ಮಂಗಳೂರು: ಅಧಿಕ ಬಡ್ಡಿಗೆ ಸಾಲ ನೀಡಿ, ಬಳಿಕ ಸಾಲ ಪಡೆದವರನ್ನು ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗಜೇಂದ್ರ ಬಜಿಲಕೇರಿ, ಶರತ್ ಗಟ್ಟಿ, ಪ್ರದೀಪ್ ಮತ್ತು ಧನರಾಜ್ ವಳಚ್ಚಿಲ್ ಬಂಧಿತರು.ಇವರು ಮನೋಜ್ ಕೋಡಿಕೆರೆ ಗ್ಯಾಂಗ್ ನ ಸದಸ್ಯರು. ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಗಳು ಬೆದರಿಸಿ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ತಲೆ ಮರೆಸಿಕೊಂಡಿರುವ ಮನೋಜ್ ಕೋಡಿಕೆರೆ ಮತ್ತು ಅವಿನಾಶ್ ಎಂಬವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

