ಧಾರವಾಡ: ಗ್ಯಾಸ್ ಸಿಲಿಂಡರ್ ನ್ನು ಮನೆ, ಮನೆಗೆ ಹೋಗಿ ವಿತರಣೆ ಮಾಡುವ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಸಿಲಿಂಡರ್ ವಿತರಣೆ ಮಾಡುವ ಸಿಬ್ಬಂದಿಯಿಂದ ಅನ್ಯ ಕೆಲಸಗಳನ್ನೂ ಮಾಡಿಸಲಾಗುತ್ತಿದೆ. ಕೇವಲ ವಿತರಣೆ ಮಾಡುವ ಕೆಲಸವಷ್ಟೇ ಅಲ್ಲದೇ ಓಟಿಪಿ ಅಪ್ಲೇಟ್ ಮಾಡಿಸುವುದು, ಪಂಚ್ ಮಾಡಿಸುವ ಕೆಲಸವನ್ನು ಮಾಡಿಸಲಾಗುತ್ತಿದೆ. ಈ ಕೆಲಸ ಸಿಬ್ಬಂದಿಗೆ ಹೊರೆಯಾಗುವ ಜೊತೆಗೆ ಮಾನಸಿಕ ಹಿಂಸೆ ಕೂಡ ಆಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದರು.
ಧಾರವಾಡದಾದ್ಯಂತ ಸುಮಾರು 100ಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಸಿಬ್ಬಂದಿ ಇದ್ದು, ಅವರೆಲ್ಲ ಬುಧವಾರ ವಿತರಣಾ ಕಾರ್ಯ ಕೈ ಬಿಟ್ಟು ಪ್ರತಿಭಟನೆ ನಡೆಸಿದರು. ಗ್ಯಾಸ್ ಸಿಲಿಂಡರ್‌ನ್ನು ಸರಿಯಾದ ಸಮಯಕ್ಕೆ ಗ್ರಾಹಕರ ಮನೆಗೆ ತಲುಪಿಸುವ ಕೆಲಸವನ್ನಷ್ಟೇ ವಿತರಕರ ಕಡೆಯಿಂದ ಮಾಡಿಸಬೇಕು ಅದನ್ನು ಬಿಟ್ಟು ಬೇರೆ ಬೇರೆ ಕೆಲಸವನ್ನು ಮಾಡಿಸಬಾರದು ಎಂದು ಸಿಬ್ಬಂದಿ ಆಗ್ರಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

