ಹುಬ್ಬಳ್ಳಿ: ನಗರದ ರೇಲ್ವೆ ನಿಲ್ದಾಣದ ಸಮೀಪದಲ್ಲಿ ಬಿಆರ್ ಟಿಎಸ್ ಚಿಗರಿ ಬಸ್ ಹಾಯ್ದು ಅಣ್ಣಿಗೇರಿ ಮೂಲದ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಈಗಷ್ಟೇ ಸಂಭವಿಸಿದೆ. ಧಾರವಾಡದಿಂದ ಬಂದು ಮತ್ತೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಚಿಗರಿ ಬಸ್, ರಸ್ತೆಯಲ್ಲಿ ಅಳಿಯನ ಮನೆಗೆ ಹೊರಟಿದ್ದ ವೃದ್ಧನಿಗೆ ಹಾಯ್ದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.

ಘಟನೆ ನಡೆಯುತ್ತಿದ್ದ ಹಾಗೇ ಸ್ಥಳಕ್ಕೆ ಆಗಮಿಸಿದ ಪೂರ್ವ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ನಾಗೇಶ ಕಾಡದೇವರಮಠ, ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಚಿಗರಿ ಬಸ್ ನ್ನ ಚಾಲಕನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

