ಕೆಲ ತಿಂಗಳ ಹಿಂದೆ ವಿದ್ಯಾರ್ಥಿನಿಯನ್ನು ಇನ್ಸ್ಟಾಗಾಮ್ನಲ್ಲಿ ಪರಿಚಯಿಸಿಕೊಂಡ ಆರೋಪಿ ದಿನ ಕಳೆದಂತೆ ಸಿನಿಮಾ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಅದಕ್ಕೆ ಯುವತಿ ಕೂಡ ಒಪ್ಪಿಕೊಂಡಿದ್ದಾಳೆ. ಈ ವೇಳೆ ತಾನೂ ಉದ್ಯಮಿ ಎಂದು ಹೇಳಿಕೊಂಡಿದ್ದಾನೆ. ಯಾರೂ ಇಲ್ಲದಿದ್ದಾಗ ವಿದ್ಯಾರ್ಥಿನಿ ಮನೆಗೆ ಆಗಾಗ್ಗೆ ಬರುತ್ತಿದ್ದ. ಒಮ್ಮೆ ಮನೆಗೆ ಬಂದ ಆರೋಪಿ, ಯುವತಿಗೆ ಕಾಫಿ ತರುವಂತೆ ಒಳಗಡೆ ಕಳುಹಿಸಿ ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಇತ್ತೀಚೆಗೆ ಯುವತಿ ಮನೆಯವರು ಕಬೋರ್ಡ್ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

