ಡಿ.7ರಂದು ಮಧ್ಯಾಹ್ನ ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಇವರಿಂದ 6500ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ 22100ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
ಡಿ.7ರಂದು ಮಧ್ಯಾಹ್ನ ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಇವರಿಂದ 6500ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ 22100ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಮಂಗಳವಾರ ರೈತ ಕಾಶಿನಾಥ್ ಬಿರಾದಾರ ಎಂಬುವರಿಗೆ ಸೇರಿದ ಹೊಲದಲ್ಲಿ ಬೆಂಕಿ ಹೊತ್ತಿಕೊಂಡು 6 ಎಕರೆ ಕಬ್ಬು ಸುಟ್ಟು ಹೋಗಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸರ್ವೇ ನಂಬರ್ 258 ರ 6 ಎಕರೆ ಜಮೀನಿನಲ್ಲಿ 14 ಅಡಿಗಳಷ್ಟು ಎತ್ತರ ಕಬ್ಬು ಬೆಳೆದಿತ್ತು.ಬೆಂಕಿ ತಗುಲಿದ ವಿಷಯ ತಿಳಿದು ಬಸವಕಲ್ಯಾಣ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ, ಅಷ್ಟೊತ್ತಿಗೆ ಕಬ್ಬು ಸುಟ್ಟು …
Read More »ಮಂಗಳೂರು: ಕುಡುಪು ಗ್ರಾಮದ ಪಂಜಿರೇಲು ರಸ್ತೆ ಬಳಿ ಮಾದಕ ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದ ಕೇರಳದ ಕೊಟ್ಟಾಯಂನ ಪುಳಿಯನ್ನೂರು ಸ್ಟೀವ್ ಸ್ಟೀಫನ್ (24) ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Read More »ಪುದುಚೇರಿ: ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ರ್‍ಯಾಲಿಗೆ ಪಿಸ್ತೂಲ್ ಹಿಡಿದು ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ವಶಪಡೆದಿದ್ದಾರೆ. ಪುದುಚೇರಿಯ ಉಪ್ಪಳಂನಲ್ಲಿರುವ ಮೈದಾನವೊಂದರಲ್ಲಿ ರ್‍ಯಾಲಿ ಆಯೋಜಿಸಲಾಗಿತ್ತು.ಈ ವೇಳೆ ಮೈದಾನದ ಒಳಪ್ರವೇಶಿಸುತ್ತಿದ್ದ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಎಡ ಸೊಂಟಕ್ಕೆ ಪಿಸ್ತೂಲ್ ಸಿಕ್ಕಿಸಿಕೊಂಡಿದ್ದ ಆರೋಪಿಯು ತಮಿಳುನಾಡಿನ ಶಿವಗಂಗಾ ಮೂಲದವನಾಗಿದ್ದು, ಪಿಸ್ತೂಲ್‌ಗೆ ಪರವಾನಗಿ ಇದೆ ಎಂದು ವಾದಿಸಿದ್ದಾನೆ. ಅಲ್ಲದೆ ತಾನೊಬ್ಬ ಭದ್ರತಾ ಸಿಬ್ಬಂದಿ …
Read More »ಸಿದ್ದಾಪುರ: ತೆಂಗಿನ ಮರವೇರಿ ಕಾಯಿ ಕೊಯ್ಯುತ್ತಿದ್ದ ವೃದ್ಧ ಕೃಷಿಕರೊಬ್ಬರು ಮರದಿಂದ ಬಿದ್ದು ಮೃತಪಟ್ಟಿದ್ದಾರೆ.ಸಿದ್ದಾಪುರ ಗ್ರಾಮದ ಮೇಲ್ಕಡ್ರಿ ರವೀಂದ್ರನಾಥ ಶೆಟ್ಟಿ (70) ಮೃತಪಟ್ಟವರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಡಿ. 9ರಂದು ತಮ್ಮ ಮನೆಯ ತೆಂಗಿನಮರದಿಂದ ತೆಂಗಿನ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.ತತ್‌ಕ್ಷಣ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ …
Read More »ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ 6 ತಿಂಗಳ ಮಗುವನ್ನು ತಂದೆಯೇ ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 6 ತಿಂಗಳ ಮಗುವನ್ನು ಗಂಡ ಮತ್ತು ಮಾವ ಕಿಡ್ನಾಪ್ ಮಾಡಿದ್ದಾರೆ. ದೀಪಾ ಎಂಬ ಮಹಿಳೆಯ ಮಗುವನ್ನು ಕಿಡ್ನಾಪ್ ಮಾಡಲಾಗಿದೆ.ಮಾಗಡಿ ರೋಡ್ ಠಾಣೆಯಲ್ಲಿ ಪತಿ ಶಿಲ್ಪಿಕುಮಾರ್ ಮತ್ತು ಮಾವ ನರೇಶ್ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದೆ. ತಾಯಿ ಬಳಿ ಇದ್ದ 6 ತಿಂಗಳ ಮಗುವನ್ನು ಕಿಡ್ನಾಪ್ ಮಾಡಲಾಗಿದೆ.
