ನೆಹರೂ ನಗರದಲ್ಲಿ ನಿರ್ಮಿಸಿದ ಕನ್ನಡ ಭವನ ನಿರ್ವಹಣೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿ, ಅದರ ಮೂಲಕ ಸಮಗ್ರ ನಿರ್ವಹಣೆಗೆ ನಿರ್ಧರಿಸಲಾಗಿದೆ.ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಬೆಳಗಾವಿ ಜಿಲ್ಲಾ ರಾಣಿ ಚನ್ನಮ್ಮ ಮಹಿಳಾ ಸಹಕಾರ ಬ್ಯಾಂಕ್ ಖಾತೆ ನಂ. 3762 ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಖಾತೆ ನಂ. 209021010000053 ಇವುಗಳನ್ನು ರದ್ದು ಮಾಡಬೇಕು. ಇವುಗಳ ಮೂಲಕ ಯಾವುದೇ ಆರ್ಥಿಕ ವ್ಯವಹಾರ ಮಾಡಬಾರದು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

