Breaking News

Breaking News

ಜಮ್ಮು-ಕಾಶ್ಮೀರಾದಲ್ಲಿ ಭದ್ರತಾ ಪಡೆ- ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚತ್ರೂ ಪ್ರದೇಶದ ಬಳಿ ಭಾನುವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಅಡಗಿರುವ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಸಿಕ್ಕಿತ್ತು.ಭಾರತೀಯ ಸೇನೆಯ 16 ಕಾರ್ಪ್ಸ್ ಪ್ರಕಾರ, ಈ ಪ್ರದೇಶದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲು ಪಡೆಗಳು ‘ಆಪರೇಷನ್ ಟ್ರಾಶಿ-I’ ಎಂಬ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. “ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಡೆಯುತ್ತಿರುವ ಜಂಟಿ …

Read More »

ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ಸಾವು

ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಸಮೀಪ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನ ಹರಿಪ್ರಸಾದ್(37), ಸುಜಿತ್(26) ಮೃತಪಟ್ಟ ಯುವಕರು ಎಂದು ಹೇಳಲಾಗಿದೆ. ಇಬ್ಬರು ಅವಿವಾಹಿತರಾಗಿದ್ದು, ಭಾನುವಾರ ಸ್ನಾನಕ್ಕೆ ಕುಮಾರಧಾರಾ ನದಿಯ ಬಳಿ ಬಂದಿದ್ದಾರೆ.ಕುಲ್ಕುಂದ ಸಮೀಪ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ನೆರವಿನಿಂದ ಇಬ್ಬರ …

Read More »

ಹಾಸ್ಟೆಲ್ ವಾರ್ಡನ್ ನಾಪತ್ತೆ

ಉಡುಪಿ: ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆಯಲ್ಲಿರುವ ಡಾ। ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಅನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ವಿದ್ಯಾರ್ಥಿ ನಿಲಯದ 1ನೇ ಮಹಡಿಯಲ್ಲಿ ವಾಸವಿದ್ದ ಚಿತ್ರದುರ್ಗ ಮೂಲದ ದರ್ಶನ್ ಎಸ್ (23) ಎಂಬ ವ್ಯಕ್ತಿ ಜ.12 ರಂದು ರಾತ್ರಿ 8 ಬಳಿಕ ನಾಪತ್ತೆಯಾಗಿದ್ದಾರೆ.ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಪೊಲೀಸ್ ಠಾಣೆಯ ದೂ: 0820-2520444, …

Read More »

ಸಾವಿನ ಮನೆಯಲ್ಲೂ ಲಕ್ಷಾಂತರ ದೋಚಿದ ಕಳ್ಳರು!

ಮನೆ ಕುಸಿದು ಮೃತಪಟ್ಟಿದ್ದ ಗೋಪಾಲ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಇವರ ಮನೆಯಲ್ಲಿಟ್ಟಿದ್ದ ನಗದು, 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದೆ. ವಿಜಯಲಕ್ಷ್ಮಿ ಮತ್ತು ಗೋಪಾಲ್ ಎಂಬುವರು ಆರೋಗ್ಯ ಸಮಸ್ಯೆಯಿಂದ‌ ಕಳೆದ ಎರಡು ತಿಂಗಳ ಹಿಂದೆ ಸಾವನಪ್ಪಿದ್ದರು ಗೋಪಾಲ್ ಮಗಳು ಬಾಂಬೆಗೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ಮಾಡಿದ್ದಾರೆ.ಮನೆಯ ಗೇಟ್ ಬೀಗ ಹಾಕಿದ್ದು ಕಾಂಪೌಂಡ್ ಹಾರಿ ಮನೆಯ ಬೀರುವಿನ …

Read More »

ಗಾಳಿಪಟ ಹಾರಿಸುವಾಗ ದುರಂತ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಯುವಕ ದುರ್ಮರಣ

ಬೀದರ್: ಗಾಳಿಪಟ ಹಿಡಿಯಲು ಹೋಗಿ ಯುವಕನೊಬ್ಬ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿದೆ.ವಾಂಜರಿ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಶಶಿಕುಮಾರ್ ಶಿವಾನಂದ್ (19) ಮೃತ ದುರ್ದೈವಿ. ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.ಗಾಳಿಪಟ ಹಾರಿಸುತ್ತಿದ್ದಾಗ ಏಕಾಏಕಿ ದಾರ ತುಂಡಾಗಿದೆ. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ ಆಯತಪ್ಪಿ ಯುವಕ ಕಟ್ಟಡದಿಂದ ಕೆಳಗೆ …

Read More »

