Breaking News

Breaking News

ಚಿಕ್ಕಬಳ್ಳಾಪುರ ಅಪಘಾತ: ತನ್ನವರನ್ನು ಕಳೆದುಕೊಂಡು ಅನಾಥೆಯಾದ ಮಹಿಳೆ.

ಶಿಡ್ಲಘಟ್ಟ ತಾಲ್ಲೂಕಿನ ಬರುಡುಗುಂಟೆ ಗ್ರಾಮದ ಬಳಿ ಗುರುವಾರ ರಾತ್ರಿ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವಂತ ದಾರುಣ ಘಟನೆ ನಡೆದಿದೆ.ಚಿಂತಾಮಣಿ ತಾಲೂಕಾಸ್ಪತ್ರೆ ಬಳಿ ಮೃತರ ಶವಗಳನ್ನ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದ ನಾಲ್ವರು ಗಂಡು ವಾರಸುದಾರರನ್ನು ಕಳೆದುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Read More »

ರಸ್ತೆ ಮಧ್ಯೆ ನಿಂತ ಕಾಡಾನೆ.. ಬರೋಬ್ಬರಿ 18 ಗಂಟೆ ರಸ್ತಯಲ್ಲೇ ಬಾಕಿಯಾದ ವಾಹನ ಸವಾರರು.

ಕೇರಳದ ಅತಿರಪಲ್ಲಿ – ಮಲಕ್ಕಪ್ಪರ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಉಪಟಳ ಇಂದು ನಿನ್ನೆಯದಲ್ಲ ರಾತ್ರಿ ಹೊತ್ತು ಈ ಮಾರ್ಗದಲ್ಲಿ ಸಂಚರಿಸುವುದು ಸಾಹಸವೇ ಸರಿ ಅದರಂತೆ ಕಳೆದ ಭಾನುವಾರ ( ಅ . 19 ) ಮಧ್ಯಾಹ್ನ ರಸ್ತೆಗೆ ಬಂದು ಅಡ್ಡ ನಿಂತ ಕಾಡಾನೆ ಸೋಮವಾರ ಬೆಳಿಗ್ಗೆ ವರೆಗೆ ಸುಮಾರು 18 ಗಂಟೆಗಳ ಕಾಲ ರಸ್ತೆ ಮಧ್ಯದಲ್ಲೇ ನಿಂತು ವಾಹನ ಸವಾರರಿಗೆ ಅನ್ನ ನೀರು ಇಲ್ಲದೆ ವಾಹನದಲ್ಲೇ ಕುಳಿತು ಪರದಾಡುವ ಸ್ಥಿತಿ …

Read More »

ಬೆಂಗಳೂರಲ್ಲಿ ಮಾದಕ ವಸ್ತು ಮಾರಾಟ ಜಾಲಕ್ಕೆ ಖಾಕಿ ಬಿಗ್​ ಶಾಕ್​ ಕೊಟ್ಟಿದ್ದು, ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಅಂದಾಜು 5.5 ಕೋಟಿ ಮೌಲ್ಯದ 1.047 ಕೆ.ಜಿ. ಎಂಡಿಎಂಎ ಕ್ರಿಸ್ಟಲ್ ಮತ್ತು 3 ಕೆ.ಜಿ. ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ.ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಂಗ್ರಹದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಪಿಐ ವಿ.ಡಿ.ಶಿವರಾಜು ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನು ಬಂಧಿತರಿಂದ ಅಂದಾಜು 2.5 ಕೋಟಿ …

Read More »

ಬ್ಯಾಂಕಾಕ್‌ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಿಸ್ತಿದ್ದವ ಬೆಂಗಳೂರಿನಲ್ಲಿ ಲಾಕ್‌..!

