಕಲಿ ಪತ್ರಕರ್ತನನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.ದೀಪಕ್ ಉಪಳೆ ಬಂಧಿತ ಆರೋಪಿ. ಮಹಿಳೆಗೆ 5 ಲಕ್ಷ ರೂ ಸಾಲ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಲಾಡ್ಜ್ ಸೇರಿದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ. …

Read More »

ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 3.15 ಲಕ್ಷ ರೂ. ದೋಚಿದ ಖದೀಮ

ರಾಣೆಬೆನ್ನೂರ: ಪರಿಚಯದವರಂತೆ ಮಾತನಾಡಿಸಿದ ಖದೀಮನೊಬ್ಬ ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 3.15 ಲಕ್ಷ ರೂ.ಅನ್ನು ದೋಚಿರುವ ಟನೆ ನಗರದ ಯೂನಿಯನ್ ಬ್ಯಾಂಕ್ ಎದುರು ಗುರುವಾರ ನಡೆದಿದೆ. ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ಯುವಕ ಪ್ರವಿಣ ಕೊಂಡಜ್ಜಿ ಎಂಬುವರ ಹಣ ದೋಚಿರುವುದು. ಇವರು ಬ್ಯಾಂಕಿನ ವ್ಯವಹಾರ ಸಲುವಾಗಿ 3.15 ಲಕ್ಷ ರೂ. ತೆಗೆದುಕೊಂಡು ಸ್ಕೂಟಿಯ ಡಿಕ್ಕಿಯಲ್ಲಿಟ್ಟುಕೊಂಡು ಬಂದಿದ್ದರು. ಬ್ಯಾಂಕ್ ಎದುರು ಹಣವನ್ನು ಡಿಕ್ಕಿಯಿಂದ ಹೊರಗೆ ತೆಗೆದು ನೋಡಿ ಮತ್ತೇ ಅದರಲ್ಲಿಯೆ ಇಟ್ಟಿದ್ದರು. ಇದನ್ನು ಗಮನಿಸಿದ ಖದೀಮ …

Read More »

ಆಂಧ್ರಪ್ರದೇಶ : ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು

ಕೋಲಾರ: ತಿರುಪತಿ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ-ಪಲಮನೇರು ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಪಲಮನೇರು ತಾಲೂಕಿನ ಗಂಗಾವರಂ ಹೋಬಳಿಯ ವೈಎಸ್‌ಆರ್ ಜಂಕ್ಷನ್ ಸಮೀಪ ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ರಾಜಾಜಿನಗರ ನಿವಾಸಿಗಳಾದ ಮೋಹನ್ ದಾಸ್ (70), …

Read More »