Breaking News

Breaking News

ದೆಹಲಿ ಕಾರು ಸ್ಫೋಟ: ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿತು ಮಹತ್ವದ ಸುಳಿವು?

ಕೆಂಪು ಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಸ್ಫೋಟವು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ಭೀಕರ ಸ್ಫೋಟದ ಹಿಂದೆ ಉಗ್ರ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಜನರನ್ನ ಆತಂಕಕ್ಕೆ ದೂಡಿದೆ.ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ತನಿಖಾಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದ್ದು, ಎಲ್ಲಾ ಆಯಾಮಗಳ ತನಿಖೆಗೆ ಮುಂದಾಗಿದ್ದಾರೆ.ಸ್ಥಳದಲ್ಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡದ ಅಧಿಕಾರಿಗಳೂ ಬೀಡುಬಿಟ್ಟಿದ್ದು, ಸ್ಫೋಟಕ್ಕೆ ಕಾರಣಗಳನ್ನ ಪತ್ತೆ ಮಾಡಲಾಗುತ್ತಿದೆ. ಈ ಮಧ್ಯೆ ನೆತ್ತರು ಹರಿದ ನೆಲದಲ್ಲಿ ಸಜೀವ …

Read More »

ದೆಹಲಿ ಕಾರು ಸ್ಫೋಟ: 14 ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ, ಪ್ರಧಾನಿ ಮೋದಿ ಕಂಬನಿ!

ದೆಹಲಿಯ ಕೆಂಪು ಕೋಟೆ ಬಳಿಯ ಲಾಲ್‌ ಕಿಲಾ ಮೆಟ್ರೋ ನಿಲ್ದಾಣದ ಬಳಿ ನಡೆದ ಭೀಕರ ಸ್ಫೋಟದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ದೇಶದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.ಲಾಲ್‌ ಕಿಲಾ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ-1ರ ಪಾರ್ಕಿಂಗ್ ಪ್ರದೇಶದಲ್ಲಿ ಈ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಪಾರ್ಕಿಂಗ್‌ನಲ್ಲಿದ್ದ 6 ಕಾರ್‌ಗಳು ಹಾಗೂ 4 ಆಟೋಗಳು ಛಿದ್ರಛಿದ್ರವಾಗಿವೆ. ಸ್ಫೋಟದ …

Read More »

ದೆಹಲಿ ಸ್ಪೋಟ: ಬ್ಲಾಸ್ಟ್‌ ಸಂಭವಿಸಿದ್ದ ಐ20 ಕಾರಿನ ಮಾಲೀಕನ ಬಂಧನ; ಕಾರಿಗೆ ಇಬ್ಬರು ಓನರ್!

ನಗರದ ಕೆಂಪು ಕೋಟೆ ಸಮೀಪವಿರುವ ಲಾ ಕಿಲ್ಲಾ ಮೆಟ್ರೊ ನಿಲ್ದಾಣದ ಬಳಿಯ ಶುಭಾಷ್‌ ಮಾರ್ಗ್‌ ಸಿಗ್ನಲ್‌ನಲ್ಲಿ ನಿನ್ನೆ ( ನವೆಂಬರ್‌ 10 ) ಸಂಜೆ ಭೀಕರ ನಿಗೂಢ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.ಈ ಭೀಕರ ಸ್ಪೋಟದಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಎಲೆಕ್ಟ್ರಾನಿಕ್‌ ಆಟೊ ರಿಕ್ಷಾ ಸೇರಿದಂತೆ ಒಟ್ಟು 22 ವಾಹನಗಳು ಬೆಂಕಿಗಾಹುತಿಯಾಗಿವೆ.ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಡೆಗಳು ಸ್ಥಳಕ್ಕೆ ಆಗಮಿಸಿ …

Read More »

