BigTv News
December 28, 2025
Breaking News
ಕೊಪ್ಪಳ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಬಿ. ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.2025ರ ನವೆಂಬರ್ 16ರಂದು ರಾತ್ರಿ ಹೊಸಪೇಟೆ ಮೂಲದ 39 ವರ್ಷದ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಯುವಕರು ದಮ್ಮೂರು ಸಮೀಪ ಅತ್ಯಾಚಾರ ಎಸಗಿದ್ದರು.ಮತ್ತೊಬ್ಬ ಕೃತ್ಯಕ್ಕೆ ಸಹಕಾರ ನೀಡಿದ್ದ. ಪ್ರಕರಣ ದಾಖಲಾದ 7 ಗಂಟೆಗಳಲ್ಲೇ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ರಕ್ಷಿಸಲು ವೈದ್ಯರು ಸಾಕ್ಷ್ಯ …
Read More »
BigTv News
December 28, 2025
Breaking News
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಆದೇಶವನ್ನು ಮೀರಿ ಮಠದ ಆಸ್ತಿಯನ್ನು ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ.ಎರಡು ಕೋಟಿ ರೂಪಾಯಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಾರಾಟ ಮಾಡಲಾಗಿದೆ.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ ನಾಲ್ಕು ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಮಂಜುನಾಥ ಎಂಬುವವರಿಗೆ ಸ್ಪೆಷಲ್ ಜಿಪಿಎ ನೀಡಿ ನಿವೇಶನ ಮಾರಾಟ ಮಾಡಲಾಗಿದೆ. ಶರಣರು ಪೋಕ್ಸೊ ಪ್ರಕರಣದ ಆರೋಪಿಯಾದ ನಂತರ …
Read More »
BigTv News
December 28, 2025
Breaking News
ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾದ ಕುಟುಂಬದ ವಿರುದ್ಧ ಸಾಮೂಹಿಕ ಬಹಿಷ್ಕಾರ ಹೇರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಗ್ರಾಮಕ್ಕೆ ಭೇಟಿ ನೀಡಿ, ಜನಪ್ರತಿನಿಧಿಗಳು, ವಿವಿಧ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬದ ಸದಸ್ಯರನ್ನು ಶನಿವಾರ ಭೇಟಿ …
Read More »
BigTv News
December 27, 2025
Breaking News
ಮಂಗಳೂರು: ಅಧಿಕ ಬಡ್ಡಿಗೆ ಸಾಲ ನೀಡಿ, ಬಳಿಕ ಸಾಲ ಪಡೆದವರನ್ನು ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗಜೇಂದ್ರ ಬಜಿಲಕೇರಿ, ಶರತ್ ಗಟ್ಟಿ, ಪ್ರದೀಪ್ ಮತ್ತು ಧನರಾಜ್ ವಳಚ್ಚಿಲ್ ಬಂಧಿತರು.ಇವರು ಮನೋಜ್ ಕೋಡಿಕೆರೆ ಗ್ಯಾಂಗ್ ನ ಸದಸ್ಯರು. ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಗಳು ಬೆದರಿಸಿ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ತಲೆ …
Read More »
BigTv News
December 27, 2025
Breaking News
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಸಂಭವಿಸಿದ ಬಸ್ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಲಾರಿ ಡಿಕ್ಕಿ ಹೊಡೆದು ಬಸ್ ಬೆಂಕಿ ಹೊತ್ತಿಕೊಂಡು ಉರಿದು 7 ಮಂದಿ ಸಜೀವ ದಹನಗೊಂಡಿದ್ದ ಈ ದುರಂತದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಾಹನಗಳ ರಾತ್ರಿ ಸಂಚಾರದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಪ್ರಮುಖ ಕಾರಣ ಚಾಲಕರು ನಿದ್ರೆ ಮಂಪರಿನಲ್ಲಿ ವಾಹನ …
Read More »
BigTv News
December 27, 2025
Breaking News
ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಬಳಿ ಗುರುವಾರ ತಡರಾತ್ರಿ ನಡೆದ ಸ್ಲೀಪರ್ ಬಸ್ ದುರಂತಕ್ಕೆ ಮಹತ್ವದ ತಿರುವು ಸಿಕ್ಕಿದೆ. ಬಸ್‌ನಲ್ಲಿ ಸಾಗಿಸುತ್ತಿದ್ದ ಆಯಿಲ್ ಬಾಕ್ಸ್‌ಗಳೇ ಅಗ್ನಿಯ ತೀವ್ರತೆ ಹೆಚ್ಚಲು ಕಾರಣ ಎಂದು ಶಂಕಿಸಲಾಗಿದೆ.ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದ ಸೀಬರ್ಡ್ ಖಾಸಗಿ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ.ಆದರೆ ಹತ್ತು ನಿಮಿಷದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಏಕಾಏಕಿ ಜ್ವಾಲೆ ವ್ಯಾಪಿಸಲು ಬಸ್‌ನೊಳಗೆ ಪತ್ತೆಯಾದ ರಾಶಿ ರಾಶಿ ಆಯಿಲ್ ಬಾಕ್ಸ್‌ಗಳು ಕಾರಣ ಎನ್ನಲಾಗುತ್ತಿದೆ. ಆಯಿಲ್ …
Read More »
BigTv News
December 27, 2025
Breaking News
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಲಿ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ್ ಗಿರಿಯಪ್ಪನವರ್ ಅವರನ್ನು ಅಮಾನತು ಮಾಡಲಾಗಿದೆ.ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಪಿಡಿಒ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ್ ಪಾಟೀಲ್ ಅಮಾನತು ಮಾಡಿದ್ದಾರೆ.ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಮಾನ್ಯಾ ಪಾಟೀಲ್ ಚಿಕಿತ್ಸೆ ಮತ್ತು ಅಂತ್ಯಕ್ರಿಯ ವೇಳೆ ತಕ್ಷಣಕ್ಕೆ ಸ್ಪಂದಿಸಿರಲಿಲ್ಲ. ಸ್ಥಳೀಯ ಸಮಿತಿಯವರು ಸಭೆ ಕರೆದಾಗ ಬಂದಿರಲಿಲ್ಲ. ಪಿಡಿಒ ವಿರುದ್ಧ …
Read More »
BigTv News
December 27, 2025
Breaking News
ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ವ್ಯಕ್ತಿ ಮಹಿಳೆ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಪೌರದ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.ಇಲ್ಲಿನ ಬಾಪೂಜಿನಗರದಲ್ಲಿ ಈ ಘಟನೆ ನಡೆದಿದೆ. ಬಾಲಾಜಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.ಬಾಲಾಜಿ ಸಿಂಗ್ ಗೆ ಪತ್ನಿ, ಮಕ್ಕಳು ಇದ್ದರು ಕೂಡ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಕುಟುಂಬದವರೂ ಸಾಕಷ್ಟು ಬುದ್ಧಿವಾದ ಹೇಳಿದ್ದರು. ಮಹಿಳೆಗೂ ಬುದ್ಧಿ ಹೇಳಿದ್ದರು. ಆದರೂ ಮಹಿಳೆ ಬಾಲಾಜಿ …
Read More »
BigTv News
December 27, 2025
Breaking News
ಮೈಸೂರು ಅರಮನೆ ಎದುರು ಹೀಲಿಯಂ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ತನಿಖೆಯ ವೇಳೆ ಮೃತ ಸಲೀಂ ಸೈಕಲ್ ನಲ್ಲಿ ಇದ್ದಂತಹ ಅರ್ಧ ಕೆಜಿ ಹಿಲಿಯಂ ಪೌಡರನನ್ನು ವಶ ಪಡಿಸಿಕೊಂಡಿದ್ದಾರೆ.ಹೌದು ಮೈಸೂರು ಅರಮನೆ ಬಳಿ ಹೀಲಿಯಮ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಸಲೀಂ ಸೈಕಲ್ನಲ್ಲಿ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ ಸ್ಪೋಟದ ಸ್ಥಳದಲ್ಲಿ ಇದೀಗ ಅರ್ಧ ಕೆಜಿ ಹಿಲಿಯಂ ಪೌಡರ್ ತುಂಬಿದ ಚೀಲ ಪತ್ತೆಯಾಗಿದೆ.ಪೊಲೀಸ್ ಪರಿಶೀಲನೆಯ ವೇಳೆ ಪೊಲೀಸರು ಹಿಲಿಯಂ …
Read More »
BigTv News
December 27, 2025
Breaking News
ಮೈಸೂರು: ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಗಾಯಾಳುವಾಗಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ (45) ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಫಟನೆಯಲ್ಲಿ ಬಲೂನು ಮಾರುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ (40) ಹಾಗೂ ನಂಜನಗೂಡಿನ ಮಂಜುಳಾ (28) ಮೃತಪಟ್ಟಿದ್ದರು.ಲಕ್ಷ್ಮಿ ಅವರು ಮಗಳು ಹಾಗೂ ನಾದಿನಿಯೊಂದಿಗೆ ಬೆಳವಾಡಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ವಾಪಸ್ ತೆರಳುವಾಗ ಸಿಲಿಂಡರ್ ಸ್ಪೋಟ …
Read More »