ಬ್ಯಾಂಕಾಕ್​ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.ಪ್ರಯಾಣಿಕನ ಲಗೇಜ್​ ಪರಿಶೀಲನೆ ವೇಳೆ ಬ್ಯಾಗ್​ನಲ್ಲಿ ಪ್ರಾಣಿಗಳಿರುವುದು ಗೊತ್ತಾಗಿದೆ.ಕೂಡಲೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಯಾಣಿಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Read More »

ಡುಮ್ಮಿ ಎಂದು ಮಾಜಿ ಪತ್ನಿ ಫೋನ್ ನಂಬರ್ ಸೇವ್ ಮಾಡಿದ ಪತಿಗೆ ದಂಡ ವಿಧಿಸಿದ ಕೋರ್ಟ್!

ಮೊಬೈಲ್ ಫೋನ್‌ನಲ್ಲಿ ನಂಬರ್ ಸೇವ್ ಮಾಡುವಾಗ ಚಿತ್ರ ವಿಚಿತ್ರವಾಗಿ ಸೇವ್ ಮಾಡುವುದು ಭಾರತೀಯರ ಅಭ್ಯಾಸ. ಹೆಸರಿನ ಜೊತೆಗೆ ನ್ಯೂ, ಜಿಯೋ, ಏರ್ಟೆಲ್, ಬಿಎಸ್‌ಎನ್‌ಎಲ್, ಅಡ್ಡ ಹೆಸರು, ನೀವು ಕರೆಯುವ ಹೆಸರು ಸೇರಿದಂತೆ ಸುಲಭವಾಗಿ ಗುರುತುಪತ್ತೆಯಾಗಲು ಹಲವು ಹೆಸರುಗಳನ್ನು ಸೇರಿಸಲಾಗುತ್ತದೆ.ಮಾಜಿ ಪತ್ನಿಯನ್ನು ವ್ಯಂಗ್ಯವಾಡಿದ್ದಾರೆ ಎಂದು ಕೋರ್ಟ್ ಪತಿಗೆ ದಂಡ ವಿಧಿಸಿದ ಘಟನೆ ಟರ್ಕಿಯಲ್ಲ ನಡೆದಿದೆ.

Read More »

ಅಕ್ರಮ ಸಂಬಂಧ ಆರೋಪದಡಿ ಮಹಿಳೆ ಬೆತ್ತಲೆಗೊಳಿಸಿ ದೌರ್ಜನ್ಯ: ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ ಹಲ್ಲೆ

ಅಕ್ರಮ ಸಂಬಂಧ ಆರೋಪದಡಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ಘಟನೆ ನಡೆದಿದೆ.ಅಕ್ಟೋಬರ್ 16ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆ ಮೇಲೆ 11 ಜನರು ದೌರ್ಜನ್ಯ ನಡೆಸಿದ್ದಾರೆ.ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಕಾರದಪುಡಿ ಎರಚಿ ದೌರ್ಜನ್ಯ ನಡೆಸಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಆಗಾಗ ಕಲಬುರಗಿಯಲ್ಲಿರುವ ಚಿಕ್ಕಮ್ಮನ ಮನೆಗೆ ಮಹಿಳೆ ಹೋಗುತ್ತಿದ್ದಳು. ಚಿಕ್ಕಮ್ಮನ ಅಳಿಯ ಅನಿಲ್ ಜೊತೆಗೆ …

Read More »

ಮುಸ್ಲಿಂ ವಿವಾಹಿತನಿಂದ ನನ್ನ ಮಗಳ ಬಚಾವ್​ ಮಾಡಿ: ಕಮ್ಯುನಿಸ್ಟ್​ ಲೀಡರ್ ಕಣ್ಣೀರು! ರಾಜ್ಯಾದ್ಯಂತ ಸಂಚಲನ

ಕಾಸರಗೋಡಿನ ಉದುಮದಲ್ಲಿ ಸಿಪಿಎಂ ನಾಯಕರಾಗಿರುವ ಪಿ.ವಿ ಭಾಸ್ಕರನ್ ಅವರ ಸ್ಥಿತಿ ಈಗ ಅಯೋಮಯವಾಗಿದೆ. ಮುಸ್ಲಿಂ ವಿವಾಹಿತನೊಬ್ಬ ತನ್ನ ಮಗಳ ತಲೆಕೆಡಿಸಿ, ಆಕೆಯನ್ನು ತನ್ನ ವಿರುದ್ಧವೇ ಎತ್ತಿ ಕಟ್ಟಿರುವ ಬಗ್ಗೆ ಕಣ್ಣೀರು ಇಡುತ್ತಿದ್ದಾರೆ ಭಾಸ್ಕರನ್​. ಸೊಂಟದ ಕೆಳಭಾಗದಿಂದ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ತಮ್ಮ ವಿಚ್ಛೇದಿತ ಪುತ್ರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬಂದ ನಕಲಿ ವೈದ್ಯ ರಶೀದ್ ಆಕೆಯ ತಲೆ ಕೆಡಿಸಿದ್ದು, ಆಕೆ ಈಗ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು …

Read More »

ವ್ಯಕ್ತಿಯೋರ್ವನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ!!!

ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ.. ಮನಬಂದತ್ತೆ ಚಾಕುವಿನಿಂದ ಹಲ್ಲೆ!!! ಕಾನೂನಿನ ಅರಿವಿಲ್ಲದ ದುರಳನಿಗೆ ಬಿಳುತ್ತಾ ಕಠಿಣ ಶಿಕ್ಷೆ!!! ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಪೊಲೀಸ ಠಾಣಾ ವಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಅನ್ವರ್ ಅರಳಿಕಟ್ಟಿ ಎಂಬಾತ ಮೇಲೆ ಚಾಕು ಇರತವಾಗಿದ್ದು, ವಾಸೀಂ ಕುಂದಗೋಳ ಎಂಬಾತ ಚಾಕು ಇರಿದಿದ್ದಾನೆ . ನನ್ನನ ಗುರಾಯಿಸಿದಾ ಎಂಬ ಕಾರಣಕ್ಕೆ ವಾಸೀಂ ಕುಂದಗೋಳ ಅನ್ವರಗೆ ಮನಬಂದಂತೆ ಚಾಕು ಇರಿದಿದ್ದಾನೆ ಎಂದು …

Read More »

ಹಾಡಹಗಲೇ ನಡು ರಸ್ತೆಯಲ್ಲೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿದ ಪತಿ

ಪತಿ ಮಹಾಶಯನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆನಂದ ಟಾಕೀಸ್ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಬರುತ್ತಿದ್ದ ಪತ್ನಿಯನ್ನು ಹಿಂದಿನಿಂದ ಬಂದ ಪತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.ನಡು ರಸ್ತೆಯಲ್ಲಿಯೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪತ್ನಿ ರಸ್ತೆಯಲ್ಲಿಯೇ ರಕ್ತದ ಮಡುವಲ್ಲಿ ಬಿದ್ದರೂ ಹಲ್ಲೆ ನಡೆಸುವುದನ್ನು ನಿಲ್ಲಿಸಿಲ್ಲ. ಸ್ಥಳೀಯರು ಬಂದು ಪತ್ನಿ ಮಹಾಶಯನನ್ನು ತಡೆಯಲು ಯತ್ನಿಸಿದ್ದಾರೆ.ಯಾವ …

Read More »

6 ಕೆ.ಜಿ ಗಿಂತ ಹೆಚ್ಚು ಗಾಂಜಾ ವಶ : ಪ್ರಕರಣ ದಾಖಲು

ನಗರದ ರೈಲ್ವೆ ನಿಲ್ದಾಣದಿಂದ ಗಾಂಧಿ ಗಂಜ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾರ್ವಜನಿಕವಾಗಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 6,46,800 ರೂ. ಮೌಲ್ಯದ 6 ಕೆ. ಜಿ 468 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ.ಕಲಬುರಗಿ ಮೂಲದ ವ್ಯಕ್ತಿಯೊಬ್ಬ ಬೈಕ್ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.ಸಮವಸ್ತ್ರದಲಿದ್ದ ಪೊಲೀಸರನ್ನು ನೋಡಿ ಗಾಂಜಾ ಖರೀದಿ ಮಾಡುವ ಸಾರ್ವಜನಿಕರು ಓಡಿದ್ದಾರೆ.ಅವರ ಜೊತೆಗೆ ಗಾಂಜಾ …

Read More »