ಪುದುಚೇರಿ: ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ರ್‍ಯಾಲಿಗೆ ಪಿಸ್ತೂಲ್ ಹಿಡಿದು ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ವಶಪಡೆದಿದ್ದಾರೆ. ಪುದುಚೇರಿಯ ಉಪ್ಪಳಂನಲ್ಲಿರುವ ಮೈದಾನವೊಂದರಲ್ಲಿ ರ್‍ಯಾಲಿ ಆಯೋಜಿಸಲಾಗಿತ್ತು.ಈ ವೇಳೆ ಮೈದಾನದ ಒಳಪ್ರವೇಶಿಸುತ್ತಿದ್ದ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಎಡ ಸೊಂಟಕ್ಕೆ ಪಿಸ್ತೂಲ್ ಸಿಕ್ಕಿಸಿಕೊಂಡಿದ್ದ ಆರೋಪಿಯು ತಮಿಳುನಾಡಿನ ಶಿವಗಂಗಾ ಮೂಲದವನಾಗಿದ್ದು, ಪಿಸ್ತೂಲ್‌ಗೆ ಪರವಾನಗಿ ಇದೆ ಎಂದು ವಾದಿಸಿದ್ದಾನೆ. ಅಲ್ಲದೆ ತಾನೊಬ್ಬ ಭದ್ರತಾ ಸಿಬ್ಬಂದಿ ಎಂದೂ ಹೇಳಿದ್ದಾನೆ. ಆದರೆ ಯಾರ ಭದ್ರತೆಗೆ ನಿಯೋಜಿಸಲಾಗಿತ್ತು ಎಂಬ ವಿಚಾರ ತಿಳಿಸಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

