ಧನ್‌ಬಾದ್: ಹಳೆಯ ಕಬ್ಬಿಣ ಕದಿಯುವ ಪ್ರಯತ್ನದಲ್ಲಿ ಅನಿಲ ಸೋರಿಕೆಯಾಗಿ ಮೂವರು ಮೃತಪಟ್ಟ ಘಟನೆ ಜಾರ್ಖಂಡ್‌ನ ಮುನಿಡಿಹ್‌ನಲ್ಲಿ ನಡೆದಿದೆ. ಭಾನುವಾರ ಮುಂಜಾನೆ ಕಬ್ಬಿಣದ ಸ್ಕ್ರ್ಯಾಪ್ ಕದಿಯಲು ಹೋದ ತಂಡವು ಅನಿಲ ತುಂಬಿದ್ದ ಸಿಲಿಂಡರ್ ಕತ್ತರಿಸಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತೀವ್ರ ಪ್ರಮಾಣದಲ್ಲಿ ಅನಿಲ ಹೊರಬಂದಿದ್ದು, ಅದನ್ನು ಸೇವಿಸಿದ ಮೂವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ ಇತರ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

