Breaking News

Breaking News

ಸಾರಿಗೆ ಸಂಸ್ಥೆ ಬಸ್ ಗೆ ಬೆಂಕಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಕಲಬುರಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗ್ರಾಮೀಣ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಉಂಟಾಗಿ ಪ್ರಯಾಣಿಕರು ಆತಂಕಗೊಂಡ ಘಟನೆ ಗುರುವಾರ ನಡೆದಿದೆ.ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮದಿ ಗ್ರಾಮದ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಈ ವೇಳೆಗೆ ಬಸ್ ಗೆ ಬೆಂಕಿ ಹೆಚ್ಚಾಗ ತೊಡಗಿದ್ದು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು …

Read More »

ಬಳ್ಳಾರಿ ಫೈರಿಂಗ್ ‘ಕೇಸ್ : ‘CID’ ಯಿಂದ ಇಬ್ಬರು ಗನ್ ಮ್ಯಾನ್’ ಗಳು ಅರೆಸ್ಟ್.!

ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಇಬ್ಬರು ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ.ಶಾಸಕ ಜನಾರ್ಧನ ರೆಡ್ಡಿ ಮನೆ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದರು.ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಖಾಸಗಿ ಗನ್ ಮ್ಯಾನ್ ಗಳಾದ ಬಲ್ಜೀತ್ ಸಿಂಗ್ ಹಾಗೂ ಬಲ್ಜಿನಂದರ್ ಸಿಂಗ್ ಎಂಬುವವರನ್ನು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ …

Read More »

ಕೊಲೆ ಪ್ರಕರಣ: ಮೂವರು ಬಾಲಕರು ವಶಕ್ಕೆ

ಧಾರವಾಡ: ಜಿಲ್ಲೆಯ ಕುಂದುಗೋಳ ಪಟ್ಟಣದಲ್ಲಿ ಬುಧವಾರ ನಡೆದ ನಿಂಗರಾಜ ಅವಾರಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.ಸಾಮಾಜಿಕ ಮಾಧ್ಯಮದ (ಇನ್‌ಸ್ಟಾಗ್ರಾಂ) ಪೋಸ್ಟ್‌ ವಿಚಾರದಲ್ಲಿ ಬಾಲಕರು ಪರಸ್ಪರ ಜಗಳವಾಡಿದ್ದಾರೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರೌಡಿ ಗುಬ್ಬಚ್ಚಿ ಸೀನ ವಿರುದ್ದ ಕೋಕಾ ಕೇಸ್‌

ಬೆಂಗಳೂರು: ರೌಡಿಶೀಟರ್‌ಗುಬ್ಬಚ್ಚಿ ಸೀನ ಮತ್ತು ಆತನ ಸಹಚರ ಕಾರ್ತಿಕ್‌ ವಿರುದ್ಧ ಕೋಕಾ ಕಾಯ್ದೆ ಅಡಿ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿರುವ ಗುಬ್ಬಚ್ಚಿ ಸೀನ ಸದ್ಯ ಪರಪ್ಪನ ಅಗ್ರಹಾರ ಜೈಲಿನ ಲ್ಲಿದ್ದಾನೆ.ಅಲ್ಲಿಂದಲೇ ಬಿಲ್ಡರ್‌ವೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಜೈಲಿನಲ್ಲಿದ್ದುಕೊಂಡೆ ಮದ್ಯ ಸೇವನೆ ಹಾಗೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ. ಈ ಫೋಟೋ ಗಳು ಸಾಮಾಜಿಕ ಜಾಲತಾ …

Read More »

ಕಾಳಿ ನದಿಯಲ್ಲಿ ಮುಳುಗಿ ಯುವಕ ಸಾವು

ದಾಂಡೇಲಿ(ಉತ್ತರ ಕನ್ನಡ ಜಿಲ್ಲೆ): ಮೌಳಂಗಿ ಸಮೀಪದ ಕಾಳಿ ನದಿಯ ಸಂಗಮ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಗೆಳೆಯರೊಂದಿಗೆ ಸ್ನಾನಕ್ಕೆ ತೆರಳಿದ್ದ ನವಾಝ್ ನಾಯ್ಕ (18) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆಸ್ನಾನ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನೀರಿನ ಹರಿವು ತೀವ್ರಗೊಂಡು ನವಾಜ್ ನೀರಿನಲ್ಲಿ ಕಾಣೆಯಾದರು.ತಕ್ಷಣವೇ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಫ್ಲೈಕ್ಯಾಚರ್ ರಾಫ್ಟಿಂಗ್ ತಂಡದವರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದರು. ನವಾಜ್ ಅವರ ಶವ ಪತ್ತೆಯಾಯಿತು’ ಎಂದು …

Read More »

ಕೌಟುಂಬಿಕ ಕಲಹ- ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡ ತಾಯಿ

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ, ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶಾಕಿಂಗ್‌ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೀವ್ರ ಸುಟ್ಟ ಗಾಯಗಳಿಂದಾಗಿ ತಾಯಿ ಮೃತಪಟ್ಟಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಘಟನೆ ನಗರದ ಕೃಷ್ಣಪ್ಪ ಲೇಔಟ್ ನಲ್ಲಿ ನಿನ್ನೆ ಸಂಜೆ ನಡೆದಿದೆ. ಬೆಂಕಿ ಹಚ್ಚಿಕೊಂಡ ಹಿನ್ನೆಲೆ ತಾಯಿ ಸೀತಾ (29) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪುತ್ರಿ ಸೃಷ್ಟಿಗೆ (4) ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ …

Read More »

ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಲಯ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಆರೋಪಿಗೆ ₹2.60 ಲಕ್ಷ ದಂಡ ವಿಧಿಸಿ ಶಿಕ್ಷೆ ನೀಡಿದ್ದು, ಹಣ ಪಾವತಿಸಲು ವಿಫಲವಾದಲ್ಲಿ 3 ತಿಂಗಳು ಜೈಲು ಸೆರೆ ವಾಸದ ತೀರ್ಪು ನೀಡಿ ಆದೇಶಿಸಿದೆ.ನಗರದ ಕಲ್ಕುಣಿಕೆ ಬಡಾವಣೆ ನಿವಾಸಿ ಕೆ.ಕೃಷ್ಣ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ವಾಸಿ ಅಶ್ವತ್ಥ್‌ ಅವರಿಗೆ ಸಾಲದ ರೂಪದಲ್ಲಿ ನೀಡಿದ ಹಣಕ್ಕೆ ಖಾತ್ರಿಯಾಗಿ ಚೆಕ್‌ ಪಡೆದಿದ್ದರುಸಕಾಲಕ್ಕೆ ಸಾಲ ಮರುಪಾವತಿಸದೆ ಚೆಕ್‌ ಬೌನ್ಸ್‌ ಆದ ಕಾರಣ ಸಿವಿಲ್‌ ನ್ಯಾಯಾಲಯದಲ್ಲಿ …

Read More »

ಗೂಡ್ಸ್‌ ಟೆಂಪೋ ಪಲ್ಟಿ; ಇಬ್ಬರು ಕಾರ್ಮಿಕರ ಸಾವು

ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಬಳಿಯ ಕೊದೇನಕೊಪ್ಪಲು-ಮಾರ್ಕಾಲು ರಸ್ತೆಯಲ್ಲಿ ಗುರುವಾರ ಗೂಡ್ಸ್‌ ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ತಿ.ನರಸೀಪುರ ತಾಲ್ಲೂಕಿನ ಬನ್ನೂರಿನ ಸಾನಿಯಾಮತ್‌(24) ಮತ್ತು ಮಹಮದ್‌ ತೌಸೀಫ್(25)‌ ಮೃತಪಟ್ವರು. ಗುರುವಾರ ಬೆಳಿಗ್ಗೆ ಮೂವರು ಕೂಲಿ ಕಾರ್ಮಿಕರೊಂದಿಗೆ ಬನ್ನೂರಿನಿಂದ ಕಿರುಗಾವಲು ಗ್ರಾಮದಲ್ಲಿನ ಅಕ್ಕಿಮಿಲ್‌ ಅಕ್ಕಿಯನ್ನು ತುಂಬಿಕೊಂಡು ಬರಲು ಹೋಗಿದ್ದಾಗ ಅಪಘಾತ ಸಂಭವಿದೆ. ಚಾಲಕ ಮತ್ತು ಟೆಂಪೊದಲ್ಲಿದ್ದ ಮತ್ತೊಬ್ಬ ಕೂಲಿ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಅಡುಗೆ ಅನಿಲ ಸೋರಿಕೆ: ಮನೆಗೆ ಬೆಂಕಿ

ಶ್ರೀರಂಗ‍ಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿಹೊತ್ತಿಕೊಂಡಿದ್ದು, ಕಲ್ನಾರ್‌ ಸೀಟಿನ ಮನೆಯೊಂದು ಸುಟ್ಟು ಹೋಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಗ್ರಾಮದ ಬಲಮುರಿ ರಸ್ತೆಯಲ್ಲಿರುವ ರವಿ ಎಂಬವರ ಮನೆಯಲ್ಲಿ ಮಧ್ಯಾಹ್ನ ಈ ಅವಘಡ ಸಂಭವಿಸಿದೆ.ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರುವುದು ಖಾತರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯ ಚಾವಣಿ ಸಂಪೂರ್ಣ ಹಾನಿಗೀಡಾಗಿದೆ. ಬಟ್ಟೆ, …

Read More »

ಹುಬ್ಬಳ್ಳಿ: ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ

ಮದ್ಯದ ಅಮಲಿನಲ್ಲಿ ಪ್ರದೀಪ ಪೂಜಾರ ಎಂಬಾತ ತನ್ನ ಅಣ್ಣನೊಂದಿಗೆ ವಾಗ್ವಾದ ಮಾಡಿ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣ ಇಲ್ಲಿನ ಶಿವಶಂಕರ ಕಾಲೊನಿಯಲ್ಲಿ ಗುರುವಾರ ನಡೆದಿದೆ.ಮಲ್ಲೇಶ ಪೂಜಾರ (42) ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಬಳಿಕ ಪ್ರದೀಪ ಪೂಜಾರ ಪರಾರಿಯಾಗಿದ್ದಾನೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »