Breaking News

Breaking News

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಮೃತ್ಯು

ಹನೂರು: ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ. ಬೆಂಗಳೂರು ಮೂಲದ ಲಗ್ಗೆರೆ ನಿವಾಸಿ ಗಣೇಶ್ ಮೃತ ದುರ್ದೈವಿ. ಮೃತ ಗಣೇಶ್ ಹಾಗೂ ಸ್ನೇಹಿತ ನಾಗರಾಜು ಶುಕ್ರವಾರ ಮುಂಜಾನೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹನೂರಿನಿಂದ ಕೊಳ್ಳೇಗಾಲಕ್ಕೆ ಹೋಗುತ್ತಿದ್ದ ಅಪರಿಚಿತ ವಾಹನವೊಂದು ಪಟ್ಟಣದ ಹೊರ …

Read More »

ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಲೂಥ್ರಾ ಸಹೋದರರ ಕಚೇರಿ, ನಿವಾಸದ ಮೇಲೆ ED ದಾಳಿ

ಪಣಜಿ/ನವದೆಹಲಿ: ಕಳೆದ ತಿಂಗಳು ಅಗ್ನಿ ದುರಂತ ಸಂಭವಿಸಿದ ‘ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್’ನ ಮಾಲೀಕರಾದ ಲೂಥ್ರಾ ಸಹೋದರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು (ಇ.ಡಿ), ಇಂದು ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ನೈಟ್‌ ಕ್ಲಬ್‌ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಹಾಗೂ ಸಹ-ಮಾಲೀಕ ಅಜಯ್ ಗುಪ್ತಾ ಅವರ ಕಚೇರಿಗಳು …

Read More »

ದಾಂಡೇಲಿ| ಕಾಡುಪ್ರಾಣಿಗಳ ಮಾಂಸ ಸಾಗಾಟ: ಬಂಧನ

ನಗರದ ಬರ್ಚಿ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮಾಲು ಸಹಿತ ದ್ವಿಚಕ್ರ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಗುರುವಾರ ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಕೇರವಾಡದ ನಿವಾಸಿ ರಾಜು ಮಂಜು ಪೋತದಾರ ಎಂಬಾತ ತಮ್ಮ ದ್ವಿಚಕ್ರ ವಾಹನದಲ್ಲಿ ಕಾಡುಪ್ರಾಣಿಯ ಮಾಂಸ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಪರಿಶೀಲಿಸಿದಾಗ ವಿಸಯ ಗೊತ್ತಾಗಿದೆ. ತಕ್ಷಣವೇ …

Read More »

ಉಡುಪಿ | ಟ್ರಕ್ಕಿನ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

ಟ್ರಕ್ಕಿನ ಚಕ್ರದಡಿ ಸಿಲುಕಿ ಬೈಕ್ ಸವಾರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಉಪ್ಪೂರು ಕೆ.‌ಜಿ ರೋಡ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.ಚಕ್ರದಡಿ ಸಿಲುಕಿದ ಬೈಕ್ ಸವಾರನ ದೇಹವು ಛಿದ್ರಗೊಂಡಿದ್ದು, ದೇಹದಿಂದ ರುಂಡ ಬೆರ್ಪಟ್ಟು ಚಕ್ರದಡಿ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ.ಮೃತ ಸವಾರ‌ ಬ್ರಹ್ಮವಾರ ಮಟಪಾಡಿಯ ನಿವಾಸಿ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಬ್ರಹ್ಮಾವರ ಆರಕ್ಷಕ ಠಾಣೆಯ‌ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು. ಶವತೆರವು ಹಾಗೂ …

Read More »

ಕಳ್ಳರ ಸಂಚಾರ ಸಿಸಿ ಟಿವಿಯಲ್ಲಿ ದಾಖಲು

ರಬಕವಿ/ಬನಹಟ್ಟಿ : ನಗರದ ವಿದ್ಯಾನಗರ ಹಾಗೂ ಬಸವನಗರ ಪ್ರದೇಶಗಳಲ್ಲಿ ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರ ಗುಂಪು ಸಂಚರಿಸಿದ್ದು, ಸಿಸಿ ಕ್ಯಾಮರಾಗಳಿಗೆ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ. ಸಿಸಿ ಟಿವಿಯಲ್ಲಿ ಕಳ್ಳರು ಲಾಂಗು ಹಾಗೂ ಮಚ್ಚುಗಳೊಂದಿಗೆ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿವೆ. ಶಿವದಾಶಿಮಯ್ಯ ಸಮುದಾಯ ಭವನದ ಎದುರಿನ ಮನೆಯಲ್ಲಿ ಕಳ್ಳತನ ಯತ್ನದ ವೇಳೆ ಪಕ್ಕದ …

Read More »

ಬಸ್-ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದುರ್ಮರಣ

ಉಡುಪಿ: ಬಸ್ ಹಾಗೂ ಕ್ರೂಸರ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಉಡುಪಿಯ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.8 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಅಳ್ನಾವರ | ಕಾಡು ಹಂದಿ ಮಾಂಸ ಸಾಗಣೆ; ಆರೋಪಿ ಬಂಧನ

ಪಟ್ಟಣಕ್ಕೆ ಹೊಂದಿಕೊಂಡಿರುವ ರಾಜ್ಯ ಹೆದ್ದಾರಿಯ ಡೌಗಿ ಹಳ್ಳ ಸೇತುವೆಯ ಬಳಿ ಕಾಡು ಹಂದಿಯನ್ನು ಬೇಟೆಯಾಡಿ, ಮಾಂಸವನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಇಲ್ಲಿನ ಸಂಜು ಈಶಂತ ರೊಡ್ರಿಗ್ಸ್ ಬಂಧಿತ ಆರೋಪಿ. ಆತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಶೇಖ್‌ ಅಬ್ದುಲ್ ಅಲೀಮ್‌ ಸಿದ್ಧಿಕಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್., ಅವರ …

Read More »

ಧಾರವಾಡ | ಕಳ್ಳರ ಬಂಧನ; 9 ಬೈಕ್‌ ವಶ

ಧಾರವಾಡ: ಬೈಕ್‌ ಕಳ್ಳರಿಬ್ಬರನ್ನು ಬಂಧಿಸಿ ಒಂಬತ್ತು ಬೈಕ್‌ಗಳನ್ನು (₹ 3.65 ಲಕ್ಷ ಮೌಲ್ಯ) ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹುಬ್ಬಳ್ಳಿಯ ಹೂವಪ್ಪ (49) ಹಾಗೂ ಪುಂಡಲೀಕ (43) ಬಂಧಿತರು. ಉಪನಗರ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿ ಕಳ್ಳರನ್ನು ಹಿಡಿದಿದ್ದಾರೆ.ಧಾರವಾಡ, ಹುಬ್ಬಳ್ಳಿ, ಹಾವೇರಿ, ಗೋವಾ ಸಹಿತ ವಿವಿಧೆಡೆ ಕದ್ದಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ‘ಬೈಕ್‌ಗಳನ್ನು ಕದ್ದು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದರು. ರಸ್ತೆ ಬದಿ ನಿಂತಿದ್ದ ಬೈಕ್‌ ಕದಿಯುವ ಚಾಲಾಕಿತನ ರೂಢಿಸಿಕೊಂಡಿದ್ದರು. ನಗರದ ಜರ್ಮನ್‌ ಆಸ್ಪತ್ರೆ ವೃತ್ತದಲ್ಲಿ …

Read More »

ಬೇಲೂರು | ತಹಶೀಲ್ದಾರ್ ಕಿರುಕುಳ ಆರೋಪ: ಶಿರಸ್ತೇದಾರ ಆತ್ಮಹತ್ಯೆ ಯತ್ನ

ಬೇಲೂರು (ಹಾಸನ): ‘ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಇಲ್ಲಿನ ತಾಲ್ಲೂಕು ಕಚೇರಿಯ ಶಿರಸ್ತೇದಾರ ತನ್ವೀರ್ ಅಹಮ್ಮದ್ ಅವರು ಗುರುವಾರ ಮಧ್ಯಾಹ್ನ ಮಧುಮೇಹದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಸಹೋದ್ಯೋಗಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. 15 ದಿನಗಳಿಂದ ತಹಶೀಲ್ದಾರ್ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಅನಾರೋಗ್ಯವಿದೆ ಎಂದರೂ ಜನಗಣತಿ ಮೇಲ್ವಿಚಾರಣೆಯ ಹೆಚ್ಚುವರಿ ಕೆಲಸ ನೀಡಿದ್ದಾರೆ. ನೊಂದು 5 ಮಾತ್ರೆಗಳನ್ನು ಒಟ್ಟಿಗೇ ಸೇವಿಸಿದ್ದೆ’ ಎಂದು ಅವರು ತಿಳಿಸಿದರು. ‘ಬೇರೆ …

Read More »

ಉಡುಪಿ: ಸಿವಿಲ್ ಇಂಜಿನಿಯರ್‌ಗೆ 6.35 ಲಕ್ಷ ರೂ. ಆನ್‌ಲೈನ್ ವಂಚನೆ ; ಪ್ರಕರಣ ದಾಖಲು

ಅಪರಿಚಿತರು ಸಿವಿಲ್ ಇಂಜಿನಿಯರೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕರಂಬಳ್ಳಿಯ ಸಿವಿಲ್ ಇಂಜಿನಿಯರ್ ಚೇತನ್ ಕುಮಾರ್ (39) ಎಂಬವರ ಎರಡು ಬ್ಯಾಂಕ್ ಖಾತೆಗಳಿಂದ ಜ.20 ರಂದು ರಾತ್ರಿ ಹಂತ ಹಂತವಾಗಿ ಒಟ್ಟು 6,35,900ರೂ.ಹಣವು ಅವರಿಗೆ ತಿಳಿಯದೇ ಬೇರೆ ಖಾತೆಗೆ ವರ್ಗಾವಣೆ ಯಾಗಿರುವುದಾಗಿ ದೂರಲಾಗಿದೆ. ಚೇತನ್ ಕುಮಾರ್ ಮೊಬೈಲ್‌ಗೆ ಬ್ಯಾಂಕ್‌ನಿಂದ ಬಂದ ಸಂದೇಶದಿಂದ ಈ …

Read More »