ದಾವಣಗೆರೆ ಡ್ರಗ್ಸ್ ಪ್ರಕರಣ: ಮತ್ತೋರ್ವ ಉದ್ಯಮಿ ಅರೆಸ್ಟ್

ದಾವಣಗೆರೆಯಲ್ಲಿ ಮಾದಕ ವಸ್ತು, ಸಿಂಥೆಟಿಕ್ಸ್ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು ಮತ್ತೋರ್ವ ಉದ್ಯಮಿಯನ್ನು ಬಂಧಿಸಿದ್ದಾರೆ. ಶಿವರಾಜ್ ಬಂಧಿತ ಉದ್ಯಮಿ. ದಾವಣಗೆರೆಅ ವಿದ್ಯಾನಗರ ಠಾಣೆ ಪೊಲೀಸರು ಉದ್ಯಮಿ ಶಿವರಾಜ್ ನನ್ನು ಬಂಧಿಸಿದ್ದಾರೆ. ಉದ್ಯಮಿ ಶಿವರಾಜ್ ದಾವಣಗೆರೆಯ ಎಸ್.ಎಸ್. ಲೇಔಟ್ ನಿವಾಸಿ. ಈ ಹಿಂದೆ ಆರ್ ಟಿ ಒ ಕಚೇರಿಯಲ್ಲಿ ಏಜೆಂಟ್ ಆಗಿದ್ದರು. ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದರು. ಈಗಾಗಲೇ ದಾವಣಗೆರೆ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ವೀರಶೈವ ಮಹಾಸಭಾ ಸದಸ್ಯ …

Read More »

ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್‌ ಡಿಕ್ಕಿ: ಸವಾರ ಸಾವು

ಬೆಂಗಳೂರು: ಮೇಲು ಸೇತುವೆ ಮೇಲೆ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೈಯಾಲಿಕಾವಲ್ ನಿವಾಸಿ ಹರ್ಷ (31) ಮೃತ ಸವಾರ. ವೃತ್ತಿಯಲ್ಲಿ ಕಾರು ಚಾಲಕರಾಗಿರುವ ಹರ್ಷ, ಕೆಲಸದ ನಿಮಿತ್ತ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಕೊಡಿಗೇಹಳ್ಳಿ ಮೇಲು ಸೇತುವೆ ಮೇಲೆ ಹೋಗುತ್ತಿದ್ದರು.ಈ …

Read More »

ಒಂಟಿ ಮಹಿಳೆಯನ್ನು ಹತ್ಯೆಗೈದು ಹೃದಯಾಘಾತವೆಂದು ನಾಟಕವಾಡಿದ್ದ ಆರೋಪಿ ಅರೆಸ್ಟ್

ಬಾಗಲಕೋಟೆ: ಒಂಟಿ ಮಹಿಳೆ ಶವವಾಗಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಹೃದಯಾಗಾತ ಎಂದು ಆಸ್ಪತ್ರೆಗೆ ಸೇರಿಸುವ ನಾಟಕವಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನೇ ಮಹಿಳೆಯನ್ನು ಹತ್ಯೆಗೈದು, ಹೃದಯಾಘಾತ ಎಂದು ನಾಟಕವಾಡಿದ್ದ. ಆಸ್ಪತ್ರೆಗೆ ಸೇರಿಸಲು ಯತ್ನಿಸಿದ್ದ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನೇ ಕೊಲೆಗೈದಿದ್ದಾಗಿ …

Read More »

ಹೋಟೆಲ್ ಉದ್ಯಮಿಯಾಗುವ ಕನಸು ಕಂಡಿದ್ದ ಯುವಕ ನೇಣಿಗೆ ಶರಣು

ಮೂಡುಬಿದಿರೆ: ದುಬೈಯಲ್ಲಿ ಉದ್ಯೋಗಸ್ಥನಾಗಿದ್ದು ಊರಿಗೆ ಬಂದ ಬಳಿಕ ಇಲ್ಲೇ ಹೋಟೆಲ್ ಉದ್ಯಮ ನಡೆಸುವ ಕನಸು ಕಂಡಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನಾಗರಕಟ್ಟೆ ಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆಯ ಬಳಿ ಕಬ್ಬಿನ ಜ್ಯೂಸ್ ನ ಮಾರಾಟ ಮಾಡುತ್ತಿರುವ ಶ್ರೀನಿವಾಸ್ ಅವರ ಮಗ ದೀಕ್ಷಿತ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ನಾಗರಕಟ್ಟೆ ಬಳಿಯ ರಿಂಗ್ ರೋಡ್ ಹತ್ತಿರ ಹೊಟೇಲ್ ಉದ್ಯಮವನ್ನು ಆರಂಭಿಸಬೇಕೆಂದು ದೀಕ್ಷಿತ್ ಕನಸು ಕಂಡಿದ್ದು …

Read More »

ಆನ್ ಲೈನ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡಿದ್ದಕ್ಕೆ ಬುದ್ಧಿವಾದ ಹೇಳಿದ ತಂದೆ: ಪದವಿ ವಿದ್ಯಾರ್ಥಿ ಆತ್ಮಹತ್ಯೆ

ಬಾಗಲಕೋಟೆ: ಬಿಸಿಎ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆನ್ ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು, ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಜಮಖಂಡಿ ಖಾಸಗಿ ಕಾಲೇಜಿನಲ್ಲಿ ಬಿಸಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದ ರಮೇಶ್ ಬಂಟನೂರು(21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಆನ್ ಲೈನ್ ಬೆಟ್ಟಿಂಗ್ ನಿಂದಾಗಿ ಲಕ್ಷಾಂತರ ರೂಪಾಯಿ ಹಣ ಸಲಾ ಮಾಡಿಕೊಂಡಿದ್ದ. ಮಗ ಮಾಡಿದ ಸಾಲವನ್ನು ತಂದೆಯೇ ಎರಡು ಬಾರಿ ತೀರಿಸಿದ್ದರು. ಅಲ್ಲದೇ ಮಗನಿಗೆ …

Read More »