Breaking News

Breaking News

ಬೈಕ್ ಡಿಕ್ಕಿ; ಹುಬ್ಬಳಿ ಸವಾರ ಸಾವು!

ರಾಷ್ಟ್ರೀಯ ಹೆದ್ದಾರಿ-4ರ ಮಲಪ್ರಭಾ ನದಿ ಸೇತುವೆ ಬಳಿ ಹೆದ್ದಾರಿ ಪಕ್ಕದ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.ಹುಬ್ಬಳ್ಳಿ ನಗರದ ವೀರಾಪುರ ಓಣಿಯ ನಿವಾಸಿ ರುದ್ರಯ್ಯ ಶಿದ್ದಲಿಂಗಯ್ಯ ದಂಡಾವತಿಮಠ (28) ಮೃತ ವ್ಯಕ್ತಿ.ಬೈಕ್ ಚಲಾಯಿಸುತ್ತಿದ್ದ ಅದೇ ನಗರದ ಪ್ರಶಾಂತ ಮನೋಹರ ತಾಳಿಕೋಟಿ (35) ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಆಸ್ಫತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಹುಬ್ಬಳ್ಳಿಯಿಂದ ಬೆಳಗಾವಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ …

Read More »

ಮಲ್ಪೆ ಪೊಲೀಸ್ ಠಾಣೆಯ ಎಎಸ್‌ಐ ಹೃದಯಾಘಾತದಿಂದ ಮೃತ್ಯು.

ಮಲ್ಪೆ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ(ಎಎಸ್ಸೈ) ವಿಶ್ವನಾಥ್ (56) ಎಂಬವರು ರವಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಹಾಡುತ್ತಿರುವಾಗ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.ಕೂಡಲೇ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ವಿಶ್ವನಾಥ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Read More »

ಬಂಡೀಪುರ: ಮಾನವ ಪ್ರಾಣಿ ಸಂಘರ್ಷ ತಡೆಗೆ ಸಿಬ್ಬಂದಿ ನಿಯೋಜನೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಯಲು ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರನ್ನು ತಾತ್ಕಾಲಿಕವಾಗಿ ಒಂದು ವಾರದ ಅವಧಿಗೆ ನಿಯೋಜಿಸಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.ಹರೀಶ್ ಎಲ್‌, ಪ್ರಸಾದ್ ಎಚ್‌.ಆರ್‌,ನಟರಾಜ ಮುದುಕಣ್ಣನವರ, ವೀರೇಶ್‌ ಕೆಎಸ್‌, ಸಿ.ಕೆ.ಕುಮಾರ್‌, ಕುಮಾರ್ ಬಿ.ಎನ್‌, ಗಿರೀಶ್ ಕನ್ನಗೊನಹಳ್ಳ, ಗಂಗಾಧರ್ ಬಿ.ಎಸ್‌, ಕುಶಾಲ್ ಜಾದವ್‌, ಲೋಕೇಶ್ ಬಿ.ಸಿ, ಶ್ರೀಧರ್, ಧರ್ಮೇಂದ್ರ ವಿ.ಆರ್‌, ನಾಗರಾಜು ಬಿ.ಎಂ, ಶ್ರವಣ್ …

Read More »

ಬೈಕ್ ಗಳಿಗೆ ಆಂಬುಲೆನ್ಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು.

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ಎರಡು ಬೈಕ್ ಗಳಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಆಂಬುಲೆನ್ಸ್ ಚಾಲಕನ ನಿರ್ಲಕ್ಷಕ್ಕೆ ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ವೇಗವಾಗಿ ಬಂದು ಎರಡು ಬೈಕ್ ಗಳಿಗೆ ಆಂಬುಲೆನ್ಸ್ ಹೊಡೆದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Read More »

ಮೂವರು ಮೌಲ್ವಿಗಳು ಸೇರಿ ಐವರು ಶಂಕಿತ ಉಗ್ರರು ಅರೆಸ್ಟ್

ಉಗ್ರರಿಗೆ ಹಣಕಾಸು ನೆರವು ನೀಡಿದ ಮೂವರು ಮೌಲ್ವಿಗಳು ಸೇರಿದಂತೆ ಐವರು ಶಂಕಿತ ಉಗ್ರರನ್ನು ಎಟಿಎಸ್ ಅಧಿಕಾರಿಗಳು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.ಬಂಧಿತರನ್ನು ಅಯೂಬ್, ಮಸೂದ್, ಉಸ್ಮಾನ್ ಎಂಬ ಮೂವರು ಮೌಲ್ವಿಗಳು ಹಾಗೂ ಕರೌಲ್ ನ ಜುನೈದ್ ಹಾಗೂ ಮತ್ತೋರ್ವ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ.ಬಂಧಿತರಲ್ಲಿ ಅಯೂಬ್ ಜೋಧ್ ಪುರದ ಚೋಖಾದ ಅರೇಬಿಯಾ ಮದರಸಾದ ಧರ್ಮಗುರುವಾಗಿದ್ದು, ಆತನಿಂದ ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ೧೩ ವರ್ಷಗಳಿಂದ ಮದರಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ಮನೆಯಿಂದ ಎಟಿಎಸ್ …

Read More »

ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡ ಯುವತಿ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಉದ್ಯಾನನಗರಿ ಬೆಂಗಳೂರಿನಲ್ಲಿ 25 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾಳೆ. ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿಯನ್ನು ದಾವಣಗೆರೆ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ.ಎಂಬಿಎ ವ್ಯಾಸಂಗ ಮಾಡಿದ್ದ ಸುಪ್ರಿಯಾ ಬೈಕ್‌ ರೈಡಿಂಗ್‌ ತರಬೇತಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.ಗಾಯತ್ರಿನಗರದ ರೈಲ್ವೆ ಪ್ಯಾರಲಲ್‌ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಸುಪ್ರಿಯಾ ವಾಸವಿದ್ದರು. ಕಳೆದ ಎರಡು ದಿನಗಳಿಂದ ಆಕೆ ವಾಸವಾಗಿದ್ದ ರೂಮ್‌ ಲಾಕ್‌ ಆಗಿತ್ತು. ಈ ಬಗ್ಗೆ ಅನುಮಾನಗೊಂಡ ಮನೆಯ …

Read More »

ಕೇರಳದಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್ ಬರ್ಬರ ಹತ್ಯೆ

ಕೇರಳದಲ್ಲಿ ಮಂಗಳೂರಿನ ಕುಖ್ಯಾತ ರೌಡಿಶೀಟರ್ ಬರ್ಬರ ಹತ್ಯೆ ಮಾಡಲಾಗಿದೆ. ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್ ಎಂಬಾತನನ್ನು ಬರ್ಬರ ಹತ್ಯೆ ಮಾಡಲಾಗಿದೆ.ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ರೈಲ್ವೆ ಗೇಟ್ ಬಳಿಯಲ್ಲಿ ಕೊಟ್ಟಿ ನೌಫಾಲ್ ಕೊಲೆ ಮಾಡಲಾಗಿದೆ. ನೌಫಾಲ್, ಫರಂಗಿಪೇಟೆ ಜೋಡಿ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದನು.ಮಾರಕಾಸ್ತ್ರಗಳಿಂದ ಕೊಚ್ಚಿ ನೌಫಾಲ್ ಅನ್ನು ದುಷ್ಕರ್ಮಿಗಳು ಕೊಂದಿದ್ದಾರೆ. ಮಂಗಳಿನ ಫೈಸಲ್ ನಗರದ ನಿವಾಸಿ ಟೋಪಿ ನೌಫಾಲ್ ಆಗಿದ್ದನು. ಉಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ …

Read More »

ಆಗಷ್ಟೇ ಹುಟ್ಟಿದ ಮಗುವನ್ನು ಕಸದ ಪೊಟ್ಟಣದಂತೆ ರಸ್ತೆ ಪಕ್ಕ ಎಸೆದು ಹೋದ ಪಾಪಿಗಳು!

ಆ ಮಗು ಹುಟ್ಟಿ ಕೆಲವೇ ಗಂಟೆಗಳಾಗಿರಬಹುದು ಅಷ್ಟೇ. ಆದರೆ, ಹುಟ್ಟಿದ ಮಗುವಿಗೆ ಭೂಮಿಯ ಮೇಲೆ ಬದುಕುವ ಅದೃಷ್ಟವಿರಲಿಲ್ಲ. ಯಾಕೆಂದರೆ, ಆಕೆ ಪಾಪಿಗಳ ಕುಟುಂಬದಲ್ಲಿ ಹುಟ್ಟಿದ್ದಳು. ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ನಡೆದ ಅಮಾನುಷ ಘಟನೆಯಲ್ಲಿ ಆಗಷ್ಟೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ಪಾಪಿಗಳು ಕಸದ ಪೊಟ್ಟಣ ಎಸೆಯುವಂತೆ ರಸ್ತೆ ಬದಿ ಎಸೆದು ಹೋಗಿರುವ ಘಟನೆ ನಡೆದಿದೆ.ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಹೆಣ್ಣು ಶಿಶು ಬೀದಿ ಹೆಣವಾಗಿದೆ. ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ …

Read More »

ತಾಂಜಾನಿಯಾದಲ್ಲಿ ಚುನಾವಣೆ ವೇಳೆ ಹಿಂಸಾಚಾರ – 700 ಮಂದಿ ಸಾವು, ಕರ್ಪ್ಯೂ ಜಾರಿ!

ದೇಶದ ಮೊದಲ ಮಹಿಳಾ ಅಧ್ಯಕ್ಷೆ ಸಮಿಯಾ ಸುಲುಹು ಹಸನ್ ಬುಧವಾರ (ಅಕ್ಟೋಬರ್ 30) ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಸಮಯದಲ್ಲಿ ಪ್ರತಿಭಟನೆಗಳು ಆರಂಭವಾದವು.ಚುನಾವಣಾ ಅವ್ಯವಸ್ಥೆ ನಿರಂತರವಾಗಿ ಮುಂದುವರೆದಿದೆ. ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಬೀದಿಗಿಳಿದ ಗುಂಪುಗಳನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಇಂಟರ್ನೆಟ್ ಸ್ಥಗಿತ ಮತ್ತು ಕರ್ಫ್ಯೂಗಳನ್ನು ಹೇರಿದೆ. ಈ ನಿರ್ಧಾರ ಇಡೀ ದೇಶವನ್ನು ಯುದ್ಧಭೂಮಿಯನ್ನಾಗಿ ಮಾಡಿವೆ.

Read More »

ಅಜ್ಜನ ಮನೆಯಲ್ಲಿ ಕಸದ ಬುಟ್ಟಿಯಲ್ಲಿ ಸಿಕ್ಕ ಕೋಟಿ ಮೌಲ್ಯದ ಷೇರು ಪ್ರಮಾಣಪತ್ರ – ಅಪ್ಪ ಮಗನ ನಡುವೆ ಗಲಾಟೆ.

ಅಜ್ಜನ ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಮೊಮ್ಮಗನಿಗೆ ಕೋಟಿ ಮೌಲ್ಯದ ಷೇರುಗಳ ಪ್ರಮಾಣ ಪತ್ರ ಸಿಕ್ಕಿದೆ. ಇದೀಗ ಅಪ್ಪ ಮತ್ತು ಮಗನ ನಡುವೆ ಗಲಾಟೆಗೆ ಕಾರಣವಾಗಿದ್ದು, ಕೋರ್ಟ್ ಮೆಟ್ಟಿಲೇರಿದೆ.ಅದನ್ನು ಪರಿಶೀಲನೆ ನಡೆಸಿದ ವೇಳೆ ಅವುಗಳು ಷೇರುಗಳ ಪ್ರಮಾಣ ಪತ್ರ ಎಂದು ತಿಳಿದು ಬಂದಿದ್ದು, ಈಗಿನ ಮಾರುಕಟ್ಟೆಯಲ್ಲಿ ಅದರ ಬೆಲೆ ಬರೋಬ್ಬರ 2.5 ಕೋಟಿ ಎಂದು ತಿಳಿದು ಬಂದಿದೆ.ಇದು ಕುಟುಂಬದೊಳಗೆ ವಿವಾದಕ್ಕೆ ಕಾರಣವಾಗಿದೆ. ಷೇರು ಪ್ರಮಾಣಪತ್ರಗಳು ಷೇರುಗಳ ಮಾಲೀಕತ್ವವನ್ನು ಸಾಬೀತುಪಡಿಸಲು ಮೊದಲು ನೀಡಲಾದ …

Read More »