Read More »ಲಾರಿ, ಬಸ್, ಆಟೋ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಓರ್ವ ವೃದ್ದ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಚಿಲುವೆಂದುಲ ಗ್ರಾಮದ 68 ವರ್ಷದ ವೃದ್ದ ಮೃತ ದುರ್ದೈವಿಯಾಗಿದ್ದಾರೆ.ಸುಂಕುಲಮ್ಮ ದೇಗುಲದಿಂದ ಬರುತ್ತಿದ್ದ ಆಟೋ ತಿರುವು ಪಡೆದುಕೊಳ್ಳುವ ವೇಳೆ ಲಾರಿ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಪಲ್ಟಿಯಾದ ಆಟೋ ಬಸ್ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 10 ಜನರಿಗೆ …
Read More »ಆನ್‌ಲೈನ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಹಳೇ ಗಬ್ಬೂರಿನ ಚಂದ್ರಶೇಖರ ಎಸ್. ಅವರಿಗೆ ವಾಟ್ಸ್‌ಆಯಪ್ ಸಂದೇಶ ಕಳುಹಿಸಿದ ವ್ಯಕ್ತಿ, ₹65.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.ಚಂದ್ರಶೇಖರ ಅವರು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ ಹಣ ಹೂಡಿಕೆ ಕುರಿತು ಜಾಹೀರಾತು ವೀಕ್ಷಿಸಿದ್ದ ಅವರು, ಮೊಬೈಲ್‌ಗೆ ಬಂದ ಲಿಂಕ್ ಒತ್ತಿ ಹಣ ಹೂಡಿಕೆ ಮಾಡಿದ್ದಾರೆಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ವ್ಯಕ್ತಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. …
Read More »ಮಂಗಳೂರು: ಶೇಡಿಗುರಿ ಅಶೋಕನಗರದ ಸತೀಶ್ ಕುಮಾರ್ ಪಿ.ಕೆ. ಅವರ ಪುತ್ರಿ, ಮುಂಬಯಿಯಲ್ಲಿ ವಾಸವಾಗಿದ್ದ ಶ್ರದ್ಧಾ (27) ಎಂಬಾಕೆ ಡಿ. 1ರಿಂದ ನಾಪತ್ತೆಯಾಗಿದ್ದಾರೆ.ಆಕೆ 14 ವರ್ಷ ಇರುವಾಗಿನಿಂದ ಒಬ್ಸೆಸಿವ್ ಕಂಪಲ್ಸಿವ್ ಡಿಸ್‌ಆರ್ಡರ್ (ಒಸಿಡಿ) ಎನ್ನುವ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಕೆಯ ಇಚ್ಛೆಯಂತೆ ಸುಮಾರು 2 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದರು. ಡಿ. 1ರಂದು ಆಕೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಪ್ರಸ್ತುತ ಆಕೆ ಲೇಹ್‌ನಲ್ಲಿ ಇರುವುದು ಆಕೆಯು ಬ್ಯಾಂಕ್ ಖಾತೆಯಿಂದ ಹಣ …
Read More »ನಕಲಿ ಖಾತೆಯ ಮೂಲಕ ಫೇಸ್‌ಬುಕ್‌ನಲ್ಲಿ ಕೋಮು ದ್ವೇಷದ ಪೋಸ್ಟ್ ಮಾಡಿರುವ ಬಗ್ಗೆ ಕಾವೂರು ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಠಾಣೆಯ ಕಾನ್‌ಸ್ಟೇಬಲ್ ನಾಗರಾಜ್ ಭೈರಗೊಂಡ ಅವರು ಡಿ.8ರಂದು ಸಂಜೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿರುವಾಗ ಮುಹಮ್ಮದ್ ಫಾರೂಕ್ ಅಬ್ದುಲ್ಲಾ ಎಂಬ ಹೆಸರಿನ ನಕಲಿ ಫೇಸ್‌ಬುಕ್ ಖಾತೆ ಹೊಂದಿರುವ ವ್ಯಕ್ತಿ ಮುಸ್ಲಿಂ ಧರ್ಮಗುರುಗಳ ರೀತಿಯಲ್ಲಿ ಕಾಣುವ ವ್ಯಕ್ತಿಯ ಭಾವ ಚಿತ್ರಕ್ಕೆ ಹಂದಿಯ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.ಸಾರ್ವಜನಿಕರಿಗೆ …
Read More »