Breaking News

Breaking News

ಅಂಗಡಿ ಮಾಲಕ ನಾಪತ್ತೆ

ಮಂಗಳೂರು: ನಗರದ ಸುರತ್ಕಲ್ ಕಾನ ನಿವಾಸಿ ಶೇಖಬ್ಬ (61) ಎಂಬವರು ನ.27ರಂದು ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.ಬೆಳಗ್ಗೆ 6.50ಕ್ಕೆ ಎಂದಿನಂತೆ ಮನೆಯ ಪಕ್ಕದಲ್ಲಿದ್ದ ಅವರದ್ದೇ ಮಾಲಕತ್ವದ ಜನರಲ್ ಸ್ಟೋರ್‌ ಅನ್ನು ತೆರೆಯಲು ಮನೆಯಿಂದ ಹೋಗಿದ್ದು, ಅಂಗಡಿ ತೆರೆಯದೆ, ಮನೆಗೂ ವಾಪಸ್‌ ಬಾರದೆ ಕಾಣೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು 5.9 ಅಡಿ ಎತ್ತರ, ಬಿಳಿ ಮೈಬಣ್ಣ, ದುಂಡು ಮುಖ, ತೆಳು ಮೀಸೆ, ಬೊಕ್ಕತಲೆ ಸಾಧಾರಣ ಶರೀರ ಹೊಂದಿದ್ದಾರೆ. …

Read More »

ಷೇರು ಮಾರುಕಟ್ಟೆ ಹೆಸರಲ್ಲಿ 72 ವರ್ಷದ ವ್ಯಕ್ತಿಗೆ 3.27 ಕೋಟಿ ವಂಚನೆ: FIR ದಾಖಲು

ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿದ ವಂಚಕರು ಶೃಂಗೇರಿ ಮೂಲದ 72 ವರ್ಷದ ಶಂಕರ್ ನಟರಾಜನ್ ಎಂಬುವವರಿಗೆ ಬರೋಬ್ಬರಿ 3 ಕೋಟಿ.27 ಲಕ್ಷ ರೂಪಾಯಿ ವಂಚಿಸಿದ್ದಾರೆ.ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟಿಸ್ ಹೆಸರಲ್ಲಿ ಶಂಕರ್ ನಟರಾಜನ್ ಅವರಿಗೆ ವಾಟ್ಸಪ್ ಮೆಸೆಜ್ ಬಂದಿತ್ತು. ನೀವು ಹೂಡಿಕೆ ಮಾಡ್ದ ಹಣ ಲಾಭ ಬಂದಿದೆ. ನಿಮ್ಮ ಖಾತೆಯಲ್ಲಿ 9 ಕೋಟಿ ಹಣವಿದ್ದು ಅದನ್ನು ಪಡೆಯಲು ನೀವು 1 ಕೋಟಿ 9 ಲಕ್ಷ …

Read More »

ಉಡುಪಿ: ಪೇಟೆಗೆ ಹೋದ ಯುವತಿ ನಾಪತ್ತೆ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಮೂಲದ ಪ್ರೇಮಾಂಜಲಿ (24) ನಾಪತ್ತೆಯಾದ ಯುವತಿ. ಈಕೆ ಪ್ರಸ್ತುತ ಉಡುಪಿ ಬನ್ನಂಜೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು.ನ.24ರಂದು ಮನೆಯಿಂದ ಹೊರಗೆ ಹೋದವಳು ವಾಪಾಸು ಬಾರದೇ ನಾಪತ್ತೆಯಾಗಿದ್ದಾಳೆ. 4 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುತ್ತಾಳೆ. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ …

Read More »

ಎರಡು ಕಾರ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವು

ಕೋಡೆಕಲ್ ಗ್ರಾಮದ ಬಳಿ ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಹಲವಾರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ಕಾರ್ ಗಳಲ್ಲಿ ಒಂದು ಕರ್ನಾಟಕದ ನೋಂದಣಿ ಸಂಖ್ಯೆ ಹೊಂದಿದೆ. ಈ ಕಾರ್ ನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ ಇಬ್ಬರು ಪಿಎಸ್‌ಐಗಳು ಸೇವೆಯಿಂದ ವಜಾ

ಚಿನ್ನದ ವ್ಯಾಪಾರಿ ವಿಶ್ವನಾಥ್ ಎಂಬವರನ್ನು ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ (PSI) ಸೇರಿ ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಇದರ ಬೆನ್ನಲ್ಲೇ ಇಬ್ಬರು ಪಿಎಸ್‌ಐಗಳನ್ನು ಸೇವೆಯಿಂದ ವಜಾ ಮಾಡಿ ಪೂರ್ವ ವಲಯ ಐಜಿಪಿ ಡಾ.A1 ಆರೋಪಿ ಪಿಎಸ್‌ಐ ಹಾವೇರಿಯ ಹಂಸಭಾವಿ ಪೊಲೀಸ್ ಠಾಣೆಯ ಪ್ರೋಬೇಷನರಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಶಿವಮೊಗ್ಗದ ಸಾಗರ ಟೌನ್ ಪೊಲೀಸ್ ಠಾಣೆಗೆ ಅದೇಶದಲ್ಲಿದ್ದ …

Read More »

ಬೆಳಗಾವಿ: ಕನ್ನಡ ಭವನ ನಿರ್ವಹಣೆಗೆ ಉಪಸಮಿತಿ.

