BigTv News
January 16, 2026
Breaking News
ಆಸ್ತಿಗಾಗಿ ಅಣ್ಣ, ಅಣ್ಣನ ಮಕ್ಕಳಿಂದ ತಮ್ಮನನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಯೋಗೇಶ್(35) ಎಂದು ತಿಳಿದುಬಂದಿದೆ.ಮೃತ ಯೋಗೇಶನ ಅಣ್ಣ ಲಿಂಗರಾಜ, ಅಣ್ಣನ ಮಕ್ಕಳಾದ ಭರತ್, ದರ್ಶನ್ ಹತ್ಯೆ ಮಾಡಿದ್ದಾರೆ.ಬುಧವಾರ ಮೃತ ಯೋಗೇಶ್ ಮದುವೆ ಫಿಕ್ಸ್ ಆಗಿತ್ತು. ಇಂದು ಬೆಳಿಗ್ಗೆ ಮನೆಯ ಕೊಟ್ಟಿಗೆಯಲ್ಲೇ ಹರಿತವಾದ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಮೂವರು ಆರೋಪಿಗಳು ಪರಾರಿ …
Read More »
BigTv News
January 16, 2026
Breaking News
ಸೂರತ್ : ಗಾಳಿಪಟದ ದಾರ ತಪ್ಪಿಸಲು ಹೋಗಿ ಸೇತುವೆಯಿಂದ ಬೈಕ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಭೀಕರ ಘಟನೆ ಸೂರತ್ ನಲ್ಲಿ ನಡೆದಿದೆ.ಮಕರ ಸಂಕ್ರಾಂತಿಯಂದು ಸೂರತ್ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಚಂದ್ರಶೇಖರ್ ಗಾಳಿಪಟದ ದಾರ ತಪ್ಪಿಸಲು ಹೋಗಿ ಫ್ಲೈಓವರ್ನಿಂದ ಸುಮಾರು 70 ಅಡಿ ಕೆಳಗೆ ಬಿದ್ದಿದ್ದಾರೆ.ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದರು.35 ವರ್ಷದ ರೆಹಾನ್ ಶೇಖ್ ತನ್ನ ಪತ್ನಿ ರೆಹಾನಾ ಮತ್ತು ಅವರ ಏಳು ವರ್ಷದ …
Read More »
BigTv News
January 15, 2026
Breaking News
ನಗರದ ಬೇಗೂರು ಪ್ರದೇಶದ ಅಕ್ಷಯನಗರದಲ್ಲಿರುವ ಸ್ಕ್ರಾಪ್ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಧಗಧಗನೆ ಹೊತ್ತಿ ಉರಿದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಉಂಟಾಯಿತು.ಬೆಂಕಿಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. …
Read More »
BigTv News
January 15, 2026
Breaking News
ಧಾರವಾಡ : ಚಾಕುವಿನಿಂದ ಇರಿದು ಬಾಲಕನನ್ನು ಹತ್ಯೆಗೈದಿರುವ ಘಟನೆ ಕುಂದಗೋಳ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಸೂಸೈಟಿ ಮೈದಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ.ಮೃತ ಬಾಲಕನನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಮಲ್ಲಿಕಾರ್ಜುನ ಅವಾರಿ (16) ಎಂದು ತಿಳಿದು ಬಂದಿದೆ.ಕೃತ್ಯ ಎಸಗಿರುವವರು ಯಾರು ಮತ್ತು ಯಾಕೆ ಎಂಬುದನ್ನ ಪೊಲೀಸರು ತನಿಖೆಯನ್ನು ಮಾಡುತ್ತಿದ್ದು, ಆ ಪ್ರದೇಶದ ಸಿ.ಸಿ ಟಿವಿ ದೃಶ್ಯಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್‌ಗೆ ರವಾನಿಸಲಾಗಿದ್ದು, ಡಿವೈಎಸ್ಪಿ ವಿನೋದ ಮುಕ್ತಿದಾರ, …
Read More »
BigTv News
January 15, 2026
Breaking News
ಹಾವೇರಿ: ತಾಲ್ಲೂಕಿನ ಮಣ್ಣೂರು ಗ್ರಾಮದ ಬಳಿ ವರದಾ ನದಿಯಲ್ಲಿ ಮುಳುಗಿ ಬಸವರಾಜ ಅಂಗಡಿ (22) ಎಂಬುವವರು ಮೃತಪಟ್ಟಿದ್ದು, ಈ ಸಂಬಂಧ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಳೇ ಮೇಲ್ಮುರಿ ಗ್ರಾಮದ ಸಚಿನ್, ಸಂಕ್ರಾಂತಿ ಹಬ್ಬದ ನಿಮಿತ್ತ ಎತ್ತುಗಳ ಮೈ ತೊಳೆಯಲು ವರದಾ ನದಿಗೆ ಗುರುವಾರ ಹೋಗಿದ್ದರು.ಈ ಸಂದರ್ಭದಲ್ಲಿ ಆಯತಪ್ಪಿ ನೀರಿನೊಳಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು
Read More »
BigTv News
January 15, 2026
Breaking News
ಕೋಲಾರ : ಶ್ರೀನಿವಾಸಪುರ ತಾಲೂಕಿನ ಕೂಸ್ಸಂದ್ರ ಕ್ರಾಸ್ ಬಳಿ ಚಿಂತಾಮಣಿ ಡಿಪೋದ ಕೆಎಸ್ಸಾರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ. ಮೃತ ಬೈಕ್ ಸವಾರರನ್ನು ನಾಗರಾಜ್ (26), ಚಂದ್ರಶೇಖರ್ (24) ಎಂದು ಗುರುತಿಸಲಾಗಿದ್ದು, ಶ್ರೀನಿವಾಸ್(26) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ.ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಗುಲ್ಲು ಕುಂಟೆಯಿಂದ ಗಂಗನಗಾರಿಪಲ್ಲಿಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಾಹನ ಹಿಂಬದಿಯಿಂದ ಗುದ್ದಿದೆ ಎಂದು …
Read More »
BigTv News
January 15, 2026
Breaking News
ಗದಗ: ‘ಏರ್ ಫ್ರೆಶ್ನರ್ ಸ್ಫೋಟಿಸಿ ಬಾಲಕಿಯ ಮುಖ ಸುಡುವಂತೆ ಮಾಡಿದ ಆರೋಪದ ಮೇಲೆ ಅಲ್ತಾಫ್ ಎಂಬುವನನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ’ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಕೆಯ ಮುಖ ಮತ್ತು ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಆದರೆ, ಅದು ಆಯಸಿಡ್ ದಾಳಿಯಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ‘ಘಟನಾ ಸ್ಥಳದಲ್ಲಿ ಆಯಸಿಡ್ ಅಂಶ …
Read More »
BigTv News
January 15, 2026
Breaking News
ಚಲಿಸುತ್ತಿದ್ದ ಕೆಕೆಆರ್ ಟಿಸಿ (KKRTC) ‘ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮದರಿ ಬಳಿ ಈ ಘಟನೆ ನಡೆದಿದೆ.ಚಲಿಸುತ್ತಿದ್ದ ಕೆಕೆಆರ್ ಟಿಸಿ ಬಸ್ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬಂದಿದೆ.ಕೂಡಲೇ ಅಲರ್ಟ್ ಆದ ಚಾಲಕ ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ಗೆ ಬೆಂಕಿ ತಗುಲಿರುವ ಶಂಕೆಯಾಗಿದೆ. ತಕ್ಷಣ ಸ್ಥಳೀಯರು ಬಸ್ …
Read More »
BigTv News
January 15, 2026
Breaking News
ಶಿವಮೊಗ್ಗ: ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕತ್ತು ಹಿಸಿಕಿ ಕೊಲೆಗೈದು ಪರಾರಿಯಾಗಿದ್ದ ಪತಿ ಮಹಾಶಯನನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.ಗೋಪಿ ಬಂಧಿತ ಆರೋಪಿ. ಜ.11ರಂದು ಪತ್ನಿ ಚಂದನಬಾಯಿಯನ್ನು ಪತಿ ಗೋಪಿ ಕತ್ತು ಹಿಸುಕಿ ಕೊಲೆಗೈದು ಎಸ್ಕೇಪ್ ಆಗಿದ್ದ.ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಂದನಬಾಯಿ ಹಾಗೂ ಗೋಪಿ ಪರಸ್ಪರ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಗೋಪಿ, ಮತ್ತೋರ್ವ ಯುವತಿಯ …
Read More »
BigTv News
January 15, 2026
Breaking News
ಕಾರವಾರ: ಮಾಜಿ ಶಾಸಕ ವಿ.ಎಸ್.ಪಾಟೀಲ್, ಅವರ ತೋಟದ ಮನೆಯಲ್ಲಿಟ್ಟಿದ್ದ ಡಬಲ್ ಬ್ಯಾರಲ್ ಗನ್ ಕಳ್ಳತನವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಂದಲಗಿಯಲ್ಲಿ ನಡೆದಿದೆ.ಮಾಜಿ ಶಾಸಕ ವಿ.ಎಸ್.ಪಾಟೀಲ್ ಸ್ವರಕ್ಷಣೆಗಾಗಿ ಇಟ್ಟುಕೊಂಡಿದ್ದ ಬಂದೂಕು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ.ಡಿ.31ರಂದು ತೋಟದ ಮನೆಯಲ್ಲಿರುವ ಪಂಪ್ ಹೌಸ್ ನಲ್ಲಿ ಬಂದೂಕು ಇಟ್ಟಿದ್ದರು. ಜನವರಿ 1ರಂದು ಬೆಳಿಗ್ಗೆ ನೋಡಿದಾಗ ಡಬಲ್ ಬ್ಯಾರಲ್ ಬಂದೂಕು ಅಲ್ಲಿರಲಿಲ್ಲ. ಮನೆಯಲ್ಲಿ ಅಥವಾ ತೋಟದಲ್ಲಿ ಇಟ್ಟಿರಬಹುದು ಎಂದು ಕೆಲ ದಿಗಳ ಕಾಲ ಹುಡುಕಾಡಿದ್ದರು. …
Read More »