Breaking News

ಮಾನಸಿಕ ಅಸ್ವಸ್ಥ ಯುವತಿ ನಾಪತ್ತೆ

ಮಂಗಳೂರು: ಶೇಡಿಗುರಿ ಅಶೋಕನಗರದ ಸತೀಶ್ ಕುಮಾರ್ ಪಿ.ಕೆ. ಅವರ ಪುತ್ರಿ, ಮುಂಬಯಿಯಲ್ಲಿ ವಾಸವಾಗಿದ್ದ ಶ್ರದ್ಧಾ (27) ಎಂಬಾಕೆ ಡಿ. 1ರಿಂದ ನಾಪತ್ತೆಯಾಗಿದ್ದಾರೆ.ಆಕೆ 14 ವರ್ಷ ಇರುವಾಗಿನಿಂದ ಒಬ್ಸೆಸಿವ್‌ ಕಂಪಲ್ಸಿವ್‌ ಡಿಸ್‌ಆರ್ಡರ್‌ (ಒಸಿಡಿ) ಎನ್ನುವ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಕೆಯ ಇಚ್ಛೆಯಂತೆ ಸುಮಾರು 2 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದರು. ಡಿ. 1ರಂದು ಆಕೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಪ್ರಸ್ತುತ ಆಕೆ ಲೇಹ್‌ನಲ್ಲಿ ಇರುವುದು ಆಕೆಯು ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿರುವುದರಿಂದ ತಿಳಿದು ಬಂದಿದೆ. ಆಕೆಯ ಆರೋಗ್ಯದ ದೃಷ್ಟಿಯಿಂದ ಆಕೆಯನ್ನು ಬೆಂಗಳೂರಿನ ಮಾನಸಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲು ಇರುವುದರಿಂದ ಆಕೆಯನ್ನು ಪತ್ತೆ ಮಾಡಿಕೊಡುವಂತೆ ಉರ್ವ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *