Breaking News

ಚಾಮರಾಜನಗರ : ಸಾಮಾಜಿಕ ಬಹಿಷ್ಕಾರ, ಕಿರುಕುಳಕ್ಕೆ ಸೋತು ವ್ಯಕ್ತಿ ನೇಣಿಗೆ ಶರಣು!

ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಿದ್ದು ಅದೆಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ್ದಾನೆ.ಮೂರು ವರ್ಷಗಳ ಹಿಂದೆ ಅಗರ ಗ್ರಾಮದ ಉಗ್ರಾಣ ಬೀದಿಗೆ ರಂಗಸ್ವಾಮಿ ಯಜಮಾನನಾಗಿದ್ದ.ಈ ವೇಳೆ ಕುಲಕ್ಕೆ ಸಂಬಂಧಿಸಿದ 12 ಲಕ್ಷ ರೂಪಾಯಿಗಳನ್ನು ಈತ ವೈಯಕ್ತಿಕವಾಗಿ ಬಳಸಿಕೊಂಡಿದ್ದ. ಇದು ಗೊತ್ತಾದ ನಂತರ ಈತನನ್ನು ಯಜಮಾನ ಸ್ಥಾನದಿಂದ ಕೆಳಗಿಳಿಸಿದ ಗ್ರಾಮಸ್ಥರು 12 ಲಕ್ಷ ರೂಪಾಯಿ ಕಟ್ಟುವಂತೆ ತಾಖೀತು ಮಾಡಿದ್ದರು. ಆದರೆ ಗಾರೆ ಕೆಲಸ ಮಾಡಿಕೊಂಡಿದ್ದ ರಂಗಸ್ವಾಮಿ ಹಣ ಕಟ್ಟುವಲ್ಲಿ ವಿಫಲನಾಗಿದ್ದ. ಇದರಿಂದ ರಂಗಸ್ವಾಮಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿತ್ತು. ಒಂದೆಡೆ ಸಾಲ ಇನ್ನೊಂದೆಡೆ ಬಹಿಷ್ಕಾರದಿಂದ ಬೇಸತ್ತು ರಂಗಸ್ವಾಮಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ.ರಂಗಸ್ವಾಮಿ ಜೊತೆ ಆಗಾಗ್ಗೆ ಜಗಳ ತೆಗೆದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಕುಲದ ಹಣ ಹಿಂದಿರುಗಿಸಲು ಗ್ರಾಮಸ್ಥರ ಒತ್ತಡ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಆತ ಡೆತ್ ನೋಟ್ ಬರೆದಿಟ್ಟು ಮರಕ್ಕೆ ನೇಣು ಬಿಗಿದು ಕೊಂಡು ಸಾವಿಗೆ ಶರಣಾಗಿದ್ದಾನೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *