BigTv News
December 8, 2025
Breaking News
ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ಮೂರನೇ ಹಂತದ ನಿವಾಸಿ ಲೋಕೇಶ್ ಎಂಬುವವರನ್ನ ದುಷ್ಕರ್ಮಿಗಳು ಟಾಟಾ ಸುಮೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು .ಬಳಿಕ ಪತ್ನಿಗೆ ಕರೆ ಮಾಡಿ ಬರೋಬ್ಬರಿ 30 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದರಿಂದ ಭಯಗೊಂಡ ಲೋಕೇಶ್ ಪತ್ನಿ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರಿನಿಂದ 50 ಕಿಮೀ ದೂರದಲ್ಲಿ ಆರೋಪಿಗಳನ್ನ ಬಂಧಿಸಿ ಲೋಕೇಶ್ ಅವರನ್ನ ರಕ್ಷಣೆ ಮಾಡಿದ್ದಾರೆ.
Read More »
BigTv News
December 8, 2025
Breaking News
ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್ಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ.ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್ಗಳು ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.ಕಾರಿನೊಳಗೆ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.
Read More »
BigTv News
December 8, 2025
Breaking News
ಧಾರವಾಡ: ಅಕ್ರಮ ಸ್ಪಿರಿಟ್ ಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರು ವಾಸ ಇದ್ದ ಬಾಡಿಗೆ ಮನೆಯಲ್ಲಿ 51.46 ಕೆ.ಜಿ ಗಾಂಜಾ (ಅಂದಾಜು ಮೌಲ್ಯ ₹12.86 ಲಕ್ಷ), ಡಿಜಿಟಲ್ ಮಾಪನ ಯಂತ್ರ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೆಂಗಳೂರ ನಗರ ಜಿಲ್ಲೆಯ ಆನೆಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ (ಕೆೆಚ್‌ಬಿ ಜಾಗ) 3 ಬಾಡಿಗೆ ಮನೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಾದ ರೋನಿ ಅಲಿಯಾಸ್ ರಮೇಶ್ ಹಾಗೂ ಜಾನ್ ಪೌಲ್ …
Read More »
BigTv News
December 8, 2025
Breaking News
ಹಾವೇರಿ: ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಕ್ಕಳ ಜೊತೆಗೆ ವಾಸವಾಗಿದ್ದ ಲಲಿತಾ ಕರಬಸಪ್ಪ ಬ್ಯಾಡಗಿ(45) ಕೊಲೆಯಾದವರು ಎಂದು ಹೇಳಲಾಗಿದೆ.ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ರಸ್ತೆಯ ಮನೆಯಲ್ಲಿ ಲಲಿತಾ ಅವರನ್ನು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ನಿವಾಸಿ ಲಲಿತಾ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಣೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Read More »
BigTv News
December 8, 2025
Breaking News
ಮೀರತ್: ಅಪರಿಚಿತ ಶವವೊಂದರನ್ನು ರಸ್ತೆ ಬದಿಯಲ್ಲೇ ಎಸೆದು ಪೊಲೀಸರೇ ಓಡಿಹೋದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಂಗಡಿಯ ಎದುರು ಶವ ಬಿದ್ದಿರುವುದನ್ನು ನೋಡಿ ಗಾಬರಿಯಾದ ಜನ ಸಿಸಿಟೀವಿ ದೃಶ್ಯಗಳನ್ನು ಗಮನಿಸಿದಾಗ ಪೊಲೀಸರೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.ವಿಡಿಯೋದಲ್ಲಿ ಗುರುತಿಸಲಾದ ಜಿತೇಂದ್ರ ಕುಮಾರ್,ರಾಜೇಶ್ ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಗೃಹರಕ್ಷಕ ರೋಹ್ತಾಶ್ ಅವರನ್ನು ವಜಾಗೊಳಿಸಿದ್ದಾರೆ. ಅಲ್ಲದೆ ಮೃತಪಟ್ಟವನ ಗುರುತಿಸುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read More »
BigTv News
December 8, 2025
Breaking News
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಅಣ್ಣನನ್ನು ನೋಡಲು ಬಂದಾಗ ಸಿಮ್ ಕಾರ್ಡ್ ತಂದಿದ್ದ ಆತನ ಸಹೋದರನ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೈಲು ನಿಯಮಗಳ ಪ್ರಕಾರ ಸಿಮ್ ಕಾರ್ಡ್ ನಿಷೇಧಿತ ವಸ್ತು. ಲಿಂಗರಾಜು ವಿರುದ್ಧ ಜೈಲು ಸಿಬ್ಬಂದಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Read More »
BigTv News
December 8, 2025
Breaking News
ಮುಂದೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಕಾರೊಂದು ಕೆಲವೇ ಕ್ಷಣಗಳಲ್ಲೇ ಹೊತ್ತಿ ಉರಿದ ಘಟನೆ ತಾಲ್ಲೂಕಿನ ಸಂಗಬಸವನದೊಡ್ಡಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಕಾರಿನಲ್ಲಿದ್ದವರು ಕೂಡಲೇ ಕೆಳಕ್ಕಿಳಿದು ದೂರಕ್ಕೆ ಹೋಗುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.ಮೂರ್ನಾಲ್ಕು ಮಂದಿ ಇದ್ದ ಡಸ್ಟರ್ ಕಾರು ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ವೇಗವಾಗಿ ಹೋಗುತ್ತಿದ್ದ ಚಾಲಕ ಸಂಗಬಸವನದೊಡ್ಡಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್‌ಗೆ ಗುದ್ದಿದ್ದಾನೆ. ಕೂಡಲೇ …
Read More »
BigTv News
December 8, 2025
Breaking News
ಬಳ್ಳಾರಿ ಜೈಲಿಗೆ ಸಿಮ್ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌ವೈ.ಕಗ್ಗಲ್‌ನ ಲಿಂಗರಾಜು (24) ವಿರುದ್ಧ ಪ್ರಕರಣ ದಾಖಲಾಗಿದೆ.ಈತ ಜೈಲಿನಲ್ಲಿರುವ ತನ್ನ ಅಣ್ಣ ರವಿ ನೋಡಲು ಲಿಂಗರಾಜು ಡಿ.4ರಂದು ಜೈಲಿಗೆ ಬಂದಿದ್ದ. ಆತನನ್ನು ಜೈಲಿನ ಮುಖ್ಯದ್ವಾರದ ಬಳಿ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಆತನ ಬಳಿ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಪತ್ತೆಯಾಗಿದೆ. ಜೈಲು ನಿಯಮಗಳ ಪ್ರಕಾರ ಸಿಮ್ ಕಾರ್ಡ್ ನಿಷೇಧಿತ ವಸ್ತು. ಲಿಂಗರಾಜು ವಿರುದ್ಧ ಜೈಲು ಸಿಬ್ಬಂದಿ ದೂರು ನೀಡಿದ್ದು, ಪೊಲೀಸರು …
Read More »
BigTv News
December 8, 2025
Breaking News
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಗಣೇಶ್ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಒಟ್ಟು ಆರು ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಗಣೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಂಜಯ್, ನಾಗಭೂಷಣ್ ಮತ್ತು ಮಿಥುನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕೃತ್ಯದ ನಂತರ ತಲೆಮರೆಸಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಂ ಅಮಟೆ ಅವರ ನೇತೃತ್ವದಲ್ಲಿ ಪ್ರಕರಣದ …
Read More »
BigTv News
December 8, 2025
Breaking News
ಚಿಕ್ಕಮಗಳೂರು: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾದ ಘಟನೆ ಡಿ. 7ರ ರವಿವಾರ ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ನಡೆದಿದೆ.ಲಹರಿ (6) ಸ್ಥಳದಲ್ಲೇ ಮೃತಪಟ್ಟ ಬಾಲಕಿ. ಆಕೆಯ ಸಹೋದರಿ ಸಿರಿ (8), ತಂದೆ ಪುನೀತ್ (37) ಹಾಗೂ ತಾಯಿ ಚೈತ್ರ (34) ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಪತ್ನಿ, ಇಬ್ಬರು ಮಕ್ಕಳೊಂದಿಗೆ ಪುನೀತ್ ಬೈಕಿನಲ್ಲಿ ಬರುವಾಗ ಕಾರು ಡಿಕ್ಕಿ ಹೊಡೆದ …
Read More »