Breaking News

Breaking News

ಚನ್ನಪಟ್ಟಣ: ಕೂಲಿ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರ್ಮಿಕರ ಸುಲಿಗೆ

ಕೂಲಿ ಕೆಲಸ ಕೊಡುವುದಾಗಿ ಹೇಳಿ ಮೂವರು ಕಾರ್ಮಿಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಮಾಸಿಗೌಡನದೊಡ್ಡಿಯ ರಕ್ಷಿತ್ ಕುಮಾರ್ ಅಲಿಯಾಸ್ ಚಿನ್ನಿ ಹಾಗೂ ಚನ್ನಂಕೇಗೌಡನದೊಡ್ಡಿಯ ಸುನೀಲ್ ರಾಜ್ ಅರಸ್ ಬಂಧಿತರು.ಕಾರ್ಮಿಕರಿಂದ ಸುಲಿಗೆ ಮಾಡಿದ್ದ ₹11,700 ನಗದು, 3 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಕ್ಕೆ ಪಡೆಯಲಾಯಿತು ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

Read More »

ಬೆಂಗಳೂರು, ಹೈದರಾಬಾದ್‌ನ 180 ಇಂಡಿಗೋ ವಿಮಾನಯಾನಗಳು ರದ್ದು

ಇಂಡಿಗೋ ವಿಮಾನಯಾನ ಸಂಸ್ಥೆ ಹೈದರಾಬಾದ್‌ಗೆ ಮತ್ತು ಅಲ್ಲಿಂದ 58 ವಿಮಾನಗಳನ್ನು ನಿರ್ವಹಿಸುತ್ತಿಲ್ಲ. ಇವುಗಳಲ್ಲಿ 14 ಆಗಮನಗಳು ಮತ್ತು 44 ನಿರ್ಗಮನಗಳು ಎಂದು ಮೂಲಗಳು ತಿಳಿಸಿವೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರದ್ದತಿಗಳ ಸಂಖ್ಯೆ 121 ಆಗಿದ್ದು, ಅವುಗಳಲ್ಲಿ 58 ಆಗಮನಗಳು ಮತ್ತು 63 ನಿರ್ಗಮನಗಳಾಗಿವೆ. ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ಸರ್ಕಾರವು ಇಂಡಿಗೋ ಸ್ಲಾಟ್‌ಗಳನ್ನು ಖಂಡಿತವಾಗಿಯೂ ಕಡಿಮೆ ಮಾಡುತ್ತದೆ ಎಂದು ಹೇಳಿದ ನಂತರ, ನಡೆಯುತ್ತಿರುವ ಚಳಿಗಾಲದ ವೇಳಾಪಟ್ಟಿಯಲ್ಲಿ ವಾಹಕವು …

Read More »

ಮಂಡಗದ್ದೆ; ಅರಣ್ಯ ಇಲಾಖೆ ದಿಢೀರ್‌ ಕಾರ್ಯಾಚರಣೆ; ಇಬ್ಬರು ಆರೋಪಿಗಳು ಬಂಧನ

ಅಕ್ರಮವಾಗಿ ಶ್ರೀಗಂಧ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಧಿಕಾರಿ ವಿನಯಕುಮಾ‌ರ್ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ, ಸೋಮವಾರ (ಡಿ.08) ಬಂಧಿಸಿದೆ. ತೀರ್ಥಹಳ್ಳಿ ತಾಲೂಕಿನ ಕಣಗಲಕೊಪ್ಪ ಗಸ್ತು ವಿಭಾಗದಲ್ಲಿ 33 ಕೆ.ಜಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಣೆಗೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿಎಫ್‌ಒ ಅಜ್ಜಯ್ಯ, ಎಸಿಎಫ್ ಮಧುಸೂದನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

Read More »

ಗೌರಿಬಿದನೂರು: ನಗರಸಭೆ ಮುಂದೆ ಶವ ಇಟ್ಟು ಪ್ರತಿಭಟನೆ

ನಗರದ ಬಿ.ಎಚ್ ರಸ್ತೆಯಲ್ಲಿ ಬೀದಿದೀಪ ಬಿದ್ದಿದ್ದರಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿವಿಪುರಂ ನಿವಾಸಿ ಸಿಖಂದರ್ ಖಾನ್ (45) ಸೋಮವಾರ ಮೃತಪಟ್ಟಿದ್ದಾರೆ.ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು, ನಗರಸಭೆ ಕಾರ್ಯಾಲಯದ ಆವರಣದಲ್ಲಿ ಶವ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.ವೃತ್ತ ನಿರೀಕ್ಷಕ ಅಂಜನ್ ಕುಮಾರ ಮಾತನಾಡಿ, ಈ ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Read More »

ಶಿಡ್ಲಘಟ್ಟ: ಪೊಲೀಸರಿಂದ ಹೆಲ್ಮೆಟ್ ಜಾಗೃತಿ.

ದ್ವಿಚಕ್ರ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು. ನಗರ ಠಾಣೆ ಎಸ್‌ಐ ವೇಣುಗೋಪಾಲ್ ಮಾತನಾಡಿ, ‘ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ.

Read More »

ಲಾಠಿ ಚಾರ್ಜ್ ಪ್ರಕರಣ | ನ್ಯಾಯ ಸಿಗುವವರೆಗೆ ಹೋರಾಟ ನಿರಂತರ: ಮೃತ್ಯುಂಜಯ ಸ್ವಾಮೀಜಿ

ಸರ್ಕಾರ ಎಷ್ಟೇ ಲಾಠಿ ಏಟು ಕೊಟ್ಟರೂ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸರ್ಕಾರ ದ್ವೇಷದಿಂದ ಪಂಚಮಸಾಲಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರೆ; ನಾವು ಶಾಂತಿಯಿಂದ ಹೋರಾಟ ಮುಂದುವರಿಸುತ್ತೇವೆ. ಬೆಳಗಾವಿಯ ಅದೇ ಸ್ಥಳದಿಂದ ಮತ್ತೊಮ್ಮೆ ಹೋರಾಟದ ಸಂಕಲ್ಪ ಮಾಡುತ್ತೇವೆ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಗದಗ ನಗರದ ಅಶೋಕ ಸಂಕಣ್ಣವರ ಮಿಲ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಹಿರಿಯರ ಘಟಕದ ಅಧ್ಯಕ್ಷರು ಅನಿಲಕುಮಾರ ಪಾಟೀಲ್, ಅಶೋಕ ಸಂಕಣ್ಣವರ, ಮೋಹನ ಮಾಳಶೆಟ್ಟಿ, …

Read More »

ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ- ಮಗು ಮೃತ್ಯು

ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ – ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.8) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು.ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ‌

Read More »

ಮಾಲವಿ ಹಾಲು ಉತ್ಪಾದಕರ ಸಂಘ: ಹುಸೇನ್, ಪತ್ರೆಪ್ಪ ಅವಿರೋಧ ಆಯ್ಕೆ

ಮಾಲವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಂದಿಹಳ್ಳಿ ಹುಸೇನ್ ಸಾಹೇಬ್, ಉಪಾಧ್ಯಕ್ಷರಾಗಿ ಬಣವಿಕಲ್ಲು ಪತ್ರೆಪ್ಪ ಅವಿರೋಧ ಆಯ್ಕೆಯಾದರು.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸೋಮವಾರ ನಡೆದ ಚುನಾವಣೆಯಲ್ಲಿ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.ಮುಖಂಡರಾದ ಹ್ಯಾಳ್ಯಾದ ಚನ್ನಬಸಪ್ಪ, ನರೇಗಲ್ ಮಲ್ಲಿಕಾರ್ಜುನ, ಚಿನಿವಾಲರ ಈಶಪ್ಪ, ರೆಡ್ಡಿ ಸುರೇಶ್, ಸಂಘದ ನಿಕಟ ಪೂರ್ವ ಅಧ್ಯಕ್ಷ ಜೆ.ಎಸ್.ಕೊಟ್ರೇಶ್, ನಿರ್ದೇಶಕರಾದ ಎಸ್.ಎಂ.ವೀರಮ್ಮ, ಕೆ.ಪಿ.ನೂರ್‌ಜಾನ್, ಕಾಳಿ ರೇವಣಸಿದ್ದಪ್ಪ, ಡೊಕ್ಕಿ ಶಿವಪ್ಪ, ಹಣಗಿ ಚಂದ್ರಪ್ಪ, ಕೆ.ಕೋಟೆಪ್ಪ, ಬೆಳಗಿ …

Read More »

ಬೆಂಕಿಯಿಂದ ಕಾಪಾಡಲು ಹೋಗಿ ಬೆಂಕಿಯಲ್ಲಿ ಬೆಂದು ಹೋದ ವ್ಯಕ್ತಿ!

ಉತ್ತರ ಪ್ರದೇಶ ಗಾಜಿಯಾಬಾದ್ ಇವರ ಮೂಲ. ರಜೆಯು ದುರಂತದಲ್ಲಿ ಕೊನೆಗೊಂಡಿತ್ತು. ವಿನೋದ್ ಕುಮಾರ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿ ಬಳಿಕ ಮೂವರು ನಾದಿನಿಯರನ್ನು ರಕ್ಷಿಸಲು ಹೋಗಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಕುಟುಂಬವು ಡಿಸೆಂಬರ್ 4 ರಂದು ಗೋವಾಕ್ಕೆ ಆಗಮಿಸಿ ಬಾಗಾದಲ್ಲಿರುವ ಹೋಟೆಲ್‌ನಲ್ಲಿ ತಂಗಿತ್ತು.ಶನಿವಾರ ರಾತ್ರಿ ಅವರು ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದರು. ಬೆಂಕಿ ಹೊತ್ತಿಕೊಂಡಾಗ ಕೇವಲ 15 ನಿಮಿಷಗಳ ಕಾಲ ಒಳಗೆ ಇದ್ದರು. ಬೆಂಕಿ ಹರಡುತ್ತಿದ್ದಂತೆ, ವಿನೋದ್ ಕುಮಾರ್ ತನ್ನ ಪತ್ನಿ …

Read More »

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ!

ತೀವ್ರ ಸಾಲದ ಸುಳಿಗೆ ಸಿಲುಕಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಬೆಂಗಳೂರಿನ ಕೋರಮಂಗಲ ಸಮೀಪದ ತಾವರೇಕೆರೆ 2ನೇ ಕ್ರಾಸ್‌ನಲ್ಲಿ ಸೋಮವಾರ ವರದಿಯಾಗಿದೆ. ಅಜ್ಜಿ, ಮಗಳು ಮತ್ತು ಮೊಮ್ಮಗ ಹೀಗೆ ಮೂವರು ಏಕಕಾಲಕ್ಕೆ ಸಾವಿಗೆ ಶರಣಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.ಮೃತರನ್ನು ಮಾದಮ್ಮ (68), ಆಕೆಯ ಮಗಳು ಸುಧಾ (38), ಮತ್ತು ಮೊಮ್ಮಗ ಮೋನಿಷ್ (14) ಎಂದು ಗುರುತಿಸಲಾಗಿದೆ. ಬೆಳಗ್ಗೆ 9 ಗಂಟೆಯ …

Read More »