ಕುಂದಾಪುರದಲ್ಲಿ ಕಾರು ಢಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಅ. 18ರ ಸಂಜೆ ಹೆಮ್ಮಾಡಿ ಕೊಲ್ಲೂರು ಮುಖ್ಯ ರಸ್ತೆಯ ಕಟ್ ಬೆಲ್ತೂರಿನಲ್ಲಿ ಸಂಭವಿಸಿದೆ.ಕನ್ಯಾನ ಗ್ರಾಮದ ಜಗದೀಶ್ಚಂದ್ರ ಶೆಟ್ಟಿ (50) ಗಾಯಗೊಂಡವರು. ಅ.18ರ ಸಂಜೆ 6.30ರ ಸುಮಾರಿಗೆ ಕುಂದಾಪುರಕ್ಕೆ ತೆರಳಿದ್ದವರು ವಾಪಸು ಬಸ್ಸಿನಲ್ಲಿ ಬಂದು ಕಟ್ ಬೆಲ್ತೂರಿನಲ್ಲಿ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ರತ್ನಾಕರ ಶೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ.ಪರಿಣಾಮ ಎಡಕಾಲಿನ ಮೂಳೆಗೆ ಪೆಟ್ಟಾಗಿದ್ದು, ಸೊಂಟಕ್ಕೆ ಗಾಯವಾಗಿದೆ.
ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

