ಧಾರವಾಡ: ಆಧ್ಯಾತ್ಮಿಕತೆಯ ಚಿಂತನೆಯತ್ತ ಸಮಾಜ ಉದ್ದಾರಕ್ಕಾಗಿ ಹಂಬಲಿಸಿದ ದೇವರು ಮಣಕವಾಡದ ಮೃತ್ಯುಂಜಯ ಸ್ವಾಮೀಜಿ. ಬಸವಾದಿ ಶರಣ ಚಿಂತನೆಗಳ ಭಕ್ತಿ ಪ್ರವಾಹದಿಂದ ಸಮಾಜದ ಉದ್ದಾರಕ್ಕಾಗಿ ಮೃತ್ಯುಂಜಯ ಶಿವಶರಣರು ತಮ್ಮ ಜೀವನದ ಆದರ್ಶಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.ಧಾರವಾಡ ಜಿಲ್ಲೆ ಮಣಕವಾಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತವಾಗಿ ಆಯೋಜಿಸಲಾಗಿರುವ ಬಸವ ಪುರಾಣದಲ್ಲಿ ಮಣಕವಾಡದ ಮೃತ್ಯುಂಜಯ ಸ್ವಾಮೀಗಳ ಕುರಿತಾಗಿ ಮಾತನಾಡಿದ ಅವರು, ಮಣಕವಾಡದ ಮೃತ್ಯುಂಜಯ ಅಪ್ಪಗಳು ದೇವಚೇತನ ಅವರು ನಡೆದು ಬಂದಿರುವ ದಾರಿಗೆ ಶ್ರೀ ಮಠಕ್ಕೆ ಹರಿದು ಬರುತ್ತಿರುವ ಭಕ್ತ ಕೋಟಿಯೇ ಸಾಕ್ಷಿ. ಹನ್ನೆರಡನೇ ಶತಮಾನದ ಶಿವಶರಣರಂತೆ ಜೀವನದುದ್ದಕ್ಕೂ ಕಾಯಕದಿಂದ ಕೈಲಾಸಕಂಡವರು ಸಮಾಜದ ಅಡೆತಡೆ ತಿದ್ದುವ ಮೂಲಕ ಬಂದ ಭಕ್ತರ ಭವ ಭಯ ದೂರಮಾಡಿದ ದೇವಸ್ವರೂಪ ಮೃತ್ಯುಂಜಯ ಸ್ವಾಮೀಜಿಗಳು ಅವರಂತೆ ಸಿದ್ಧರಾಮದೇವರು ಅಭಿನವ ಮೃತ್ಯುಂಜಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಭಕ್ತರಲ್ಲಿ ಆತ್ಮವಿಶ್ವಾಸ ಕಾಯಕದತ್ತ ಜೀವನ ಇದೆಲ್ಲ ಮೃತ್ಯುಂಜಯ ಸ್ವಾಮೀಜಿಗಳ ಆದರ್ಶ. ಕಡಿಮೆ ಮಾತನಾಡುವ ಮೂಲಕ ಸಮಾಜದ ಅಡೆ ತಡೆಗಳನ್ನು ಗಮನಿಸಿ ಅದನ್ನು ತಿದ್ದಿ ಭಕ್ತರ ಮನದ ಹಾಗೂ ಮನೆಯ ಆರಾಧ್ಯದೈವ ಆಗಿದ್ದಾರೆ.ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿನೊಲ್ಲೆ, ಹಿರಿದಪ್ಪ ರಾಜ್ಯವಿತ್ತಡೆ ವಲ್ಲೆ ನಿಮ್ಮ ಶರಣರ ಸಂಗವೊಂದಿದ್ದರೆ ಸಾಕು ಎಂಬಂತೆ ತಮ್ಮ ಆದರ್ಶ ಬದುಕಿನುದ್ದಕ್ಕೂ ಭಕ್ತಕೋಟಿ ಉದ್ದಾರಕ್ಕಾಗಿ ಶ್ರಮಿಸಿದ ದೇವರು ಮೃತ್ಯುಂಜಯ ಸ್ವಾಮೀಜಿಗಳು ಎಂದು ಅವರು ತಿಳಿಸಿದರು.ಭವ್ಯ ರಂಗ ಸಜ್ಜಿಕೆಯಲ್ಲಿ ನಡೆದ ಕಾರ್ಯಕ್ರಮ ಸ್ವರ್ಗವೇ ಮೈದಳೆದಂತಿತ್ತು. ಸುಮಾರು ನಾಲವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪುರಾಣ ವೀಕ್ಷಣೆಗೆ ಆಗಮಿಸಿರುವುದು ವಿಶೇಷವಾಗಿತ್ತು. ಮಣಕವಾಡದ ಹಾಗೂ ಸುತ್ತ ಮುತ್ತಲಿನ ಗ್ರಾಮದ ಜನರು ಬಸವಬುತ್ತಿ ಹೊತ್ತು ಮಠದತ್ತ ನಡೆಯುವುದನ್ನು ನೋಡುವುದೇ ಒಂದು ಸಡಗರ ಎನ್ನುವಂತೆ ಮಹಿಳೆಯರು ಸಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಆಭರಣಗಳಿಂದ ಅಲಂಕೃತರಾಗಿ ಹಣೆಯ ಮೇಲೆ ವಿಭೂತಿ ಧರಿಸುತ್ತ ಶ್ರೀಮಠದತ್ತ ಆಗಮಿಸಿರುವುದು ವಿಶೇಷವಾಗಿತ್ತು. ಬಸವ ಬುತ್ತಿಯಲ್ಲಿ ಪುರಿ, ರೊಟ್ಟಿ, ಚಟ್ನಿ, ಕಾಳು ಪಲ್ಲೆ, ಕಡುಬು ಹೋಳಿಗೆ ಸೇರಿದಂತೆ ಹಲವಾರು ರೀತಿಯ ಅಡುಗೆಯನ್ನು ಬುಟ್ಟಿಯಲ್ಲಿ ಹೊತ್ತು ವೇದಿಕೆಯತ್ತ ನಡೆದರು.ಬಸವಪುರಾಣ ಕಾರ್ಯಕ್ರಮದಲ್ಲಿ ಹಾವೇರಿ ಹುಕ್ಕೇರಿ ಮಠದ ಸ್ವಾಮೀಜಿ, ಹಾನಗಲ್ ಗುರುಕುಮಾರೇಶ್ವರ ಮಠದ ಸ್ವಾಮೀಜಿ, ತುಪ್ಪದ ಕುರಹಟ್ಟಿ ಸ್ವಾಮೀಜಿ, ಕುಂದಗೋಳ ಬಸವಣ್ಣಜ್ಜನವರು, ಸಿದ್ಧರಾಮದೇವರ ಸೇರಿದಂತೆ ಇತರರು ಉಪಸ್ಥಿತರಿದ್ದರು
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





