ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆಯ ಭಾಗವಾಗಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ನಾಲ್ವರಿಗೆ ಎಸ್‌ಐಟಿ ಇದೀಗ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮರು ನೋಟಿಸ್‌ನಲ್ಲಿ ವಿಠಲ್ ಗೌಡ ಅ. 31ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಲಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ.ಅವರನ್ನು ನ. 3ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಉಜಿರೆ ತಿಮರೋಡಿ ಮನೆ ಹಾಗೂ ವಿಠಲ್ ಗೌಡ ಮನೆಯ ಬಾಗಿಲಿಗೆ ನೋಟಿಸ್ ಹಚ್ಚಲಾಗಿದೆ. ಬೆಂಗಳೂರಿನಲ್ಲಿ ಜಯಂತ್ ಹಾಗೂ ಮಟ್ಟಣ್ಣನವರ್‌ಮನೆಗೆ ತೆರಳಿ ನೋಟಿಸ್ ಜಾರಿ ಮಾಡಲಾಗಿದೆ.ಈ ನಾಲ್ವರಿಗೆ ಕಳೆದ ವಾರ ನೋಟಿಸ್ ನೀಡಿ ಅ. 27ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು. ಆದರೆ ಯಾರೂ ಕೂಡ ವಿಚಾರಣೆಗೆ ಬಂದಿರಲಿಲ್ಲ. ಸುಜಾತಾ ಭಟ್ ಮಾತ್ರ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿ ತೆರಳಿದ್ದರು. ಅ. 27ರಂದು ನಾಲ್ವರ ಪರ ನ್ಯಾಯವಾದಿಗಳು ಎಸ್‌ಐಟಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಕಾಲಾವಕಾಶ ಕೇಳಿದ್ದರು. ಅದರಂತೆ ತಿಮರೋಡಿಗೆ 7 ದಿನಗಳು ಹಾಗೂ ಉಳಿದ ಮೂವರಿಗೆ ಮೂರು ದಿನಗಳ ಸಮಯಾವಕಾಶ ನೀಡಲಾಗಿತ್ತು. ಇದೀಗ ಮತ್ತೆ ನೋಟಿಸ್ ಜಾರಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

