Breaking News

ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಆರೋಪಿ ಬಂಧನ

ಆನೇಕಲ್:-
ವೃದ್ಧ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಕುರಿತು ಅತ್ತಿಬೆಲೆ ಪೊಲೀಸರಿಂದ ಆರೋಪಿಯನ್ನು ಬಂಧನ ಮಾಡಿದ್ದಾರೆ. ತಮಿಳುನಾಡು ಮೂಲದ ಶ್ರೀನಿವಾಸನ್ (೩೨) ಬಂಧಿತ ಆರೋಪಿಯಾಗಿದ್ದು, ಇದೇ ತಿಂಗಳ 21ನೇ ತಾರೀಕು ಅತ್ತಿಬೆಲೆ ಗೋಲ್ಡನ್ ಗೇಟ್ ಬಡಾವಣೆಯ ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿದ ಅರೋಪಿ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ ಒಡವೆ, ನಗದು , ಕಸಿದು ಪರಾರಿಯಾಗಿದ್ದ. ಈ ಕುರಿತು ಪ್ರಕರಣವನ್ನು ಕೈಗೆತ್ತಿಕೊಂಡ ಖಾಕಿಪಡೆ ಕೇವಲ ಒಂದೇ ವಾರದಲ್ಲಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ವಿರುದ್ಧ, ತಮಿಳುನಾಡಿನಲ್ಲಿ ಕೊಲೆ ಪ್ರಕರಣ ಪತ್ತೆಯಾಗಿದೆ. ಹಾಗೂಬಂಧಿತ ಆರೋಪಿಯಿಂದ ಒಡವೆ, ಚಿನ್ನವನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Share News

About Ambrish BIG TV NEWS,Anekal

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *