BigTv News
November 1, 2025
Breaking News
ಗಂಡ ತನ್ನ ತಮ್ಮನ ಜೊತೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ. ಆದರೆ ಮೈದುನನ ಜೊತೆ ಮಲಗಲು ಆಕೆ ಒಪ್ಪಿರಲಿಲ್ಲ. ಆಕೆಯ ಗಂಡನ ಅಪ್ಪ-ಅಮ್ಮ ಕೂಡ ಸೊಸೆ ತಮ್ಮ ಕಿರಿಯ ಮಗನ ಜೊತೆ ಸಂಬಂಧ ಹೊಂದಬೇಕೆಂದು ಬಯಸಿದ್ದರು.ಇದಕ್ಕೆ ಆಕೆ ಒಪ್ಪದಿದ್ದಾಗ ಪುಟ್ಟ ಮಗುವಿನ ಜೊತೆ ಆಕೆಯನ್ನು 10 ದಿನ ರೂಂನಲ್ಲಿ ಕೂಡಿಹಾಕಲಾಗಿದೆ.ಆ ರೂಂನಲ್ಲಿ ಅವರಿಗೆ ಆಹಾರ, ನೀರು, ಕರೆಂಟ್, ಟಾಯ್ಲೆಟ್ ಯಾವ ಸೌಲಭ್ಯವನ್ನೂ ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು.
Read More »
BigTv News
November 1, 2025
Breaking News
ಮಂಗಳಮುಖಿಯರ ಗ್ಯಾಂಗ್ ತಮ್ಮ ಜೊತೆಗಾತಿಯನ್ನು ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಡೆದಿದೆ. ಸುಕನ್ಯಾ ಎಂಬ ಮಂಗಳಮುಖಿಯ ತಲೆಬೋಳಿಸಿ ಹಲ್ಲೆ ಮಾಡಿ ವಿಕೃತಿ ಮರೆದಿದೆ.ತಮ್ಮ ಟೀಂ ಬಿಟ್ಟು ಬೇರೊಂದು ತಂಡ ಜೊತೆಗೆ ಹೋಗಿದ್ದಕ್ಕೆ ಆಕ್ರೋಶಗೊಂಡ ಪ್ರೀತಿ, ಚಿನ್ನಿ ಮಂಗಳಮುಖಿಯರ ತಂಡ ಸುಕನ್ಯಾಳನ್ನ ಕೆಆರ್ ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂದು ಬೊಮ್ಮನಹಳ್ಳಿಗೆ ಕರೆದೊಯ್ದು ಹಲ್ಲೆ ಮಾಡಿದೆ.
Read More »
BigTv News
November 1, 2025
Breaking News
ಕೊಪ್ಪಳ :ಪತ್ನಿಯೊಡನೆ ಜಗಳವಾಡಿ ಹಣ ನೀಡುವಂತೆ ಪೀಡಿಸಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿದ್ದ ರಾಮಣ್ಣ ಆರೋಪಿಯಾಗಿದ್ದು, ಆತ ಕುಡಿತದ ಚಟಕ್ಕೆ ಬಿದ್ದು ತನ್ನ ಪತ್ನಿ ದ್ಯಾವಮ್ಮ(ಜ್ಯೋತಿ)ಗೆ ಹಣ ನೀಡುವಂತೆ ಪೀಡಿಸಿ ಬಳಿಕ ಹತ್ಯೆಗೈದಿದ್ದ ಎನ್ನಲಾಗಿದೆ.
Read More »
BigTv News
November 1, 2025
Breaking News
ವಾಟ್ಸ್‌ಆಯಪ್‌ನಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಫೋಟೊ ಬಳಸಿಕೊಂಡು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯೊಬ್ಬರಿಂದ ₹50 ಸಾವಿರ ಪಡೆದು ವಂಚಿಸಿರುವ ಬಗ್ಗೆ ‘ಸೆನ್’ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೋತಿ ಡಿ.ಕಟ್ಟಿಮನಿ ವಂಚನೆಗೆ ಒಳಗಾದವರು.ಹಲೊ ಜ್ಯೋತಿ, ಕೆಲಸ ಹೇಗೆ ನಡೆಯುತ್ತಿದೆ’ ಎಂದು ವಂಚಕರು ವಾಟ್ಸ್‌ಆಯಪ್‌ನಲ್ಲಿ ಇಂಗ್ಲಿಷ್‌ನಲ್ಲಿ ಸಂದೇಶ ಕಳುಹಿಸಿದ್ದರು. ಜಿಲ್ಲಾಧಿಕಾರಿಯೇ ಮೆಸೇಜ್ ಕಳುಹಿಸಿದ್ದಾಗಿ ನಂಬಿದ ಜ್ಯೋತಿ, ‘ಯಾವುದೇ ತೊಂದರೆ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದರು.ಕೆಲ ನಿಮಿಷದ ಬಳಿಕ ಇಂಟರ್‌ನೆಟ್ ಬ್ಯಾಂಕಿಂಗ್‌ನಿಂದ …
Read More »
BigTv News
November 1, 2025
Breaking News
ಮಕ್ಕಳ ಕಡೆಗೆ ಪಟಾಕಿ ಎಸೆದು, ಕೈ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇವಿನಗರ ನಿವಾಸಿ ರಾಜೇಶ್ವರಿ ಕಂದಪ್ಪನವರ ದೂರಿನ ಮೇರೆಗೆ ಹಿರಾನಂದನಿ ನಿವಾಸಿಗಳಾದ ದೀಪಾಂಕ್ಸು ಶಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಕ್ಟೋಬರ್ 22ರಂದು ರಾತ್ರಿ ಮಕ್ಕಳು ಪಟಾಕಿ ಸಿಡಿಸುತ್ತಿದ್ದ ವೇಳೆ ಫ್ಲ್ಯಾಟ್ ಸಂಖ್ಯೆ ಎ-904 ನಿವಾಸಿ ದೀಪಾಂಕ್ಸು ಶಾ ಬಂದು ಅವರತ್ತ ಪಟಾಕಿ ಎಸೆದಿದ್ದಾರೆ. ಆಗ ಬೆಂಕಿ ಕಿಡಿ ತಾಗಿ ಮಗನ …
Read More »
BigTv News
November 1, 2025
Breaking News
ಕೊಲ್ಲಾಪುರ ಪಟ್ಟಣದ ಇಂದಿರಾನಗರ ಕಾಲೋನಿಯ ಸ್ವರ್ಣಲತಾ ಜೀವನ ಸಾಗಿಸುತ್ತಿದ್ದರು. ಸ್ವರ್ಣಲತಾ ತನ್ನ ಪತಿಗೆ ವಿಚ್ಛೇದನ ನೀಡಿದ ನಂತರ ಕಳೆದ ಏಳು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಈ ವೇಳೆ ಅವರು ಅದೇ ಕಾಲೋನಿಯ ವಿಜಯ್ ಕುಮಾರ್ (23) ಎಂಬ ಯುವಕನ ಸ್ನೇಹ ಬೆಳೆಸಿದರು.ಅವನಿಗಿಂತ ಮಹಿಳೆ ಸುಮಾರು 15 ವರ್ಷ ದೊಡ್ಡವರು. ಆದರೆ ಸ್ನೇಹ ಮಿತಿ ಮೀರಿತು. ಅವರು ದೈಹಿಕವಾಗಿ ಹತ್ತಿರವಾದರು.ಆರೋಪಿಯನ್ನು ಬಂಧಿಸಿ ರಿಮಾಂಡ್ಗೆ ಕಳುಹಿಸಿದರು. ಪ್ರಕರಣದ ತನಿಖೆಯ ಸಮಯದಲ್ಲಿ ಆಘಾತಕಾರಿ ಸಂಗತಿಗಳು …
Read More »
BigTv News
November 1, 2025
Breaking News
ಮನೆಯಲ್ಲಿ ರಾತ್ರಿ ‘ಸ್ನೇಹ ಕೂಟ’ಕ್ಕೆ ಆಕ್ಷೇಪಿಸಿದ್ದರಿಂದ ಸಿಟ್ಟಿಗೆದ್ದು ತಾಯಿಯನ್ನೇ ತನ್ನ ಅಪ್ರಾಪ್ತ ಗೆಳೆಯರ ಜತೆ ಸೇರಿ ಕೊಂದು ಬಳಿಕ ಆತ್ಮ*ತ್ಯೆ ಎಂದು ಮಗಳೊಬ್ಬಳು ಕತೆ ಹೆಣೆದಿದ್ದ ಕೃತ್ಯ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಉತ್ತರಹಳ್ಳಿ ನಿವಾಸಿ ನೇತ್ರಾವತಿ (34) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತರ ಅಪ್ರಾಪ್ತ ಮಗಳು ಸೇರಿದಂತೆ ಆಕೆಯ 16-17 ವರ್ಷದ ಐವರು ಗೆಳೆಯರನ್ನು ಬಂಧಿಸಿ ಬಾಲ ಮಂದಿರಕ್ಕೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಕಳುಹಿಸಿದ್ದಾರೆ.
Read More »
BigTv News
October 31, 2025
Breaking News
ಕಾಸರಗೋಡು :ಪ್ರತ್ಯೇಕವಾಗಿ ವಾಸಿಸುವ ಪತ್ನಿ ಹಾಗು ಆರು ವರ್ಷದ ಮೊಮ್ಮಗಳು ನಿದ್ದೆ ಮಾಡಿದ್ದ ಕೊಠಡಿಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕಿಚ್ಚಿಟ್ಟ ವ್ಯಕ್ತಿ ಸುಟ್ಟು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪತ್ನಿ ಮತ್ತು ಮೊಮ್ಮಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಪಾಣತ್ತೂರು ನೆಲ್ಲಿಕುನ್ನು ನಿವಾಸಿ ಜೋಸೆಫ್(65) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅ.30 ರಂದು ರಾತ್ರಿ 10.30 ಕ್ಕೆ ಈ ಘಟನೆ ನಡೆದಿದೆ. ಜೋಸೆಫ್ ಹಾಗು ಪತ್ನಿ ಸಿಸಿಲಿ ಹಲವು ವರ್ಷಗಳಿಂದ ಬೇರೆ …
Read More »
BigTv News
October 31, 2025
Breaking News
ಬೆಳಗ್ಗೆ ಟೀ ಮಾಡಲು ಗ್ಯಾಸ್ ಹಚ್ಚಿದ ವೇಳೆ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.ಲಕ್ಷ್ಮೀಪುರ ಗ್ರಾಮದ ರಿಹಾನ ಎಂಬುವರ ಮನೆಯಲ್ಲಿ ದುರಂತ ಸಂಭವಿಸಿದೆ. ರಿಹಾನಾಳಿಗೆ ಗಾಯಗಳಾಗಿದ್ದು, ಸ್ಥಳೀಯ ಲಕ್ಷ್ಮೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಅಗ್ನಿ ಶಾಮಕ ದಳ ದಾವಿಸಿ ಬೆಂಕಿ ನಂದಿಸಿದೆ. ಘಟನೆಯಿಂದ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
Read More »
BigTv News
October 31, 2025
Breaking News
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆಯ ಭಾಗವಾಗಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ನಾಲ್ವರಿಗೆ ಎಸ್‌ಐಟಿ ಇದೀಗ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮರು ನೋಟಿಸ್‌ನಲ್ಲಿ ವಿಠಲ್ ಗೌಡ ಅ. 31ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಲಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ.ಅವರನ್ನು ನ. 3ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಉಜಿರೆ ತಿಮರೋಡಿ ಮನೆ ಹಾಗೂ ವಿಠಲ್ ಗೌಡ ಮನೆಯ ಬಾಗಿಲಿಗೆ ನೋಟಿಸ್ …
Read More »