Breaking News

Breaking News

ಭಕ್ತರ ಜೊತೆ ಕೆಂಡ ಹಾಯ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ..!

ಹಾಸನಾಂಬೆ ದೇವಾಲಯದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಹಾಸನದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಭಕ್ತರ ಜೊತೆ ಕೆಂಡ ಹಾಯ್ದು ಹರಕೆ ತೀರಿಸಿಕೊಂಡಿದ್ದಾರೆ.ನನಗೂ ಕೂಡ ಕೆಂಡ ಹಾಯಬೇಕು ಎಂದು ಮನಸ್ಸಾಯಿತು. ನಾನು ಹಿಂದೆಂದೂ ಕೆಂಡ ಹಾಯ್ದಿರಲಿಲ್ಲ. ಈ ವರ್ಷದ ಹಾಸನಾಂಬೆ ಉತ್ಸವ ಕೊನೆಯಾಗಿದೆ. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ. ಇಂದು ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಮುಚ್ಚಲಿದೆ ಎಂದು ಕೆಂಡ ಹಾಯ್ದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Read More »

ಪಟಾಕಿ ತಂದ ಅವಾಂತರ :ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಐದಂಸ್ತಿನ ಅಪಾರ್ಟ್​ಮೆಂಟ್​!

ದೀಪಾವಳಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ಎಲ್ಲದರ ನಡುವೆ ಗಾಜಿಯಾಬಾದ್​ನಲ್ಲಿ ದೀಪಾವಳಿಯ ಸಂಭ್ರಮ ಸಂಕಷ್ಟಕ್ಕೆ ದಾರಿ ಮಾಡಿದೆ. ಪಟಾಕಿಯ ಬೆಂಕಿ ತಗುಲಿದ ಪರಿಣಾಮ ಐದಂಸ್ತಿನ ವಸತಿ ಕಟ್ಟಡ ಸುಟ್ಟು ಭಸ್ಮವಾಗಿದೆ. ಫ್ರೆಂಡ್ಸ್ ಅವೆನ್ಯೂ ಪ್ರದೇಶದ ಪ್ಲಾಟ್ ಸಂಖ್ಯೆ 188 ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಟ್ಟಡದಾದ್ಯಂತ ಅಗ್ನಿಯ ಕೆನ್ನಾಲಿಗೆ ವೇಗವಾಗಿ ಹರಡಿತು ದಟ್ಟವಾದ ಕಪ್ಪು ಹೊಗೆ ಸಂಪೂರ್ಣ ಕಟ್ಟಡವನ್ನೇ ಆವರಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಯಲ್ಲಿ ಸಂಪೂರ್ಣ ಕಟ್ಟಡ ಹೊತ್ತಿ ಉರಿಯುತ್ತಿದ್ದರೆ ಅಗ್ನಿಶಾಮಕ …

Read More »

ಶೀಲ ಶಂಕಿಸಿ ಪತ್ನಿಯ ಕತ್ತು ಸೀಳಿ ಬರ್ಬರ ಹತ್ಯೆ : ಮಂಡ್ಯದಲ್ಲಿ ಪಾಪಿ ಪತಿ ಅರೆಸ್ಟ್.!

17 ವರ್ಷದ ಹಿಂದೆ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ನಂತರ ಬರು ಬರುತ್ತಾ ಪತಿಗೆ ಪತ್ನಿಯ ಮೇಲೆ ಅನುಮಾನ ಮೂಡುತ್ತದೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತದೆ. ಜಗಳ ತಾರಕಕ್ಕೇರಿ ಪತಿ ಪತ್ನಿಯನ್ನ ಹತ್ಯೆ ಮಾಡುತ್ತಾನೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿ ಲೋಕೇಶ್ ನನ್ನು ಬಂಧಿಸಿದ್ದಾರೆ.ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲೋಕೇಶ್ ಎಂಬಾತ ಪತ್ನಿ ಶ್ವೇತಾ (36) …

Read More »

ಕುಡಿದ ಮತ್ತಿನಲ್ಲಿ ಪತ್ನಿಗೆ ಕ್ರೂರವಾಗಿ ಹಲ್ಲೆಗೈದ ಪತಿ : ಕಣ್ಣಿನ ಮೂಲಕ ತಲೆಬುರಡೆ ಸೀಳಿ ಬಾಯಿಗೆ ಬಂದ ಚಾಕು.!

ಗನ್ನವರಂ ಮಂಡಲದ ಉದಿಮುಡಿ ಗ್ರಾಮದ ನೆಲಪುಡಿ ಗಂಗರಾಜು ಮತ್ತು ಪಲ್ಲಲಮ್ಮ (36) ಇಪ್ಪತ್ತು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದಾಗ್ಯೂ, ಗಂಗರಾಜು ಮದ್ಯದ ಚಟ ಹೊಂದಿದ್ದನು ಮತ್ತು ಆಗಾಗ್ಗೆ ತನ್ನ ಹೆಂಡತಿಯನ್ನು ಕಿರುಕುಳ ನೀಡುತ್ತಿದ್ದನು. ಈ ಪ್ರಕ್ರಿಯೆಯಲ್ಲಿ, ಸೋಮವಾರ ದೀಪಾವಳಿಯ ಸಂದರ್ಭದಲ್ಲಿ ತನ್ನ ಹೆಂಡತಿಗೆ ಪಟಾಕಿ ಸಿಡಿಸಲು ನೀಡಿದ ಹಣದ ಬಗ್ಗೆ ಇಬ್ಬರ ನಡುವೆ ಜಗಳ ಪ್ರಾರಂಭವಾಯಿತು. ಜಗಳ ಹೆಚ್ಚುತ್ತಿದ್ದಂತೆ, ಅವನು ಕೋಪಗೊಂಡು ತನ್ನಲ್ಲಿದ್ದ …

Read More »

ಹೃದಯಾಘಾತದಿಂದ ಜನಪ್ರಿಯ ನಟ ನಿಧನ!

ಪ್ರಸಿದ್ಧ ನಟ ಮತ್ತು ಗಾಯಕ ರಿಷಭ್ ಟಂಡನ್ ಇಂದು (ಬುಧವಾರ, ಅಕ್ಟೋಬರ್ 22) ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಈ ವಿಚಾರವನ್ನು ತಂಡದ ಮಾಜಿ ಸದಸ್ಯರು ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ.ರಿಷಭ್ ಒಬ್ಬ ಶ್ರೇಷ್ಠ ಗಾಯಕ, ಸಂಯೋಜಕ ಮತ್ತು ನಟ. ಅವರು ತಮ್ಮ ಶಾಂತ ಸ್ವಭಾವ ಮತ್ತು ಸಂಗೀತದ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದರು. ಅವರು 2008 ರಲ್ಲಿ ಟಿ-ಸೀರೀಸ್‌ನ ಸಂಗೀತ ಆಲ್ಬಂ ‘ಫಿರ್ ಸೆ ವಹಿ’ ಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. …

Read More »

ಮೈಸೂರು: ರೈಲ್ವೆ ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗು ಅಪಹರಣಕ್ಕೆ ಯತ್ನ, 50 ವರ್ಷದ ವೃದ್ಧೆ ಬಂಧನ

ಮೈಸೂರು ರೈಲ್ವೆ ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದ್ದು, 50 ವರ್ಷದ ವೃದ್ಧೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು ಬಂಧಿಸಿದ್ದಾರೆ.ಮೈಸೂರು ರೈಲ್ವೆ ನಿಲ್ದಾಣದ ವೇಟಿಂಗ್ ರೂಮ್‌ನಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ವೃದ್ಧೆಯೊಬ್ಬರು ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ. ಎಚ್ಚರಗೊಂಡ ತಾಯಿಗೆ ಮಗು ನಾಪತ್ತೆಯಾಗಿರುವುದು ಗೊತ್ತಾಗಿ, ಕೂಡಲೇ ಕುಟುಂಬಸ್ಥರೊಂದಿಗೆ ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Read More »

ಮೋಸ್ಟ್ ವಾಂಟೆಡ್ ಬಿಹಾರದ ಕುಖ್ಯಾತ ‘ಸಿಗ್ಮಾ ಗ್ಯಾಂಗ್’ ಲೀಡರ್ ರಂಜನ್ ಪಾಠಕ್ ಸೇರಿ ನಾಲ್ವರು ಸಾವು!

ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಪ್ರಮುಖ ಪೊಲೀಸ್ ಎನ್ಕೌಂಟರ್ ನಡೆದಿದ್ದು, ಇದರಲ್ಲಿ ಬಿಹಾರದ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರು ಸಾವನ್ನಪ್ಪಿದ್ದಾರೆ.ರಂಜನ್ ಪಾಠಕ್ (25)ಬಿಮ್ಲೇಶ್ ಮಹ್ತೋ ಅಲಿಯಾಸ್ ಬಿಮ್ಲೇಶ್ ಸಾಹ್ನಿ (25)ಮನೀಶ್ ಪಾಠಕ್ (33)ಅಮನ್ ಠಾಕೂರ್ (21)ಕುಖ್ಯಾತ ‘ಸಿಗ್ಮಾ & ಕಂಪನಿ’ ದರೋಡೆಕೋರರುನಾಲ್ವರು ಆರೋಪಿಗಳು ಬಿಹಾರದಲ್ಲಿ ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದರು. ‘ಸಿಗ್ಮಾ & ಕಂಪನಿ’ ಎಂದು ಕರೆಯಲ್ಪಡುವ ಈ ಗ್ಯಾಂಗ್ ಅನ್ನು ರಂಜನ್ ಪಾಠಕ್ ನೇತೃತ್ವ ವಹಿಸಿದ್ದ. …

Read More »

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ: ಆರ್​ಎಸ್‌ಎಸ್, ಭೀಮ ಆರ್ಮಿ ಬಳಿಕ ಮತ್ತೊಂದು ಸಂಘಟನೆ ಎಂಟ್ರಿ!

ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಆರ್​ಎಸ್​ಎಸ್ ಪಥಸಂಚಲನಕ್ಕೆ ಹೆಜ್ಜೆ ಹೆಜ್ಕೆಗೂ ಕಂಟಕ ಶುರುವಾಗುತ್ತಿದೆ. ಇಷ್ಟು ದಿನ ಆರ್​ಎಸ್​​ಎಸ್​ ವರ್ಸಸ್ ಭೀಮ ಆರ್ಮಿ ಮಧ್ಯೆ ಫೈಟ್ ನಡೆದಿತ್ತು. ಇದೆಲ್ಲದರ ಮಧ್ಯೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಆರ್​ಎಸ್ ಎಸ್​ಗೆ ಕುರುಬ ಸಮಾಜ ಕಂಟಕ ತಂದೊಡ್ಡಿದೆ.ನವೆಂಬರ್ 2 ರಂದು ನಾವೂ ಎಸ್​​​ಟಿ ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡುವುದಾಗಿ ಕುರುಬ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿದೆ. ಇದರ ಜೊತೆಗೆ ಭೀಮ​​ ಆರ್ಮಿ ಮತ್ತು …

Read More »

ಶಬರಿಮಲೆ: ಹೆಲಿಪ್ಯಾಡ್‌ನಲ್ಲಿ ಹೂತುಹೋದ ರಾಷ್ಟ್ರಪತಿ ಮುರ್ಮು ಅವರ ಹೆಲಿಕಾಪ್ಟರ್.

ಶಬರಿಮಲೆಯ ಅಯ್ಯಪ್ಪ ದೇಗುಲ ದರ್ಶನಕ್ಕೆ ಬಂದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ನ ಚಕ್ರಗಳು ಹೊಸದಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಹೂತು ಹೋಗಿರುವ ಘಟನೆ ಇಲ್ಲಿನ ಪ್ರಮಾದಂನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.ಪಂಪಾಗೆ ರಸ್ತೆ ಮಾರ್ಗ ಮೂಲಕ ರಾಷ್ಟ್ರಪತಿ ತೆರಳಿದ ಬಳಿಕ, ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹೆಲಿಕಾಪ್ಟರ್ ಅನ್ನು ತಳ್ಳುವ ದೃಶ್ಯಗಳು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾದವು. ರಾಷ್ಟ್ರಪತಿಯವರ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸ್ಟೇಡಿಯಂ ಅನ್ನು …

Read More »

ಆಸ್ತಿಗಾಗಿ ತಂದೆ ಸತ್ತು 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪಾಪಿ ಪುತ್ರರು.!

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಯೆಡ್ಲಪಾಡು ಮಂಡಲದ ಪಾಟಾ ಸೋಲಾಸಾದಲ್ಲಿ ಅವರ ತಂದೆ ಸಾವನ್ನಪ್ಪಿದ ಮೂರು ದಿನಗಳ ನಂತರ, ಪುತ್ರರು ಅವರ ತಂದೆಯ ಅಂತ್ಯಕ್ರಿಯೆಗಳನ್ನು ಮಾಡಲಿಲ್ಲ.ಪಾಟಾ ಸೋಲಾಸಾದಲ್ಲಿ, ಗುವ್ವುಲಾದ ಹಿರಿಯ ಆಂಜನೇಯುಲು (80) ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದರು. ಆಸ್ತಿ ಹಂಚಿಕೆಯ ಬಗ್ಗೆ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ವಿವಾದ ಉಂಟಾಯಿತು. ಪರಿಣಾಮವಾಗಿ, ಇಬ್ಬರು ಗಂಡು ಮಕ್ಕಳು ಅಂತ್ಯಕ್ರಿಯೆ ವಿಧಿಗಳನ್ನು ಮಾಡಲು ನಿರಾಕರಿಸಿದರು.ಪೊಲೀಸರ ಮಧ್ಯಪ್ರವೇಶದಿಂದ …

Read More »