BigTv News
October 23, 2025
Breaking News
ದೀಪಾವಳಿ ರಾತ್ರಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ, ಕುಡಿದ ಅಮಲಿನಲ್ಲಿದ್ದ ಟಿಂಕು, ತನ್ನ ಹೆಂಡತಿ ಮನೆಗೆ ಮರಳಿದನು. ಯಾವುದೇ ಪ್ರತಿಕ್ರಿಯೆಯಿಲ್ಲದೆ ಡೋರ್‌ಬೆಲ್ ಬಾರಿಸಿದ ನಂತರ, ಬಾಗಿಲು ಮುಚ್ಚಿದ್ದರೆ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದನು. ಅವನ ಹೆಂಡತಿಯಿಂದ ನಿರ್ಲಕ್ಷಿಸಲ್ಪಟ್ಟ ಅವನು ತನ್ನ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡನು. ಮನೆಯ ಹೊರಗೆ ಕುಳಿತು ಬೆಂಕಿ ಹಚ್ಚಿಕೊಂಡು ಬೆಂಕಿ ಹಚ್ಚಿಕೊಂಡು ಓಡಿ ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದಿವೆ. ನೆರೆಹೊರೆಯವರು ಬಟ್ಟೆ ಮತ್ತು …
Read More »
BigTv News
October 23, 2025
Breaking News
ಫೆಡರಲ್ ಬ್ಯಾಂಕ್‌ನದೇ ಆಯಪ್ ಮೂಲಕ ಶಿರಾಜುಲ್ ಇಸ್ಲಾಂ ಈ ವಂಚನೆ ನಡೆಸಿದ್ದ. ಬ್ಯಾಂಕ್ ಗ್ರಾಹಕರ ಗುರುತಿನ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಾಲ ಪಡೆಯುವುದೇ ಇವರ ವಂಚನೆಯ ಗುರಿಯಾಗಿತ್ತು. ಮೊದಲು ಉತ್ತಮ ಸಿಬಿಲ್ ಸ್ಕೋರ್ ಇರುವವರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗುತ್ತಿತ್ತು. ಅವರ ಪ್ಯಾನ್ ಕಾರ್ಡ್ ಅನ್ನು ನಕಲಿಯಾಗಿ ತಯಾರಿಸಿ, ವಿಳಾಸವನ್ನು ಸರಿಯಾಗಿ ನೀಡಿ, ಫೋಟೋವನ್ನು ಮಾತ್ರ ವಂಚಕನ ತಂಡದ ಸದಸ್ಯನೊಬ್ಬನದ್ದು ಹಾಕಲಾಗುತ್ತಿತ್ತು. ಕೆವೈಸಿ ಪರಿಶೀಲನೆಗಾಗಿ ವಿಡಿಯೋ ಕಾಲ್ ಬಂದಾಗ, ಪ್ಯಾನ್ ಕಾರ್ಡ್‌ನಲ್ಲಿ …
Read More »
BigTv News
October 23, 2025
Breaking News
ಪುತ್ತೂರು ತಾಲೂಕಿನ ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿ ಇಂದು ಮುಂಜಾನೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದಾಗ ಪೊಲೀಸರ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದು, ಓರ್ವ ಆರೋಪಿ ಗಾಯಗೊಂಡಿದ್ದಾನೆ.ಪೊಲೀಸರ ಗುಂಡೇಟಿನಿಂದ ವಾಹನದಲ್ಲಿದ್ದ ಆರೋಪಿಗಳಲ್ಲಿ ಓರ್ವನಾದ ಅಬ್ದುಲ್ಲಾ (40) ಗಾಯಗೊಂಡಿದ್ದಾನೆ. ಗಾಯಗೊಂಡ ತಕ್ಷಣವೇ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ …
Read More »
BigTv News
October 23, 2025
Breaking News
ನಿರಂತರ ಮಳೆಗೆ ಬೆಳೆಗಳು ನೀರು ಪಾಲಾದರೆ, ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಸಿಲಿಕಾನ್ ಸಿಟಿಯಲ್ಲೂ ಮಳೆ ಅಬ್ಬರಿಸಿದೆ. ನಗರದಲ್ಲಿ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ.ಪರಿಣಾಮ ಕೆಲವು ಅವಾಂತರಗಳು ಸಂಭವಿಸಿವೆ. ಏಕಾಏಕಿ ಬೃಹತ್ ಮರದ ಕೊಂಬೆ ರಸ್ತೆಗೆ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಮೂವರು ಪಾರಾಗಿದ್ದಾರೆ.ಇನ್ನು ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದು, ಅಲಿ ಅಸ್ಕರ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಕನ್ನಿಂಗ್‌ಹ್ಯಾಮ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪ್ರಯಾಣಿಕರು …
Read More »
BigTv News
October 23, 2025
Breaking News
ಹಾವೇರಿಯ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳ್ಳತನ ನಡೆದಿದೆ.ಮಠದ ಕೊಠಡಿಗಳ ಬೀಗ ಮುರಿದು ಚಿನ್ನಾಭರಣ, ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಸರಿಸುಮಾರು 10 ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
Read More »
BigTv News
October 23, 2025
Breaking News
ಡಿ ಕೆ ಶಿವುಕುಮಾರ್ ದೀಪಾವಳಿಯ ಬಲಿಪಾಡ್ಯಮಿ ದಿನ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಪತ್ನಿ ಜೊತೆಗೂಡಿ ಪಡೆದಿದ್ದಾರೆ. ರಾಯರ ಅನುಗ್ರಹಕ್ಕಾಗಿ ತುಲಾಭಾರ ನೆರವೇರಿಸಿದರು. ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಂಚಮುಖಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಮೂಲ ರಾಮ ದೇವರ ದರ್ಶನವನ್ನೂ ಮಾಡಿದ್ದಾರೆ.ಶ್ರೀಗಳ ಭೇಟಿ ಬಳಿಕ ಮಾತನಾಡಿದ ಅವರು, ಶ್ರೀಮಠದಿಂದ ಮಂತ್ರಾಲಯಕ್ಕೆ ಬರಲು ಆಹ್ವಾನವಿತ್ತು. ರಾಯರ ಅನುಗ್ರಹಕ್ಕಾಗಿ ಬಹಳ ದಿನಗಳಿಂದ ಬರಬೇಕೆಂದು …
Read More »
BigTv News
October 23, 2025
Breaking News
ಮದುವೆ ಭರವಸೆ ನೀಡಿ ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರ ನಡುವಿನ ವಾಟ್ಸಪ್ ಚಾಟ್‌ಗಳು ಈಗ ವೈರಲ್ ಆಗಿದೆ. ಮಹಿಳೆ ತನಗೆ ಬಾಡಿಗೆ ಮನೆ ಬೇಕು ಎಂದು ಇನ್ಸ್ಪೆಕ್ಟರ್ ಸುನೀಲ್ ಗೆ ಹೇಳಿದ್ದಾಳೆ ಅದಕ್ಕೆ ಸುನೀಲ್ ‘ನಾನೇ ರೆಂಟ್ ಕೊಡ್ತೀನಿ ಡಿಯರ್’ ಎಂದು ಪ್ರತಿಕ್ರಿಯಿಸಿದ್ದಾರೆ.ಇನ್ಸ್ಪೆಕ್ಟರ್ ಸುನೀಲ್,ತನ್ನನ್ನು ಮದುವೆ ಆಗುವ ಭರವಸೆ ನೀಡಿ ಲೈಂಗಿಕ ಶೋಷಣೆ ಮಾಡಿದ್ದಾರೆ. ನನ್ನ ಖಾಸಗಿ ಪೋಟೋ ಮತ್ತು ವೀಡಿಯೋಗಳನ್ನು ಬಳಸಿಕೊಂಡು ಬೆದರಿಕೆ …
Read More »
BigTv News
October 23, 2025
Breaking News
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಈ ಐಶಾರಾಮಿ ಬಂಗಲೆಗೆ ಗರ್ಭಿಣಿ ಮಹಿಳೆಯರನ್ನು ಕರೆದುಕೊಂಡು ಬಂದು ಅವರ ಒಡಲಿನಲ್ಲಿರುವ ಭ್ರೂಣದ ಲಿಂಗ ಪತ್ತೆ ಕೆಲಸ ಮಾಡಲಾಗುತಿತ್ತು. ಅದು ಹೆಣ್ಣಾ ಅಥವಾ ಗಂಡಾ ಅಂತಾ ಪತ್ತೆ ಮಾಡಲಾಗುತ್ತಿತ್ತು. ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ …
Read More »
BigTv News
October 21, 2025
Breaking News
ಅ.21ಮಂಗಳೂರು: ಫಳ್ನೀರ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಪ್ರದೀಪ್ ಆಚಾರ್ಯ ಅವರು ಕದ್ರಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.ರಾತ್ರಿ 7.10ಕ್ಕೆ ಬೈಕನ್ನು ನಿಲ್ಲಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿಕ್ಕಪ್ಪನನ್ನು ನೋಡಲು ಹೋಗಿದ್ದರು.9 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಬೈಕಿನ ಮೌಲ್ಯ 45,000 ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.
Read More »
BigTv News
October 21, 2025
Breaking News
ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಸರ್ಕಾರಿ ಬಸ್ ಮತ್ತು ಟ್ಯಾಕ್ಟರ್ ಡಿಕ್ಕಿಯಾಗಿ ನಾಲ್ವರು ಕಾಲು ಮುರಿತವಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಮಲ ಬಳಿ ಒಂದು ಭೀಕರ ಅಪಘಾತ ಸಂಭವಿಸಿದೆ.ಬಸ್ಸಿನ ಕಿಟಕಿ ಬಳಿ ಕುಳಿತಿದ್ದ ನಾಲ್ವರು ಪ್ರಯಾಣಿಕರ ಕಾಲು ಮುರಿತವಾಗಿದೆ.ನರಸಮ್ಮ(50) ಲಕ್ಷ್ಮಿ (55) ಹುಸೇನ್ (54) ಕಲಂದರ್ (4) ಗೆ ಗಂಭೀರವಾದ ಗಾಯಗಳಾಗಿದ್ದು ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರಿನಿಂದ ಸರ್ಕಾರಿ ಬಸ್ ಲಿಂಗಸುಗೂರು …
Read More »