ನೆಹರೂ ನಗರದಲ್ಲಿ ನಿರ್ಮಿಸಿದ ಕನ್ನಡ ಭವನ ನಿರ್ವಹಣೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿ, ಅದರ ಮೂಲಕ ಸಮಗ್ರ ನಿರ್ವಹಣೆಗೆ ನಿರ್ಧರಿಸಲಾಗಿದೆ.ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಬೆಳಗಾವಿ ಜಿಲ್ಲಾ ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕ್‌ ಖಾತೆ ನಂ. 3762 ಮತ್ತು ಯೂನಿಯನ್ ಬ್ಯಾಂಕ್‌ ಆಫ್ ಇಂಡಿಯಾದ ಖಾತೆ ನಂ. 209021010000053 ಇವುಗಳನ್ನು …

Read More »

ಗಡಿ ಕನ್ನಡ ಶಾಲೆಗಳತ್ತ ಸರ್ಕಾರದ ನಿರ್ಲಕ್ಷ್ಯ: ಶಿಕ್ಷಕರ ಕೊರತೆ, ಮಕ್ಕಳ ಪರದಾಟ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿರುವ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯಗಳು ಇಲ್ಲದೇ ಸೊರಗುತ್ತಿದೆ. ಕನ್ನಡ, ಮರಾಠಿ ಹಾಗೂ ಉರ್ದು ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿದ್ದು, ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳು ಕೊಠಡಿ ಹಾಗೂ ಶಿಕ್ಷಕರ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

Read More »

ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ಮಗಳು: ವೀಡಿಯೋ ವೈರಲ್.

ಮೂಡುಶೆಡ್ಡೆ ಗ್ರಾ.ಪಂ. ಆವರಣದಲ್ಲಿ ಮಗಳು ತನ್ನ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಖಕ್ಕೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಇದನ್ನು ಗ್ರಾ.ಪಂ. ಕಚೇರಿಯಲ್ಲಿದ್ದವರು ವೀಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗಳ ಅಮಾನವೀಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ತಾಯಿ-ಮಗಳ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿಲ್ಲ. ವೀಡಿಯೋ ಮಾಡಿ ಅದಕ್ಕೆ ಹೆಚ್ಚು ವೀಕ್ಷಣೆ ಬರುವ …

Read More »

120 ಅಡಿ ಎತ್ತರದ ಸ್ಕೈ ಡೈನಿಂಗ್‌ನಲ್ಲಿ ಸಿಲುಕಿದ ಮಂಗಳೂರು ಪ್ರವಾಸಿಗರು; 2.5 ವರ್ಷದ ಮಗು ಸೇರಿ 6 ಜನರ ರಕ್ಷಣೆ!

ಇಡುಕ್ಕಿಯ ಮೂನ್ನಾ ಬಳಿ ಸ್ಕೈ ಡೈನಿಂಗ್‌ನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಕೆಳಗೆ ಇಳಿಸಲಾಗಿದೆ. ಐದು ಮಂದಿ ಸಿಕ್ಕಿಬಿದ್ದಿದ್ದರು. ಮಂಗಳೂರು ಮೂಲದ ಮಲಯಾಳಿಗಳು ಸಿಲುಕಿಕೊಂಡಿದ್ದರು. ಆನಚಾಲ್‌ನಲ್ಲಿರುವ ಖಾಸಗಿ ಸ್ಕೈ ಡೈನಿಂಗ್ ಕೇಂದ್ರದ ಸ್ಕೈ ಡೈನಿಂಗ್ ಕ್ಯಾಬಿನ್‌ನಲ್ಲಿ ಪ್ರವಾಸಿಗರು ಸೇರಿದಂತೆ ಐದು ಜನರ ತಂಡ ಸುಮಾರು ಮೂರು ಗಂಟೆಗಳ ಕಾಲ ಸಿಕ್ಕಿಬಿದ್ದಿತ್ತು. ತಂಡವು 120 ಅಡಿ ಎತ್ತರದಲ್ಲಿ ಸಿಲುಕಿಕೊಂಡಿತ್ತು. ಸ್ಕೈ ಡೈನಿಂಗ್ ಕೇಂದ್ರವನ್ನು ಎತ್ತಿ ಹಿಡಿದಿದ್ದ ಕ್ರೇನ್‌ನ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ. ಮೂನ್ನಾರ್ …

Read More »

ಎರ್ಮಾಳಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಲಾರಿ : ಚಾಲಕ ಪಾರು

ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಘಟನೆ ಎರ್ಮಾಳು ಕಲ್ಯಾಣಿ ಪೆಟ್ರೋಲ್ ಪಂಪ್ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.ಅದೃಷ್ಟವಷತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.ಲಾರಿ ಚಾಲಕ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು, ನಿದ್ದೆ ಮಂಪರ್ ನಲ್ಲಿ ಲಾರಿ ಚಲಾಯಿಸಿದ ಕಾರಣ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ.

Read More »