Breaking News

Breaking News

ಪ್ರೀತಿಸಿದ ಯುವಕ ಮದುವೆಗೆ ನಿರಾಕರಣೆ | ಮನನೊಂದ ಯುವತಿ ಆತ್ಮಹತ್ಯೆ!

ಪ್ರೀತಿಸಿದ ಯುವಕ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರು ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆತ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಘಟನಾ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Read More »

ಬೈಕ್ ಢಿಕ್ಕಿ; ಪಾದಚಾರಿಗೆ ಗಾಯ

ಕುಂದಾಪುರ: ಕುಂಭಾಶಿಯ ಪಾಕಶಾಲಾ ಹೊಟೇಲ್ ಬಳಿಯ ರಾ.ಹೆ.66ರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜು ಪೂಜಾರಿ ಅವರಿಗೆ ಚೇತನ್ ಅವರು ಚಲಾಯಿಸುತ್ತಿದ್ದ ಬುಲೆಟ್ ಬೈಕ್ ಹಿಂದಿನಿಂದ ಢಿಕ್ಕಿಯಾಗಿ ಗಾಯಗೊಂಡ ಘಟನೆ ಡಿ.6ರಂದು ಸಂಭವಿಸಿದೆ.ಗಾಯಗೊಂಡ ಮಂಜು ಪೂಜಾರಿಯವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಳಿಯ ಉಮೇಶ್ ಪೂಜಾರಿ ಸಾಲಿಗ್ರಾಮ ಅವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚಾಲಕನ ನಿಯಂತ್ರಣ ತಪ್ಪಿ ಕರೆಗೆ ಉರುಳಿದ ಕಾರು | ಸ್ಥಳೀಯರ ಸಮಯ ಪ್ರಜ್ಞೆಯಿಂದ ಮೂವರು ಪಾರು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯ ತಾವರೆಕರೆಯಲ್ಲಿ ನಡೆದಿದೆ.ಮಾರುತಿ ಆಲ್ಟೋ ಕಾರಿನಲ್ಲಿ ಮೂವರು ಹಾಸನದಿಂದ ಕೊಲ್ಲೂರಿಗೆ ತೆರಳುತ್ತಿದ್ದರು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತಾವರೆಕೆರೆಗೆ ಕಾರು ಉರುಳಿದೆ. ಕಾರು ಕೆರೆಗೆ ಉರುಳುತ್ತಿದ್ದಂತೆ ತಕ್ಷಣ ಸ್ಥಳಿಯರು ಕಾರನ್ನು ಬದಿಗೆ ತಂದು, ಮೂರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಈ ಸಂಬಂಧ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮನೆಯಿಂದ ಚಿನ್ನಾಭರಣ ಕಳವು

ಕುಂದಾಪುರ: ಕೋಟೇಶ್ವರದ ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಸಂಭವಿಸಿದೆ.ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರು ನಿವಾಸಿ ಪೂಜಾ ಕಿಣಿ ಅವರು ಗೃಹಪ್ರವೇಶಕ್ಕೆಂದು ಹೋಗಲು ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವೊಂದು ಆಭರಣಗಳು ಇರಲಿಲ್ಲ.ವಿವಿಧ ಬಗೆಯ ಸರ, ಚಿನ್ನದ ಬಳೆಗಳು ಸೇರಿ ಒಟ್ಟು 23 ಪವನ್‌ ಚಿನ್ನಾಭರಣಗಳ ಮೌಲ್ಯ 18 ಲಕ್ಷ ರೂ.ಗಳಾಗಿದ್ದು ಯಾರೋ ಕಳ್ಳರು ಕಳವು ಮಾಡಿದ್ದಾಗಿ ದೂರು ನೀಡಿದ್ದಾರೆ.

Read More »

ಭೀಕರ ಅಪಘಾತ ; ಬೈಕ್ ಸವಾರ ಸಾವು

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸನಬಾಗೇವಾಡಿ ತಾಲ್ಲೂಕಿನ ಕಾಮನಕೇರಿ ಮತ್ತು ದಿಂಡವಾರ ಮಧ್ಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಬಸವನಬಾಗೇವಾಡಿ ತಾಲ್ಲೂಕಿನ ಬೂದಿಹಾಳ ಗ್ರಾಮದ ಗುರುಲಿಂಗಯ್ಯ ಗಣಿಮಠ 48 ಮೃತಪಟ್ಟಿರುವ ದುರ್ದೈವಿ. ಇನ್ನು ಅಪರಿಚಿತ ವಾಹನ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಬಸವನಬಾಗೇವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ …

Read More »

ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಯಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ದಯವಾಗಿ ಬಿಟ್ಟು ಹೋಗಿದ್ದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಾಲೀಕನ ನಿರ್ಲಕ್ಷ್ಯದ ಒಂದು ಕೃತ್ಯವು ಒಬ್ಬ ಮನುಷ್ಯನ ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಸಾಕಿದ ಪ್ರಾಣಿಗಳಿಗೂ ಬೀದಿಪಾಲಾಗಿ ಸಾವನ್ನಪ್ಪುವಂತೆ ಮಾಡಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Read More »

ಬೈಂದೂರು | ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು

ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಡಿ.6ರಂದು ರಾತ್ರಿ ವೇಳೆ ಉಪ್ಪುಂದ ಕಂಬದಕೋಣೆ ಸೊಸೈಟಿಯ ಎದುರು ನಡೆದಿದೆ.ಮೃತರನ್ನು ನಾಗರಾಜ ಖಾರ್ವಿ ಎಂದು ಗುರುತಿಸಲಾಗಿದೆ. ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಗಣೇಶ್ ಟ್ರಾವೆಲ್ಸ್ ಬಸ್, ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಇದರಿಂದ ಬೈಕ್ ಸವಾರ ನಾಗರಾಜ ಖಾರ್ವಿ ಗಂಭೀರ ಗಾಯಗೊಂಡಿದ್ದು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು …

Read More »

7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ: ಈಗ ತಾನೇ ಕಣ್ಬಿಟ್ಟು ನೋಡುತ್ತಿರುವಾಗಲೇ ಅನಾಥವಾದ ಮಗು!

ಕೇವಲ ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಫರಿಜಾ(22), ರೆಹಮಾನ್​(28) ಆತ್ಮಹತ್ಯೆಗೆ ಶರಣಾದ ದಂಪತಿ.ಮೃತ ದಂಪತಿ 15 ದಿನಗಳಿಂದಷ್ಟೇ ಶ್ರೀನಿವಾಸರೆಡ್ಡಿ ಎಂಬುವರ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡಿತ್ತು.ಏಳು ದಿನಗಳ ಹಿಂದಷ್ಟೇ ರೆಹಮಾನ್, ಫರಿಜಾ ದಂಪತಿಗೆ ಹೆಣ್ಣು ಹುಟ್ಟಿತ್ತು. ಆದ್ರೆ, ಇದೀಗ ಚಿಕ್ಕ ಹಸುಳೆಯನ್ನು ಬಿಟ್ಟು ದಂಪತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ.ಆದ್ರೆ, …

Read More »

ನ್ಯೂಝಿಲ್ಯಾಂಡ್: ಅತ್ಯಾಚಾರ ಆರೋಪಿ ಭಾರತೀಯ ಮೂಲದ ಚಾಲಕನಿಗೆ ಜೈಲು ಶಿಕ್ಷೆ

ನ್ಯೂಝಿಲ್ಯಾಂಡ್ ನಲ್ಲಿ ಪ್ರಯಾಣಿಕ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಉಬರ್ ಚಾಲಕ ಸತ್ವಿಂದರ್ ಸಿಂಗ್ ಗೆ 7 ವರ್ಷ ಎರಡು ತಿಂಗಳು ಜೈಲುಶಿಕ್ಷೆ ವಿಧಿಸಲಾಗಿದೆ.2023ರಲ್ಲಿ ಡ್ಯುನೆಡಿನ್ನ ಸ್ಪೆಯ್ಟ್ಸ್ ಏಲ್ಹೌಸ್ ನಿಂದ ಪೂರ್ವ ಹ್ಯಾಮಿಲ್ಟನ್ ಗೆ ತಡರಾತ್ರಿ ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಚಾಲಕ ಸತ್ವಿಂದರ್ ಸಿಂಗ್ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದು ಸತ್ವಿಂದರ್ ಸಿಂಗ್ಗೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ಇಳಿಸಬೇಕೆಂಬ …

Read More »

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!

ಎರಡು ತಿಂಗಳಲ್ಲೇ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26 ಮಂದಿ ‘ಬ್ಯಾಂಕಾಕ್‌ ‘ಪ್ರಯಾಣಿಕರನ್ನು ಸೆರೆ ಹಿಡಿದು 112.2 ಕೋಟಿ ರು. ಮೌಲ್ಯದ 1.60 ಕ್ವಿಂಟಲ್‌ ಹೈಡೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅದೇ ರೀತಿ 8 ತಿಂಗಳ ಅವಧಿಯಲ್ಲಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ 20 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಸಿಸಿಬಿ ವಶಪಡಿಸಿಕೊಂಡಿದೆ. ಇನ್ನು ಇತ್ತೀಚೆಗೆ ಬ್ಯಾಂಕಾಕ್‌ನಿಂದ ಅಕ್ರಮವಾಗಿ 18.65 ಕೋಟಿ ರು. ಮೌಲ್ಯದ …

Read More »