Breaking News

Breaking News

‘ಟೋಲ್’ ಕಟ್ಟದೇ ಮುನ್ನುಗ್ಗಿ ಬೈಕ್ ಸವಾರರ ಮೇಲೆ ಬಸ್ ಹತ್ತಿಸಿದ ಚಾಲಕ : ಸ್ಥಳದಲ್ಲೇ ಇಬ್ಬರು ಸಾವು

ಟೋಲ್ ಕಟ್ಟದೇ ಮುಂದೆ ನುಗ್ಗಿ ಚಾಲಕನೋರ್ವ ಬೈಕ್ ಸವಾರರ ಮೇಲೆ ಬಸ್ ಹತ್ತಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕುಶಿನಗರ ಮತ್ತು ಡಿಯೋರಿಯಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರ್ಯ ಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.ದೆಹಲಿ ಮೂಲಕ ಬಿಹಾರಕ್ಕೆ ಹೋಗುತ್ತಿದ್ದ ಖಾಸಗಿ ಐಷಾರಾಮಿ ಬಸ್ ಇದಾಗಿದ್ದು, ಮೋಟಾರ್ ಸೈಕಲ್ನಲ್ಲಿ ಬಂದ ಅಬ್ರಾರ್ ಅನ್ಸಾರಿ (20) ಮತ್ತು ಅವರ ಚಿಕ್ಕಪ್ಪ ಅಲೀಮ್ ಅನ್ಸಾರಿ (50) …

Read More »

“ವೋಟ್ ಚೋರ್ ಗದ್ದಿ ಛೋಡ್” ಅಭಿಯಾನ ಹುಬ್ಬಳ್ಳಿಯಲ್ಲಿ ಆರಂಭ!

ಹುಬ್ಬಳ್ಳಿ — ಹಳೆ ಹುಬ್ಬಳ್ಳಿಯ ಬೀರಬಂದ್ ಓಣಿಯ ಮುಖ್ಯ ಸರ್ಕಲ್‌ನಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ “ವೋಟ್ ಚೋರ್ ಗದ್ದಿ ಛೋಡ್” ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನ ವೇಳೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮಯೂರ ಜಯಕುಮಾರ್ ಹೇಳುವಂತೆ — “ಪ್ರಜಾಪ್ರಭುತ್ವ ಉಳಿವಿಗಾಗಿ ಈ ಹೋರಾಟ ನಡೆಸುತ್ತಿದ್ದೇವೆ, ಈಗಾಗಲೇ ಕರ್ನಾಟಕದಲ್ಲಿ ಒಂದು ಕೋಟಿ ಸಹಿ ಸಂಗ್ರಹಿಸಿದ್ದೇವೆ.” ಈ ವೇಳೆ ಶಾಸಕ ಪ್ರಸಾದ್ …

Read More »

ಕೆಲಸ ಬಿಟ್ಟು ಬಾಡಿಗೆ ಕಾರಿನಲ್ಲಿ ವಸೂಲಿ – ಬೀದಿ ರೌಡಿಗಳಿಗಿಂತ ತುಚ್ಛವಾಗಿ ವರ್ತಿಸಿದ ಪೊಲೀಸರು!

ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರು ತಾವೇ ಡ್ಯೂಟಿ ಬಿಟ್ಟು ಹಣ ವಸೂಲಿಗೆ ಇಳಿದಿದ್ದಲ್ಲದೇ ದೌರ್ಜನ್ಯ ನಡೆಸಿದ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ನಡೆದಿದೆ.ಮೈಸೂರಿನ ಸರಗೂರು ಪೊಲೀಸ್ ಠಾಣೆ ಪೇದೆಗಳಿಂದ ದೌರ್ಜನ್ಯ ಆರೋಪ ಕೇಳಿ ಬಂದಿದೆ.ಮೈಸೂರಿನ ಮೇಟಗಳ್ಳಿಯಲ್ಲಿ ಘಟನೆ ನಡೆದಿದ್ದು, ಸರಗೂರು ಪೊಲೀಸ್ ಪೇದೆಗಳಾದ ಕೃಷ್ಣಯ್ಯ, ಸುನೀಲ್ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಹೆಂಡತಿ ಮಕ್ಕಳು ಚೀರಾಡಿದರೂ ಬಿಡದೆ ಅವರನ್ನು ರಸ್ತೆಗೆ ಎಳೆದು ತಂದು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Read More »

ಬಾತ್‌ರೂಮ್‌ಗೆ ಹೋಗಿ ಬರುವುದಾಗಿ ಹೇಳಿ ತಪ್ಪಿಸಿಕೊಂಡ ಕೈದಿ; ಮತ್ತೆ ಪೊಲೀಸ್‌ ವಶಕ್ಕೆ

ಬಾತ್ ರೂಮ್ ಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಓಡಿಹೋಗಿದ್ದ ಕೈದಿಯನ್ನು ಬೆಳಗಾವಿ ನಗರದ ಹಿಂಡಲಗಾ ಪೊಲೀಸರು ಮತ್ತೆ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್ ಲಂಬುಗೋಳ ಬಂಧಿತ ಕೈದಿ. ಪೋಕ್ಸೋ ಕೇಸ್ ನಲ್ಲಿ 20ವರ್ಷಗಳ ಕಾಲ ಶಿಕ್ಷೆಗೆ ಒಳಪಟ್ಟ ಈತನನ್ನು ಅನಾರೋಗ್ಯದ ಹಿನ್ನೆಲೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ನಡೆದಿದೆ.ಬೆಳಿಗ್ಗೆ 8.35ಕ್ಕೆ ಬಾತ್ ರೂಮಗೆ ಹೋಗಿ ಬರೋದಾಗಿ ಹೇಳಿ ತಪ್ಪಿಸಿಕೊಂಡು ಹೋಗಿದ್ದ ಕೈದಿ …

Read More »

ರಾಜ್ಯದಲ್ಲಿ ಮತ್ತೊಂದು `ಬೆಚ್ಚಿ ಬೀಳಿಸುವ’ ಕೃತ್ಯ : ಸರ್ಕಾರಿ ಶಾಲೆ ಶಿಕ್ಷಕಿಯ ವಿವಸ್ತ್ರಗೊಳಿಸಿ ಸೀರೆಯಿಂದ ಮರಕ್ಕೆ ಕಟ್ಟಿ ಹಾಕಿ ಹಲ್ಲೆ.!

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ, ಸೀರೆಯಿಂದ ಮರಕ್ಕೆ ಕಟ್ಟಿ ಹಾಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾಲೆ ಮುಗಿಸಿ ಮನೆಗೆ ವಾಪಸ್ ಆಗುವಾಗ 25 ವರ್ಷದ ಶಿಕ್ಷಕಿ ಮೇಲೆ ಹಲ್ಲೆ ನಡೆಸಲಾಗಿದೆ. ಮರಕ್ಕೆ ಕಟ್ಟಿ ಹಾಕಿ ವಿವಸ್ತಗೊಳಿಸಿದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಕೂಗಾಟ …

Read More »

ಹಾಡಹಗಲೇ ಅಂಗಡಿಯಿಂದ ಲಕ್ಷಾಂತರ ರೂ. ನಗದು ಕಳ್ಳತನ!

ಹಾಡಹಗಲೇ ಅಂಗಡಿಯೊಂದರಿಂದ ಲಕ್ಷಾಂತರ ರೂ ನಗದು ಕಳವುಗೈದ ಘಟನೆ ಇಂದು ಉಪ್ಪಿನಂಗಡಿಯಲ್ಲಿ ನಡೆದಿದೆ.ಇಂದು ಮಧ್ಯಾಹ್ನದ ವೇಳೆ ಈ ಕಳವು ಕೃತ್ಯ ನಡೆದಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಕಳ್ಳತನ ನಡೆದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಅದರ ರೀಚಾರ್ಜ್ ಮಾಡಿಸದೆ ಬಿಟ್ಟಿದ್ದರು.ಇನ್ನೂ ಆಶ್ಚರ್ಯವೆಂದರೆ, ಕಳ್ಳತನದ ವೇಳೆ ಅಂಗಡಿಯ ಬಾಗಿಲೇ ಹಾಕಿರಲಿಲ್ಲ, ಹಾಗೂ ಕ್ಯಾಮರಾವನ್ನೂ ಆಫ್ ಮಾಡಿದ್ದರು ಎನ್ನಲಾಗಿದೆ.ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುವ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮರ ಅಳವಡಿಸಿರಲಿಲ್ಲ. ಪರವಾನಿಗೆ ನೀಡುವಾಗ …

Read More »

ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಲಾರಿ.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿಯೊಂದು ಹರಿದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದ ಸಿಗ್ನಲ್‌ನಲ್ಲಿ ವೃದ್ಧನೋರ್ವ ಭಿಕ್ಷೆ ಬೇಡುತ್ತಾ ರಸ್ತೆ ದಾಡುತ್ತಿದ್ದಾಗ ಲಾರಿ ಚಾಲಕನೋರ್ವ ಲಾರಿಯನ್ನು ಮುಂದೆ ಚಲಾಯಿಸಿದ ಪರಿಣಾಮ ಭಿಕ್ಷುಕ ವೃದ್ದ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.ಅಪಘಾತದ ಭೀಕರ ದೃಶ್ಯ ಅಲ್ಲಿಯೇ ಇದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸದ್ಯ ಬೆಳಗಾವಿ ಉತ್ತರ ಸಂಚಾರಿ ಪೊಲೀಸರು ಅಪಘಾತ ಮಾಡಿದ ಲಾರಿ, ಲಾರಿ ಚಾಲಕನನ್ನ ವಶಕ್ಕೆ …

Read More »

ದೊಡ್ಡಬಳ್ಳಾಪುರ : ಅಪಘಾತದಲ್ಲಿ ಇಬ್ಬರು ಯುವಕರ ಸಾವು

ರಾಮಯ್ಯನಪಾಳ್ಯದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮೃತರನ್ನು ಚಿಕ್ಕತಿಮನಹಳ್ಳಿ ಗ್ರಾಮದ ನಂದನ್‌ಕುಮಾರ್‌ (22), ರವಿಕುಮಾರ್‌ (24) ಎಂದು ಗುರುತಿಸಲಾಗಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರೂ ಕೆಲಸದ ನಿಮಿತ್ತ ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ವೇಳೆ, ರಾಮಯ್ಯನಪಾಳ್ಯದ ಬಳಿ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ. ಈ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಆಟೋವೊಂದು ಕೆಳಗೆ ಬಿದ್ದಿದ್ದ ಇವರ ಮೇಲೆ ಹರಿದು ಈ ಘಟನೆ ಸಂಭವಿಸಿದೆ.ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ …

Read More »

ಬಾಗಲಕೋಟೆಯಲ್ಲಿ ದೀಪಾವಳಿ ಹಬ್ಬದಂದು ಅಗ್ನಿ ದುರಂತ ಕೇಸ್ : ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವು!

ಬಾಗಲಕೋಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ದೀಪಾವಳಿಯಂದೆ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಒಂದು ಅಗ್ನಿ ದುರಂತದಲ್ಲಿ ಎಂಟು ಬೈಕ್ಗಳು ಹಾಗೂ ಮನೆಯ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸ್ನೇಹ ಮೇದಾರ ಸಾವನಪ್ಪಿದ್ದಾಳೆ.ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ನೇಹ ಚಿಕಿತ್ಸೆ ಪಡೆಯುತ್ತಿದ್ದಾಲಿ. ಆದರೆ l ಚಿಕಿತ್ಸೆ ಫಲಿಸದೆ ಸ್ನೇಹ ಸಾವನ್ನಪ್ಪಿದ್ದಾಳೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಘಟನೆ ನಡೆದಿತ್ತು ಹಬ್ಬಕ್ಕೆ ಹಚ್ಚಿದ ದೀಪಗಳಿಂದ ಬೆಂಕಿ …

Read More »

ಕುಸಿದುಬಿದ್ದು ಆಟೋ ಚಾಲಕ ಸಾವು

ಸರಕು ಸಾಗಾಣಿಕೆ ಆಟೋದ ಚಾಲಕನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವೀನ್‌ಕುಮಾರ್‌(25) ಮೃತ ಚಾಲಕ. ಭುವನೇಶ್ವರಿ ನಗರದಲ್ಲಿ ತಮ ಅಣ್ಣ ವಸಂತ್‌ ಅವರೊಂದಿಗೆ ನವೀನ್‌ಕುಮಾರ್‌ ವಾಸವಾಗಿದ್ದು ಟಾಟಾಏಸ್‌‍ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.ಕಳೆದ ಎರಡು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮನೆ ಹತ್ತಿರದ ಆಸ್ಪತ್ರೆಯೊಂದರಲ್ಲಿ ನವೀನ್‌ ಕುಮಾರ್‌ ಚಿಕಿತ್ಸೆ ಪಡೆದಿದ್ದರು. ಆದರೆ ಮುಂಜಾನೆ 4 ಗಂಟೆ ಸಂದರ್ಭದಲ್ಲಿ ಪುನಃ ಎದೆನೋವು ಕಾಣಿಸಿಕೊಂಡಿದ್ದು, …

Read More »