Breaking News

ರೌಡಿ ಗುಬ್ಬಚ್ಚಿ ಸೀನ ವಿರುದ್ದ ಕೋಕಾ ಕೇಸ್‌

ಬೆಂಗಳೂರು: ರೌಡಿಶೀಟರ್‌ಗುಬ್ಬಚ್ಚಿ ಸೀನ ಮತ್ತು ಆತನ ಸಹಚರ ಕಾರ್ತಿಕ್‌ ವಿರುದ್ಧ ಕೋಕಾ ಕಾಯ್ದೆ ಅಡಿ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿರುವ ಗುಬ್ಬಚ್ಚಿ ಸೀನ ಸದ್ಯ ಪರಪ್ಪನ ಅಗ್ರಹಾರ ಜೈಲಿನ ಲ್ಲಿದ್ದಾನೆ.ಅಲ್ಲಿಂದಲೇ ಬಿಲ್ಡರ್‌ವೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಜೈಲಿನಲ್ಲಿದ್ದುಕೊಂಡೆ ಮದ್ಯ ಸೇವನೆ ಹಾಗೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ. ಈ ಫೋಟೋ ಗಳು ಸಾಮಾಜಿಕ ಜಾಲತಾ ಣದಲ್ಲಿ ವೈರಲ್‌ ಆಗಿತ್ತು. ಈ ಎಲ್ಲಾ ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ ಗುಬ್ಬಚ್ಚಿ ಸೀನ ಮತ್ತು ಆತನ ಸಹಚರ ಕಾರ್ತಿಕ್‌ ವಿರುದ್ಧ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬಿಲ್ಡರ್‌ಗೆ ಬೆದರಿಕೆ ಹಾಕಿದ ಪ್ರಕರಣವನ್ನು ಖುದ್ದು ವೈಟ್‌ಫೀಲ್ಡ್‌ ವಿಭಾಗದ ಎಸಿಪಿ ರೀನಾ ಸುವರ್ಣಾ ತನಿಖೆ ನಡೆಸಿದ್ದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *