Breaking News

Breaking News

ಸಂಬಂಧಿಯಿಂದಲೇ ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಕಿರಾತಕ

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕುಟುಂಬದೊಂದಿದೆ 7 ವರ್ಷದ ಬಾಲಕಿ ಮನೆಯಲ್ಲಿ ನಿದ್ರೆಗೆ ಜಾರಿದ್ದಳು. ಸಂಬಂಧಿಕನೇ ಆಗಿರುವ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆ ಮನೆಯಿಂದ ಅಪಹರಿಸಿದ್ದಾನೆ. ಮಲಗಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿದ್ದು, ಸಮೀಪವೇ ಇರುವ ಇಂದಿರಾ ಸಾಗರ್ ಕಾಲುವೆಬಳಿ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಬಾಲಕಿ ಕುರುಚಾಡುತ್ತಿದ್ದಂತೆ ಆಕೆಯನ್ನು ಹೊಡೆದು ಕಾಲುವೆಗೆ ಎಸೆದು ಎಸ್ಕೇಪ್ ಆಗಿದ್ದಾನೆ. ಬಾಲಕಿ …

Read More »

ಬೆಂಗಳೂರು| ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕಳ್ಳತನ: ಆರೋಪಿಯ ಬಂಧನ

ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕಳ್ಳತನದ ಆರೋಪದಲ್ಲಿ ಜೀವನ್ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಚಿನ್ನಾಭರಣ ಹಾಗೂ ನಗದು ಸೇರಿದಂತೆ ಅಂದಾಜು ಒಂದು ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಚಂದನ್ ರೌಲ್ ಬಂಧಿತ ಆರೋಪಿ. ಸಾಫ್ಟ್‌ವೇರ್‌ ಉದ್ಯೋಗಿಗಳಾಗಿದ್ದ ಅಮೆರಿಕದ ಮೆರಿಯಲ್ ಮೊರೆನೋ ದಂಪತಿ ನಗರದಲ್ಲಿರುವ ಕೋಡಿಹಳ್ಳಿಯ ರುಸ್ತುಂಭಾಗ್ ಮುಖ್ಯರಸ್ತೆಯ ವಿಲ್ಲಾವೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ಅದೇ ಮನೆಯಲ್ಲಿ ಚಂದನ್ ರೌಲ್ ಕೆಲಸ ಮಾಡುತ್ತಿದ್ದ. …

Read More »

ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಎರಡು ಟ್ರಕ್​ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವದಹನವಾಗಿದ್ದಾರೆ. ಕತಿಪುಡಿ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಹೆಚ್ಚು ವಾಹನಗಳು ಓಡಾಡುವ ಹೆದ್ದಾರಿ, ಪಕ್ಕದ ರಸ್ತೆಯಿಂದ ಟ್ರಕ್​ ಒಂದು ಯೂಟರ್ನ್​ ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹರಡುವ ಮೊದಲೇ ಓರ್ವ ಚಾಲಕ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ಟ್ರಕ್​ನಲ್ಲಿದ್ದ ಚಾಲಕನಿಗೆ ಅದು …

Read More »

ರಾಯಚೂರು – ಕೌಟುಂಬಿಕ ಕಲಹ ನಾಲ್ಕು ತಿಂಗಳ ಗರ್ಭಿಣಿ ಸೊಸೆಯ ಕತ್ತು ಸೀಳಿ ಕೊಂದ ಮಾವ

ರಾಯಚೂರು – ಕೌಟುಂಬಿಕ ಕಲಹ ನಾಲ್ಕು ತಿಂಗಳ ಗರ್ಭಿಣಿ ಸೊಸೆಯ ಕತ್ತು ಸೀಳಿ ಕೊಂದ ಮಾವಮೃತಳನ್ನು 25 ವರ್ಷದ ರೇಖಾ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಮಾವ ಸಿದ್ದಪ್ಪ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ರೇಖಾಳ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ರೇಖಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆಯಲಾಗಿದೆ.

Read More »

ಬೆಂಗಳೂರಲ್ಲಿ ಘೋರ ದುರಂತ : ಗೇಟ್ ಮುರಿದು ಬಿದ್ದು ಸೆಕ್ಯೂರಿಟಿ ಗಾರ್ಡ್ ದುರ್ಮರಣ!

ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಗೇಟ್ ಮುರಿದುಬಿದ್ದು ಸೆಕ್ಯೂರಿಟಿ ಗಾರ್ಡ್ ಒಬ್ಬರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ವಾಯುವ್ಯ ವಿಭಾಗದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಖಾಸಗಿ ಬಿಲ್ಡಿಂಗ್ ಬಳಿ ಸ್ವಾಮಿ ಎಂಬವರು ಗೇಟ್ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಗೂಡ್ಸ್ ವೆಹಿಕಲ್ ಬಂದಿದ್ದ ವೇಳೆ ಸ್ವಾಮಿ ಗೇಟ್ ಓಪನ್ ಮಾಡಿದ್ದಾರೆ ಈ ವೇಳೆ ಸ್ಲೈಡಿಂಗ್ ಗೇಟ್ ಮುರಿದುಬಿದ್ದು ಸ್ವಾಮಿ (55) ಸ್ಥಳದಲ್ಲಿ ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »

ಬೆಳಗಾವಿ| ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ವಿವಾಹಿತ ಯುವಕ ಆತ್ಮಹತ್ಯೆ

ಎರಡನೇ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿವಾಹಿತ ಯುವಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ತಾಲ್ಲೂಕಿನ ಮಲ್ಲಾಪುರ ಗ್ರಾಮದ ಜಗದೀಶ್‌ ಯಲ್ಲಪ್ಪ ಕವಳೇಕರ (27) ಹಾಗೂ ಗಂಗಮ್ಮ ಪವಾಡೆಪ್ಪ ತ್ಯಾಪಿ (26) ಎಂದು ಗುರುತಿಸಲಾಗಿದೆ. ಜಗದೀಶ್‌ ಪತ್ನಿ ಪ್ರಥಮ ಹೆರಿಗೆಗಾಗಿ ತವರುಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದಳು. ಆಕೆ ಮರಳಿ ಬಂದ ಬಳಿಕ …

Read More »

ಚಾಮರಾಜನಗರ | ಬಸ್ ಡಿಕ್ಕಿ: ಸವಾರ ಸಾವು

ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾರೆ. ಮಲೆಯೂರು ಶಿವಸ್ವಾಮಿ (34) ಮೃತರು. ಗಾಯಗೊಂಡಿರುವ ನಾಗರಾಜು ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ತಿರುವಿನಲ್ಲಿ ಮುಕ್ಕಡಹಳ್ಳಿಗೆ ಹೋಗುವ ರಸ್ತೆಯಲ್ಲಿ ಬೆಳಿಗ್ಗೆ ಬಸ್‌ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಸ್‌ ವಶಕ್ಕೆ ಪಡೆಯಲಾಗಿದೆ.

Read More »

ಕಾರವಾರ: ಹಿಂದೂ ಮನೆಗೆ ಬೆಂಕಿ, ಮುಸ್ಲಿಂ ಯುವಕನ ಬಂಧನ!

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಹಿಂದೂ ವ್ಯಕ್ತಿಯೊಬ್ಬರ ಮನೆಗೆ ಬೆಂಕಿ ಹಚ್ಚಿದ 18 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಮಟಾ ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿನ ಜಾತ್ರೆಗೆಂದು ದಿನಕರ್ ಕುಟುಂಬ ಸಮೇತರಾಗಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.18 ವರ್ಷದ ಫೈಸಾನ್ ಜಾಫರ್ ಶೇಖ್ ಎಂಬ ಯುವಕ ವೈಯಕ್ತಿಕ ದ್ವೇಷದಿಂದ ದಿನಕರ್ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಬೆಂಕಿ ಹಚ್ಚಿದ ತಕ್ಷಣವೇ ಸ್ಥಳೀಯರ …

Read More »

ಬೆಳಗಾವಿಯಲ್ಲಿ ಪತ್ನಿ ಹೆರಿಗೆಗೆ ತೆರಳಿದಾಗ, ಹಳೆ ಪ್ರಿಯತಮೆಯ ಜೊತೆ ಪ್ರಿಯಕರ ನದಿಗೆ ಹಾರಿ ಆತ್ಮಹತ್ಯೆ

ಪತ್ನಿ ಹೆರಿಗೆಗೆ ತೆರಳಿದಾಗ ಹಳೆ ಪ್ರಿಯತಮೆಯ ಜೊತೆ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪುರ ಎಂಬಲ್ಲಿ ನಡೆದಿದೆ. ಹಳೆ ಪ್ರಿಯತಮೆ ಜೊತೆಗೆ ಮಲಪ್ರಭಾ ನದಿಗೆ ಹಾರಿ ಜಗದೀಶ್ ಕವಳೇಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಲ್ಲಾಪುರ ಗ್ರಾಮದ ಜಗದೀಶ್ ಕವಳೇಕರ್ (27) ಹಾಗು ಗಂಗಮ್ಮ (26) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲಿಂದಲೂ ಗಂಗಮ್ಮ ಮತ್ತು ಜಗದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಪತ್ನಿ ಹೆರಿಗೆಗೆ ತವರಿಗೆ ತೆರಳಿದ ನಂತರ ಪ್ರಿಯತಮೆಯ ಜೊತೆಯ …

Read More »

ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

ಬೆಳಗಾವಿ ಜಿಲ್ಲೆ: ಪಟ್ಟಣದ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಶೇಖರ ಮುರಟಗಿ ₹80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ‘ಭೂ ದಾಖಲೆ ಸಂಬಂಧಿಸಿದ ಕೆಲಸಕ್ಕೆ ₹ 1 ಲಕ್ಷ ನೀಡುವಂತೆ ರೈತ ಶಿವಾನಂದ ದುಂಡಗಿ ಅವರಿಗೆ ಆರೋಪಿಯು ಬೇಡಿಕೆ ಇಟ್ಟಿದ್ದರು. ₹80 ಸಾವಿರ ಲಂಚ ಪಡೆಯುವಾಗ ಕಾರ್ಯಾಚರಣೆ ನಡೆಸಿ, ಬಂಧಿಸಿದೆವು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ ಕಚೇರಿಯ ಕೆಲ ದಾಖಲೆಗಳನ್ನು ಪರಿಶೀಲಿಸಿದ್ದು, ಮ್ಯೂಟೇಷನ್, ಪಹಣಿ ತಿದ್ದುಪಡಿ …

Read More »