ದೀಪಾವಳಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ಎಲ್ಲದರ ನಡುವೆ ಗಾಜಿಯಾಬಾದ್ನಲ್ಲಿ ದೀಪಾವಳಿಯ ಸಂಭ್ರಮ ಸಂಕಷ್ಟಕ್ಕೆ ದಾರಿ ಮಾಡಿದೆ. ಪಟಾಕಿಯ ಬೆಂಕಿ ತಗುಲಿದ ಪರಿಣಾಮ ಐದಂಸ್ತಿನ ವಸತಿ ಕಟ್ಟಡ ಸುಟ್ಟು ಭಸ್ಮವಾಗಿದೆ. ಫ್ರೆಂಡ್ಸ್ ಅವೆನ್ಯೂ ಪ್ರದೇಶದ ಪ್ಲಾಟ್ ಸಂಖ್ಯೆ 188 ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಟ್ಟಡದಾದ್ಯಂತ ಅಗ್ನಿಯ ಕೆನ್ನಾಲಿಗೆ ವೇಗವಾಗಿ ಹರಡಿತು
ದಟ್ಟವಾದ ಕಪ್ಪು ಹೊಗೆ ಸಂಪೂರ್ಣ ಕಟ್ಟಡವನ್ನೇ ಆವರಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಯಲ್ಲಿ ಸಂಪೂರ್ಣ ಕಟ್ಟಡ ಹೊತ್ತಿ ಉರಿಯುತ್ತಿದ್ದರೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

