Breaking News

ಸುಳ್ಳು ವದಂತಿಗೆ ಎದ್ದುಬಿದ್ದು ಬಂದ ಮಹಿಳೆಯರ ದಂಡು…..

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಐದು ಸಾವಿರ ಕೋಡ್ತಾರಂತೆ ಅಂತೆ ಸುಳ್ಳು ವದಂತಿ ಹಬ್ಬಿದ್ದು ಹುಬ್ಬಳ್ಳಿ ಸಮೀಪದ ಕಲಘಟಗಿಯ ಗ್ಯಾಸ್ ಕಚೇರಿವೊಂದರ ಮುಂದೆ ಎದ್ದುಬಿದ್ದು ಎಂದು ಮಹಿಳೆಯರ ದಂಡು ಸೇರಿದೆ.

ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಎಲ್ಲ ಗ್ರಾಹಕರ ಇ ಕೆವೈಸಿ ಮಾಡಿಸಿ ಎಂದು ಆದೇಶ ಬಂದಿದೆ. ಅದರಂತೆ ಎಲ್ಲರ ಇ ಕೆವೈಸಿ ಪಡೆದುಕೊಳ್ಳಿ ಎಂದು ಗ್ಯಾಸ್‌ ಸಿಲಿಂಡರ್‌ ವಿತರಕ ಕಂಪನಿಯ ಅಧಿಕಾರಿಗಳು ಕಳೆದ ಒಂದೆರಡು ವಾರದ ಹಿಂದೆ ತಮ್ಮ ವಿತರಕರಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಮೋದಿಯವರು ಐದು ಸಾವಿರ ನೀಡುತ್ತಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದು ಇಂದು ಕಲಘಟಗಿ ಪಟ್ಟಣದ ಲೋಕಪೂಜ್ಯ ಗ್ಯಾಸ್ ಕಚೇರಿ ಮುಂದೆ ನೂರಾರು ಮಹಿಳೆಯರು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತಿದ್ದಾರೆ.

ನಿನ್ನೆಯವರಗೂ(ಶುಕ್ರವಾರದವರೆಗೂ) ಇ ಕೆವೈಸಿಗೆ ಅಲ್ಪ ಪ್ರಮಾಣದ ಜನರು ಆಗಮಿಸುತ್ತಿದ್ದರು ಇಂದು ಏಕಾಏಕಿ ಗ್ರಾಮೀಣ ಭಾಗದಿಂದ ನೂರಾರು ಜನರು ಆಗಮಿಸಿದ್ದು, ಈ ಕೆವೈಸಿ ಮಾಡಲು ತೊಂದರೆ ಆಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ಮಹಿಳೆಯರು ಯಾಕಿಷ್ಟು ಪ್ರಮಾಣದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಕೇಳಿದಾಗ ಪ್ರಧಾನಿ ನರೇಂದ್ರ ಮೋದಿಯವರು ಐದು ಸಾವಿರ ಹಣ ನೀಡುತ್ತಿದ್ದಾರೆ ಎನ್ನುವ ಸುಳ್ಳು ವದಂತಿಗೆ ಮಹಿಳೆಯರು ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಸುಳ್ಳು ಎಂದು ಮಹಿಳೆಯರಿಗೆ ತಿಳಿಸಿದರು ಸರದಿಯಿಂದ ಹಿಂದೆ ಸರಿಯದೆ ಇರುವುದು ಆಶ್ಚರ್ಯವಾಗಿದೆ. ಈ ಒಂದು ಗ್ಯಾಸ್ ಇ ಕೆವೈಸಿ ಮಾಡಿಸಲು ಇನ್ನು ಯಾವುದೆ ರೀತಿಯ ಕೋನೆಯ ದಿನಾಂಕ ನಿಗದಿ ಪಡಿಸಿಲ್ಲ ಜನರು ನಿಧಾನವಾಗಿ ಮಾಡಿಸಬಹುದು ಎನ್ನಲಾಗಿದೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *