BigTv News
October 26, 2025
Breaking News
ಹೆಬಸೂರು ಯಮನೂರ ನಡುವೆ ರಸ್ತೆಯಲ್ಲಿ ಇಂದು ಬೆಳಗ್ಗೆ ಗಡಿಯೊಂದು ಪಲ್ಟಿ ಯಾಗಿದ್ದು, ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಾಡಿ ಪಲ್ಟಿ ಯಾಗಿದೆ. ಓವರ್ ಲೋಡ್ ಕೂಡ ಇರಬಹುದು, ಎಂದು ಹೇಳಲಾಗುತ್ತಿದೆ. ಸಾರ್ವಜನಿಕರು ಚಾಲಕಾನಿಗೆ ಸಹಾಯ ಮಾಡಿದ್ದೂ ಯಾವುದೇ ಹಾನಿ ಸಂಭವಿಸಿಲ್ಲ. ರಸ್ತೆ ತಿರುವಿನಲ್ಲಿ ಹೆಚ್ಚು ಅಪಘಾತ ಆಗುತ್ತಿದ್ದೂ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.
Read More »
BigTv News
October 26, 2025
Breaking News
ಹುಣಸಗಿ ತಾಲೂಕಿನ ಕೊಡೇಕಲ್ ದೀಪಾವಳಿ ಅಮವಾಸ್ಯೆ ದಿನ ಮನೆಯಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶನಿವಾರ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೊಡೇಕಲ್ ಗ್ರಾಮದ ಶರಣಪ್ಪ ಹಡಪದ ಎಂಬುವರ ಮಗಳು ಸೌಜನ್ಯ (17) ಶಹಾಪೂರ ತಾಲೂಕಿನ ಗೋಗಿ ಬಳಿಯ ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.ಕೊಡೇಕಲ್ ಠಾಣೆಯಲ್ಲಿ ನಾಪತ್ತೆ ಹಾಗೂ ಅಪಹರಣ ಕುರಿತಾಗಿ ಪ್ರಕರಣ.ಪೊಲೀಸ್ ಠಾಣೆಯವರರು ಕಾಲುವೆಯಲ್ಲಿ ಗುರುತು ಸಿಗದ ಸ್ಥಿತಿಯಲ್ಲಿದ ಶವದ ಫೋಟೋವನ್ನು ಕೊಡೇಕಲ್ ಪೊಲೀಸ್ ಅಪ್ರಾಪ್ತ ಸೌಜನ್ಯಳ ಪಾಲಕರು …
Read More »
BigTv News
October 26, 2025
Breaking News
ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಹೋಂ ಸ್ಟೇನಲ್ಲಿ ನಡೆದಿದೆ.ಬೇಲೂರು ತಾಲೂಕು ದೇವಲಾಪುರದ 27 ವರ್ಷದ ರಂಜಿತಾ ಮೃತಪಟ್ಟ ಯುವತಿ. ಅವರ ಕುಟುಂಬದವರು ಮೂಡಿಗೆರೆಯಲ್ಲಿ ವಾಸವಾಗಿದ್ದಾರೆ.ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ, ಇಲ್ಲವೇ ಹೃದಯಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Read More »
BigTv News
October 26, 2025
Breaking News
ನಗರದ ಬಲ್ಮಠ ನಿವಾಸಿ, ಪ್ರತಿಷ್ಠಿತ ಉದ್ಯಮಿ ಮತ್ತು ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಕಸ್ತೂರಿ ಪ್ರಭಾಕರ್ ಪೈ (75) ಅವರು ಶನಿವಾರ (ಅ.25) ಸಂಜೆ 7:00 ಗಂಟೆಗೆ ಅಲ್ಪಕಾಲದ ಅನಾರೋಗ್ಯದ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರ ಅಂತಿಮ ದರ್ಶನ ಭಾನುವಾರ (ಅ. 26) ಬೆಳಿಗ್ಗೆ 9:00 ಗಂಟೆಗೆ ಅವರ ನಿವಾಸ “ಪ್ರಕೃತಿ”, ಬಲ್ಮಠ ಕಲೆಕ್ಟರ್ಸ್ ಗೇಟ್ (ಡಿಸಿ ಬಂಗಲೆ ಪಕ್ಕದಲ್ಲಿ) ಇಲ್ಲಿ ನೆರವೇರಲಿದೆ.
Read More »
BigTv News
October 26, 2025
Breaking News
ಬಾಲಿವುಡ್‌ನ ಹಿರಿಯ ನಟ ಸತೀಶ್ ಶಾ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು.
Read More »
BigTv News
October 26, 2025
Breaking News
ಶಾಲೆಗೆಂದು ತೆರಳಿದ್ದಂತ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ಇಬ್ಬರು ವಿದ್ಯಾರ್ಥಿನಿಯರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವುದಾಗಿ ಪೊಲೀಸರು ಕೋಲಾರ ಠಾಣೆಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಇಂದು ಬೆಂಗಳೂರಲ್ಲಿ ಸುರಕ್ಷಿತವಾಗಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
Read More »
BigTv News
October 26, 2025
Breaking News
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಬುಲ್ದಾನಾದಲ್ಲಿ ಗಂಡ-ಹೆಂಡತಿ ನಡುವಿನ ಜಗಳ ಅಮಾಯಕ ಅವಳಿ ಮಕ್ಕಳ ಕತ್ತು ಸೀಳಿ ಕೊಲೆಯಾಗುವುದರೊಂದಿಗೆ ಅಂತ್ಯವಾಗಿದೆ. ಅವಳಿ ಮಕ್ಕಳನ್ನು ಕೊಂದ ವ್ಯಕ್ತಿಯನ್ನು ರಾಹುಲ್ ಚವಾಣ್ ಎಂದು ಗುರುತಿಸಲಾಗಿದೆ. ಗಂಡ-ಹೆಂಡತಿ ನಡುವೆ ಗಲಾಟೆ ಆಗುತ್ತಿದ್ದ ಸಮಯದಲ್ಲಿಯೇ ಸಿಟ್ಟಿಗೆದ್ದ ಹೆಂಡತಿ ಇಡೀ ಕುಟುಂಬವನ್ನೇ ತೊರೆದು ತವರುಮನೆಗೆ ಸೇರಿಕೊಂಡಿದ್ದಳು.ಹೆಂಡತಿ ತನ್ನ ಬಿಟ್ಟು ತವರು ಮನೆಗೆ ಹೋದ ಸಿಟ್ಟಿನಲ್ಲಿಯೇ ಆ ವ್ಯಕ್ತಿ ತನ್ನ ಎರಡು ವರ್ಷದ ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ …
Read More »
BigTv News
October 26, 2025
Breaking News
ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಇಂಥಹದ್ದೊಂದು ಆರೋಪ ಕೇಳಿಬರುತ್ತಿದ್ದು, ಈ ಕುರಿತಂತೆ ಸಾಕಷ್ಟು ಮಾಧ್ಯಮಗಳು ವರದಿಗಳನ್ನು ಪ್ರಕಟಿಸುತ್ತಿದೆ.
Read More »
BigTv News
October 26, 2025
Breaking News
ಹೈದರಾಬಾದ್ ನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಐಷಾರಾಮಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾದ ಪರಿಣಾಮ ಇಪ್ಪತ್ತು ಮಂದಿ ಗಾಯಗೊಂಡಿರುವ ಘಟನೆ ಶನಿವಾರ (ಅ.25) ಬೆಳಿಗ್ಗೆ ಸಂಭವಿಸಿದೆ .ಬಸ್ಸಿನಲ್ಲಿದ್ದ ಎಲ್ಲಾ 20 ಮಂದಿಯೂ ಗಾಯಗೊಂಡಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .ಬಸ್ಸು ಶನಿವಾರ ಮುಂಜಾನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಪೆದ್ದಾ ಅಂಬರ್ ಪೇಟೆಯ ತಿರುವಿನಲ್ಲಿ ಸಂಚರಿಸುತ್ತಿದ್ದಂತೆ …
Read More »
BigTv News
October 25, 2025
Breaking News
ನವದೆಹಲಿ: ಹಿರಿಯ ಬಾಲಿವುಡ್ ಮತ್ತು ಟಿವಿ ನಟ ಸತೀಶ್ ಶಾ ನಿಧನರಾಗಿದ್ದಾರೆ. ನಿರ್ದೇಶಕ ಅಶೋಕ್ ಪಂಡಿತ್ ವೀಡಿಯೊ ಹಂಚಿಕೊಳ್ಳುವ ಮೂಲಕ ಇದನ್ನು ದೃಢಪಡಿಸಿದ್ದಾರೆ. ಅವರು ತಮ್ಮ ನಟನಾ ವೃತ್ತಿಜೀವನದುದ್ದಕ್ಕೂ ಹಲವಾರು ಅಪ್ರತಿಮ ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಗಮನಾರ್ಹ ಪಾತ್ರಗಳಲ್ಲಿ ಕಲ್ ಹೋ ನಾ ಹೋ, ಜಾನೆ ಭಿ ದೋ ಯಾರೋ, ಸಾರಾಭಾಯ್ ವರ್ಸಸ್ ಸಾರಾಭಾಯ್, ಮೈ ಹೂ ನಾ ಸೇರಿವೆ.
Read More »