Breaking News

ಹೋಟೆಲ್ ಉದ್ಯಮಿಯಾಗುವ ಕನಸು ಕಂಡಿದ್ದ ಯುವಕ ನೇಣಿಗೆ ಶರಣು

ಮೂಡುಬಿದಿರೆ: ದುಬೈಯಲ್ಲಿ ಉದ್ಯೋಗಸ್ಥನಾಗಿದ್ದು ಊರಿಗೆ ಬಂದ ಬಳಿಕ ಇಲ್ಲೇ ಹೋಟೆಲ್ ಉದ್ಯಮ ನಡೆಸುವ ಕನಸು ಕಂಡಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನಾಗರಕಟ್ಟೆ ಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆಯ ಬಳಿ ಕಬ್ಬಿನ ಜ್ಯೂಸ್ ನ ಮಾರಾಟ ಮಾಡುತ್ತಿರುವ ಶ್ರೀನಿವಾಸ್ ಅವರ ಮಗ ದೀಕ್ಷಿತ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ನಾಗರಕಟ್ಟೆ ಬಳಿಯ ರಿಂಗ್ ರೋಡ್ ಹತ್ತಿರ ಹೊಟೇಲ್ ಉದ್ಯಮವನ್ನು ಆರಂಭಿಸಬೇಕೆಂದು ದೀಕ್ಷಿತ್ ಕನಸು ಕಂಡಿದ್ದು ಅದಕ್ಕೆ ತಕ್ಕ ಸಿದ್ಧತೆಯನ್ನೂ ಮಾಡಿಕೊಂಡಿದ್ದ ಎನ್ನಲಾಗಿದೆ. ಅನಾರೋಗ್ಯ ಪೀಡಿತರಾಗಿರುವ ತಾಯಿ ಮಲಗಿದ್ದ ವೇಳೆ ಮನೆಯ ಕೋಣೆಯ ಕಿಟಕಿಗೆ ಶಾಲನ್ನು ಬಳಸಿ ನೇಣು ಬಿಗಿದು ದೀಕ್ಷಿತ್‌ಆತ್ಮಹತ್ಯೆ ಮಾಡಿಕೊಂಡಿದ್ದು ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *