ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಮಂಗಳವಾರ ರೈತ ಕಾಶಿನಾಥ್ ಬಿರಾದಾರ ಎಂಬುವರಿಗೆ ಸೇರಿದ ಹೊಲದಲ್ಲಿ ಬೆಂಕಿ ಹೊತ್ತಿಕೊಂಡು 6 ಎಕರೆ ಕಬ್ಬು ಸುಟ್ಟು ಹೋಗಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸರ್ವೇ ನಂಬರ್ 258 ರ 6 ಎಕರೆ ಜಮೀನಿನಲ್ಲಿ 14 ಅಡಿಗಳಷ್ಟು ಎತ್ತರ ಕಬ್ಬು ಬೆಳೆದಿತ್ತು.ಬೆಂಕಿ ತಗುಲಿದ ವಿಷಯ ತಿಳಿದು ಬಸವಕಲ್ಯಾಣ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ, ಅಷ್ಟೊತ್ತಿಗೆ ಕಬ್ಬು ಸುಟ್ಟು ಕರಕಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

