Breaking News

ಅವ್ರು ‘ಸುಳ್ಳಿನ ಮಷಿನ್’ ಇದ್ದಂತೆ, AK-47 ನಿಂದ ಗುಂಡು ಹಾರಿಸಿದಂತೆ ಸುಳ್ಳು ಹೇಳ್ತಾರೆ’

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ರಾಹುಲ್ ಗಾಂಧಿ ಹೆಸರನ್ನು ಬಳಸದೇ, ವಾಗ್ದಾಳಿ ನಡೆಸಿದ ಮೋದಿ, ಅವರೊಬ್ಬ ‘ಸುಳ್ಳಿನ ಯಂತ್ರ’. ಕೆಲವು ನಾಯಕರು ಸುಳ್ಳು ಹೇಳುವುದರಲ್ಲಿ ಮಷಿನ್​​ ಇದ್ದಂತೆ ಇರುತ್ತಾರೆ. ಬಾಯಿ ಬಿಟ್ಟರೆ ಎಕೆ47 ರೀತಿಯಲ್ಲಿ ಸುಳ್ಳನ್ನು ಹೊರ ಹಾಕುತ್ತಾರೆ ಎಂದು ಆರೋಪಿಸಿದರು. ಇನ್ನೂ ತಮಾಷೆಯಾಗಿ ಮಾತನಾಡಿ ಮೋದಿ, ‘ಸುಳ್ಳು ಹೇಳಿದ್ದು ಯಾರಿಗೆ ತಿಳಿಯದಂತೆ ಮಾಡಲು ಪಕ್ಷದ ಕಾರ್ಯಕರ್ತರ ಸಲಹೆ ಕೂಡ ಪಡೆದುಕೊಳ್ಳುತ್ತಾರೆ. ಅಲ್ಲದೇ ಬಿಜೆಪಿ ದೇಶದ ಗುರಿಗಳನ್ನು ಬದಲಾವಣೆ ಮಾಡಲು ಹೊರಟಿದೆ. ಕೆಲವು ವಿರೋಧ ಪಕ್ಷಗಳ ನಾಯಕರು ಒಂದೇ ದಿನದಲ್ಲಿ ರಾಫೇಲ್​ ಹಗರಣ ಬಗ್ಗೆ ಅಂಕಿ-ಅಂಶಗಳನ್ನು ನೀಡಿದ್ದರು. ರಾಹುಲ್​ ಗಾಂಧಿ ಅವರು 5 ತಿಂಗಳಿನಲ್ಲಿ ಇದಕ್ಕೆ ಸಂಬಂಧಿಸಿದಂತೆ 4 ಬಾರಿ ವಿಭಿನ್ನ ಅಂಕಿ ಅಂಶಗಳನ್ನು ನೀಡಿದ್ದಾರೆ. ವಿರೋಧ ಪಕ್ಷದ ನಾಯಕರು ತಮ್ಮ ಪುತ್ರರಿಗೆ ಇದರಿಂದ ಏನಾದರೂ ಸಿಗಬಹುದು ಎಂದು ಆತನ ಬೆಂಬಲಕ್ಕೆ ನಿಂತಿದ್ದರು ಎಂದು ಆರೋಪಿಸಿದರು.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *