BigTv News
October 21, 2025
Breaking News
ಕಾಸರಗೋಡು ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿ ಸಮೀಪದ ಪುತ್ತಿಗೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.ಪುತ್ತಿಗೆ ಆಚಾರಿಮೂಲೆ ನಿವಾಸಿ ರಾಜೇಶ್ ಆಚಾರ್ಯ ಮೃತಪಟ್ಟವರು. ದೀಪಾವಳಿ ಅಂಗವಾಗಿ ಮನೆಯಂಗಳದಲ್ಲಿ ಅಲಂಕಾರ ವಿದ್ಯುದ್ದೀಪಗಳನ್ನು ಅಳವಡಿಸುತ್ತಿದ್ದಾಗ ರಾಜೇಶ್ ಶಾಕ್ ತಗುಲಿದೆ.ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »
BigTv News
October 20, 2025
Breaking News
ಕುಂದಾಪುರದಲ್ಲಿ ಕಾರು ಢಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಅ. 18ರ ಸಂಜೆ ಹೆಮ್ಮಾಡಿ ಕೊಲ್ಲೂರು ಮುಖ್ಯ ರಸ್ತೆಯ ಕಟ್ ಬೆಲ್ತೂರಿನಲ್ಲಿ ಸಂಭವಿಸಿದೆ.ಕನ್ಯಾನ ಗ್ರಾಮದ ಜಗದೀಶ್ಚಂದ್ರ ಶೆಟ್ಟಿ (50) ಗಾಯಗೊಂಡವರು. ಅ.18ರ ಸಂಜೆ 6.30ರ ಸುಮಾರಿಗೆ ಕುಂದಾಪುರಕ್ಕೆ ತೆರಳಿದ್ದವರು ವಾಪಸು ಬಸ್ಸಿನಲ್ಲಿ ಬಂದು ಕಟ್ ಬೆಲ್ತೂರಿನಲ್ಲಿ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ರತ್ನಾಕರ ಶೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ.ಪರಿಣಾಮ ಎಡಕಾಲಿನ ಮೂಳೆಗೆ ಪೆಟ್ಟಾಗಿದ್ದು, ಸೊಂಟಕ್ಕೆ ಗಾಯವಾಗಿದೆ. ಕುಂದಾಪುರ ಸಂಚಾರ …
Read More »
BigTv News
October 20, 2025
Breaking News
ಶಂಕರನಾರಾಯಣ ಗ್ರಾಮದ ಸುಬ್ಬ ಕುಲಾಲ (64) ಅವರು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷಿಕರಾಗಿದ್ದ ಅವರು ಕೈ, ಕಾಲು ನಡುಗುವ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಮಾಡಿದರೂ ಗುಣವಾಗಿರಲಿಲ್ಲ. ಅ. 18ರಂದು ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ.ಅ. 19ರಂದು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.ಕಾಯಿಲೆ ಗುಣವಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಕರುಣಾಕರ ಅವರು ಪೊಲೀಸರಿಗೆ ದೂರು …
Read More »
BigTv News
October 20, 2025
Breaking News
ಒಂದು ವಾರದ ಹಿಂದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಮಗು ಅಳುವುದನ್ನು ಕೇಳಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.ಇದೀಗ ನಿರ್ಮಾಣ ಹಂತದ ಕಟ್ಟಡದಲ್ಲಿ ನವಜಾತ ಶಿಶು ಪತ್ತೆಯಾಗಿದೆ.ಡಿಹೆಚ್ ಒ ಕಚೇರಿ ಬಳಿಯೇ ಇರುವ ಕಟ್ಟಡದಲ್ಲಿ ಮಗುವ್ನ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
October 20, 2025
Breaking News
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನೈತಿಕ ಪೊಲೀಸ್‌ಗಿರಿ ಮಿತಿ ಮೀರಿ ಹೋಗಿದೆ. ಊಟದ ಬಿಲ್ ಕೇಳಿದ ಕಾರಣಕ್ಕೆ ಪಟ್ಟಣದ ರತ್ನಾ ಹೋಟೆಲ್ ಮಾಲೀಕ ಹಾಗೂ ಅವರ ಮಗನ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.ಈ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ತವರೂರಾದ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಕೇಳಿ …
Read More »
BigTv News
October 20, 2025
Breaking News
ದೀಪಾವಳಿ ಹಬ್ಬದಂದೆ ಘೋರವಾದ ದುರಂತ ಒಂದು ನಡೆದಿದ್ದು, ಕೌಟುಂಬಿಕ ಕಲಹ ಹಾಗೂ ವರದಕ್ಷಣೆ ಕಿರುಕುಳ ಹಿನ್ನೆಲೆ ಮಗಳ ಜೊತೆಗೆ ವರದಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ವರದಹಳ್ಳಿ ಸಮೀಪ ಒಂದು ಘಟನೆ ನಡೆದಿದೆ.ಹಾವೇರಿ ತಾಲೂಕಿನ ವರದಹಳ್ಳಿಯಲ್ಲಿ ಕಾವ್ಯ (12) ಮತ್ತು ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಆತ್ಮಹತ್ಯೆಗೆ ಶರಣಾಗಿದ್ದಾರೆ.ಸದ್ಯಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಕಾವ್ಯ ಮೃತ ದೇಹವನ್ನು ಪತ್ತೆ ಮಾಡಿದ್ದು, ಸವಿತಾ ಮೃತ ದೇಹಕ್ಕಾಗಿ ಶೋಧ …
Read More »
BigTv News
October 20, 2025
Breaking News
ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಶರಣಪ್ಪ ಯಮನಪ್ಪ ಚಲವಾದಿ ಶನಿವಾರ ಮೃತಪಟ್ಟಿದ್ದಾರೆ.ಅಕ್ಟೋಬರ್ 9ರಂದು ಸಮೀಕ್ಷಾ ಕಾರ್ಯದ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದ್ದು. ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಮೃತರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಸರ್ಕಾರಿ ಪ್ರಾಥಮಿಕ …
Read More »
BigTv News
October 20, 2025
Breaking News
ನಾರಾಯಣ ಮಂಗಲದ ವಿವೇಕ್ ಶೆಟ್ಟಿ ಮೃತಪಟ್ಟವರು. ಇವರನ್ನು ರಕ್ಷಿಸಲು ಬಾವಿಗೆ ಹಾರಿದ ಸಹೋದರನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.ವಿವೇಕ್ ಬಾವಿಗೆ ಬೀಳುತ್ತಿರುವುದನ್ನು ಗಮನಿಸಿದ ಸಹೋದರ ತೇಜಸ್ ಬಾವಿಗೆ ಹಾರಿದ್ದು, ಬಾವಿಯಲ್ಲಿ ಸಿಲುಕಿಕೊಂಡ ಇಬ್ಬರನ್ನು ಸ್ಥಳೀಯರು ಹಾಗೂ ಮನೆಯವರು ಮೇಲಕ್ಕೆ ತರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಉಪ್ಪಳ ದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ಇಬ್ಬರನ್ನು ಮೇಲಕ್ಕೆತ್ತಿದ್ದು, ವಿವೇಕ್ ನನ್ನು ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು …
Read More »
BigTv News
October 20, 2025
Breaking News
ತೆಲಂಗಾಣದ ಕೊಂಡಮಲ್ಲೆಪಲ್ಲಿಯ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಘಟನೆಯು ಕೊಂಡಮಲ್ಲೆಪಲ್ಲಿಯಲ್ಲಿ ಹಬ್ಬದ ಹಬ್ಬದ ಮೇಲೆ ದುಃಖದ ಛಾಯೆಯನ್ನು ಮೂಡಿಸಿದೆ. ಈ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸುತ್ತಿದ್ದಾರೆ. ಮೃತರನ್ನು ನಾಗಲಕ್ಷ್ಮಿ (27), ಅವಂತಿಕಾ (9) ಮತ್ತು ನಾಗಸಾಯಿ (7) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಮಹಿಳೆ ಈ ದುಷ್ಕೃತ್ಯ ಎಸಗಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
Read More »
BigTv News
October 20, 2025
Breaking News
ನಾಡಿನಾದ್ಯಂತ ಇಂದು ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮನೆಮಾಡಿರುವಂತೆಯೇ ನಗರದ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಮಾಗಡಿ ರಸ್ತೆಯ ಜಿಟಿ ಮಾಲ್ ನಿಂದ ಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ.GTವರ್ಲ್ಡ್ ಮಾಲ್ ನ ಮೂರನೇ ಅಂತಸ್ಥಿನಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಮಾಗಡಿ ರಸ್ತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯುವಕ ಆಯತಪ್ಪಿ ಬಿದ್ದಿರುವುದೋ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read More »