ಈಜಲು ಹೋದ ಬಾಲಕ ಹೊಳೆಯಲ್ಲಿ ಮುಳುಗಿ ಮೃತ್ಯು

ಮಡಿಸಾಲು ಹೊಳೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪೆರ್ಡೂರು ಆಲಂಗಾರು ಸಮೀಪ ನಡೆದಿದೆ.ಮೃತರನ್ನು ಪೆರ್ಡೂರು ಆಲಂಗಾರು ನಿವಾಸಿ ಶ್ರೀಶಾಂತ್ ಶೆಟ್ಟಿ(15) ಎಂದು ಗುರುತಿಸಲಾಗಿದೆ. ರವಿವಾರ ಮಧ್ಯಾಹ್ನ ವೇಳೆ ಶ್ರೀಶಾಂತ್ ಶೆಟ್ಟಿ ತನ್ನ ನೆರೆಮನೆಯ ನವೀನ್ ಎಂಬಾತನ ಜೊತೆ ಸ್ಕೂಟರ್‌ನಲ್ಲಿ ಈಜಲು ಹೋಗಿದ್ದರೆನ್ನಲಾಗಿದೆ.ಹೊಳೆಯಲ್ಲಿ ಈಜುತ್ತಿದ್ದ ಶ್ರೀಶಾಂತ್ ಶೆಟ್ಟಿ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ಈತನೊಂದಿಗೆ ಈಜಲು ಹೋಗಿದ್ದ ನವೀನ್, ಈ ವಿಚಾರವನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದನು. …

Read More »

ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ 18 ಲಕ್ಷ ರೂ. ವಂಚನೆ

ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ 2ನೇ ವಾರ್ಡ್ ವಿಜಯ ವಿಠಲ ನಗರದ ನಿವಾಸಿ ಬೆಟ್ಟಪ್ಪ ಗೌಡ ವಂಚನೆಗೆ ಒಳಗಾದವರು.ತಮ್ಮ ಸ್ನೇಹಿತ ವೀರಭದ್ರ ಗೌಡ ಎಂಬುವರು ರೆಡ್ಡಿತಿಮ್ಮಾರೆಡ್ಡಿ ಎಂಬಾತನನ್ನು ಪರಿಚಯಿಸಿ, ಇವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಉನ್ನತ ಮಟ್ಟದ ಪ್ರಭಾವ ಇದೆ ಎಂದು ನಂಬಿಸಿದ್ದಾರೆ.ಇದನ್ನು ನಂಬಿ ಬೆಟ್ಟಪ್ಪ ಗೌಡ ತನ್ನ ಮತ್ತೊಬ್ಬ ಸ್ನೇಹಿತ ಜಗದೀಶ ಕೋರಿ ಎಂಬುವವರ ಮಗಳಿಗೆ …

Read More »

ನೇಣು ಬಿಗಿದು ಯುವತಿ ಆತ್ಮಹತ್ಯೆ

ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ಯ ಜಿಲ್ಲೆಯ ವಿದ್ಯಾರ್ಥಿನಿ ಪೌಲಾ ಲೆಸ್ಲಿಯ ವರ್ಜಾರಿ (19) ಮೃತಪಟ್ಟವರು. ಮೊಬೈಲ್‌ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಗಾಬರಿಗೊಂಡ ಆಕೆಯ ತಂದೆಯು ತಾಯಿಯ ಬಳಿ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದರು.ಆಕೆಯ ಕೊಠಡಿ ಬಾಗಿಲಿಗೆ ಬೀಗ ಹಾಕಲಾಗಿತ್ತು. ತೆರೆದು ನೋಡಿದಾಗ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ತಿಳಿದುಬಂದಿಲ್ಲ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅತ್ಯಾಚಾರ ಆರೋಪಿಯಿಂದ ಬಾಲಕಿ ಮೇಲೆ ದೌರ್ಜನ್ಯ

ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 35 ವರ್ಷದ ಆರೋಪಿಯೊಬ್ಬ, ಅಪ್ರಾಪ್ತ ವಯಸ್ಸಿನ ಮತ್ತೊಬ್ಬ ಬಾಲಕಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಮುಜಾಫರ್‍ಪುರ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.ಆರೋಪಿಯನ್ನು ರವಿವಾರ ಮತ್ತೆ ಬಂಧಿಸಲಾಗಿದೆ. ದಿವ್ಯಪ್ರಕಾಶ್ ಅಲಿಯಾಸ್ ಅಭಿನವ್ ಎಂಬ ಆರೋಪಿ ಎಲ್‍ಜೆಪಿ-ಆರ್‍ವಿ ಪಕ್ಷದ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ. ಆರೋಪಿಯನ್ನು ಪಕ್ಷದಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಮುಖಂಡ ಪವನ್‍ಕುಮಾರ್ ಹೇಳಿದ್ದಾರೆ. 13 ವರ್ಷದ ಬಾಲಕಿಯ …

Read More »

ನಾಪತ್ತೆಯಾಗಿದ್ದ ವ್ಯಕ್ತಿ ಮೋರಿಯಲ್ಲಿ ಶವವಾಗಿ ಪತ್ತೆ

ವಿಟ್ಲ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ಮೋರಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಸಮೀಪದ ಕೋಟಿಕೆರೆ ನಿವಾಸಿ ಮಂಜುನಾಥ್ (55) ಎಂದು ಗುರುತಿಸಲಾಗಿದೆ.ಅಡಿಕೆ ಗಾರ್ಬಲಲ್ಲಿ ಕೆಲಸ ಮಾಡುತ್ತಿದ್ದ ಈತ ರವಿವಾರ ರಾತ್ರಿ ಗಂಟೆ 9.30ರ ಅನಂತರ ನಾಪತ್ತೆಯಾಗಿದ್ದರು.ಬೆಳಗ್ಗೆ ಸಾರ್ವಜನಿಕರು ನಡೆದುಕೊಂಡು ಹೋಗುತ್ತಿದ್ದಾಗ ಮೋರಿಯ ಸ್ವಲ್ಪ ನೀರಿನಲ್ಲಿ ಶವ ತೇಲುತ್ತಿರುವುದು ಕಂಡು ಬಂದಿದೆ. ಆತನಿಗೆ ಕುಡಿತದ ಚಟವಿತ್ತೆನ್ನಲಾಗಿದೆ. ಆದರೆ ಆತ ಮೋರಿಗೆ ಬಿದ್ದು ಸಾವನ್ನಪ್ಪಿದ ಬಗ್ಗೆ ಖಚಿತ ಮಾಹಿತಿ …

Read More »

ತಾಯಿ ಹಾಗೂ ಸಹೋದರನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ

ವ್ಯಕ್ತಿಯೊಬ್ಬ ತಾಯಿ ಹಾಗೂ ಸಹೋದರನನ್ನು ಕೊಲೆ(Murder) ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಭೀಮಾವರಂನಲ್ಲಿ ನಡೆದಿದೆ. ಭೀಮಾವರಂ ಒನ್ ಟೌನ್ ಪೊಲೀಸ್ ವ್ಯಾಪ್ತಿಯ ಸುಂಕರ ಪದ್ದಯ್ಯ ಬೀದಿಯಲ್ಲಿ ಬೆಳಗಿನ ಜಾವ 1 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ.ಆರೋಪಿಯನ್ನು ಗುಣುಪುಡಿ ಶ್ರೀನಿವಾಸ್ (37) ಎಂದು ಗುರುತಿಸಲಾಗಿದ್ದು, ಆತನ ತಾಯಿ ಮಹಾಲಕ್ಷ್ಮಿ (60) ಮತ್ತು ಸಹೋದರ ರವಿತೇಜ (33) ಅವರ ಮೇಲೆ ಮನೆಯಲ್ಲಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು …

Read More »

ಪತ್ನಿ ಕಾಮದಾಟಕ್ಕೆ ಪತಿ ಬಲಿ, ಪ್ರಿಯಕರನ ಜೊತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ ಮಹಿಳೆ

ಇತ್ತೀಚೆಗೆ ಅಕ್ರಮ ಸಂಬಂಧದ ಕಾರಣಕ್ಕೆ ಪ್ರಿಯತಮನ ಜೊತೆ ಸೇರಿ ಪತಿಗೆ ಪತ್ನಿ ಚಟ್ಟ ಕಟ್ಟಿದ ಸಾಕಷ್ಟು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಇಂಥದ್ದೇ ಘಟನೆ ಬೆಳಕಿಗೆ ಬಂದಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ಯುವಕನ ಜೊತೆ ಸೇರಿ ಗಂಡನನ್ನೇ ಕೊಂದು ಮುಗಿಸಿದ್ದಾಳೆ.ಉತ್ತರ ಪ್ರದೇಶದಲ್ಲಿ ಕಾಜಲ್‌ ಎಂಬ ಮಹಿಳೆ ಬೇಡದ ವಯಸ್ಸಿನಲ್ಲಿ ತನ್ನ ಅರ್ಧ ವಯಸ್ಸಿನ ಯುವಕನ ಜೊತೆ ಅಕ್ರಮ ಸಂಬಂಧ ಬೆಳೆಸಿ ಗಂಡನನ್ನೇ ಕೊಂದು ಆತನ …

Read More »