Breaking News

Breaking News

ಜಲಾಶಯದಲ್ಲಿ ಕೊಚ್ಚಿ ಹೋದ ತಾಯಿ, 6 ಮಕ್ಕಳು!

ಪಿಕ್ ನಿಕ್ ಗೆ ಅಂತ ಬಂದಿದ್ದ ಒಂದೇ ಕುಟುಂಬದ ತಾಯಿ ಹಾಗೂ 6 ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದ ದಾರುಣ ಘಟನೆ ತುಮಕೂರಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಭಾನುವಾರ ಸಂಭವಿಸಿದೆ.7 ಜನರಲ್ಲಿ ಈಗಾಗಲೇ ಇಬ್ಬರ ಮೃತದೇಹ ಸಿಕ್ಕಿದ್ದು, ಮತ್ತೋಬ್ಬರನ್ನು ರಕ್ಷಣೆ ಮಾಡಲಾಗಿದೆ. ಆದರೆ ಇನ್ನು ನಾಲ್ವರು ನಾಪತ್ತೆಯಾಗಿದ್ದಾರೆ. ಮುಳುಗಿ ಸಾಜಿಯಾ, ಅರ್ಬಿನ್ ಮೃತಪಟ್ಟಿದ್ದು, ಕಣ್ಮರೆಯಾಗಿರುವ ತಬಾಸುಮ್, ಶಬಾನ, ಮಿಫ್ರಾ, ಮಹಿಬ್​ ಗಾಗಿ ಶೋಧ ಕಾರ್ಯ ನಡೆದಿದೆ.

Read More »

ಅಡಚಣೆಗಾಗಿ ಕ್ಷಮಿಸಿ: ವಿಶೇಷ ಪೋಸ್ಟ್‌ ಹಂಚಿಕೊಂಡ ಕಲರ್ಸ್‌ ಕನ್ನಡ ವಾಹಿನಿ.

ಕನ್ನಡದ ಬಿಗ್‌ಬಾಸ್‌ ಮನೆ ಈಗ ಖಾಲಿಯಾಗಿದೆ. ಸ್ಪರ್ಧಿಗಳಿಂದ ತುಂಬಿ ತುಳುಕುತ್ತಿದ್ದ ಬಿಗ್‌ಬಾಸ್‌ ಮನೆ ಬಿಕೋ ಎನ್ನುತ್ತಿದೆ. ಜಾಲಿವುಡ್‌ ಸ್ಟುಡಿಯೋವನ್ನು ಸೀಜ್‌ ಮಾಡಲಾಗಿದ್ದು, ಹೀಗಾಗಿ ಬಿಗ್‌ಬಾಸ್‌ ಶೂಟಿಂಗ್‌ ಸ್ಥಗಿತಗೊಂಡಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ.ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಂಡಳಿಯು ಹಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆ …

Read More »

ಕುಖ್ಯಾತ ಅಂತರ್ ರಾಜ್ಯ ವಾಹನ ಚೋರನ ಬಂಧನ!

ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಕಪ್‌ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಮಾಡಿದ ಕೇರಳ ರಾಜ್ಯದ ಕುಖ್ಯಾತ ಅಂತರ್ ರಾಜ್ಯ ವಾಹನ ಚೋರನನ್ನು ದಸ್ತಗಿರಿ ಮಾಡಿ ಪಿಕಪ್‌ ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳುವಲ್ಲಿ ಸುರತ್ಕಲ್‌ ಪೊಲೀಸರು ಯಶಸ್ವಿಯಾಗಿದ್ದಾರೆ.ಕೇರಳದ ತಿರುವನಂತಪುರದ ವರ್ಕಳಾ ಗ್ರಾಮ ರಾತಿಕ್ಕಲ್ ನಿವಾಸಿ ಹಂಝ ಕುಪ್ಪಿಕಂಡ ಯಾನೆ ಹಂಸ ಯಾನೆ ಹಂಝ ಪೊನ್ನನ್ ಪ್ರಾಯ(29) ಬಂಧಿತ ಆರೋಪಿ.

Read More »

ಕುಣಿಗಲ್ | ಮಾರ್ಕೋನಹಳ್ಳಿ ಜಲಾಶಯ: ಬಾಲಕಿ ಮೃತದೇಹ ಪತ್ತೆ.

ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದವರ ಪೈಕಿ ಬುಧವಾರ ಬೆಳಗ್ಗೆ ಬಾಲಕಿ ನಿಪ್ರಾ (4) ಮೃತದೇಹ ಪತ್ತೆಯಾಗಿದೆ.ಮಂಗಳವಾರ ಮಧ್ಯಾಹ್ನ 6 ಜನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಸಾಧಿಯಾ ಮತ್ತು ಹರ್ಬಿನ್ ಮೃತದೇಹ ಮಂಗಳವಾರವೇ ಸಿಕ್ಕಿತ್ತು.ಅಗ್ನಿ ಶಾಮಕ‌ದಳದ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Read More »

ಗಿಲ್ಕಿ ವೆಂಕಟೇಶ್ ಹತ್ಯೆ ಹಿಂದೆ ಸೇಡಿನ ಕಹಾನಿ – ಐವರು ಹಂತಕರು ಸರೆಂಡರ್!

ಮೈಸೂರಲ್ಲಿ ಗಿಲ್ಕಿ ವೆಂಕಿ ಕೊಲೆ ಕೇಸ್ ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮರ್ಡರ್ ಗೆ ಸ್ಕೆಚ್ ಹಾಕಿದ ವೆಂಕಿ ಬೀದಿ ಹೆಣವಾದ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ಹಾಕಿದ್ದ ಸ್ಕೆಚ್ ಗೆ ಹಾಲಪ್ಪ ಬೆಚ್ಚಿಬಿದ್ದಿದ್ದರು.ಹೀಗಾಗಿ ಹಾಲಪ್ಪ ಅಂಡ್ ಟೀಂ ನಿಂದ ಸ್ಕೇಚ್ ಹಾಕಲಾಗಿತ್ತು. ಮಂಗಳವಾರ ಹಾಡಹಗಲೇ ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

Read More »

ಬಿಜೆಪಿ ಅಧ್ಯಕ್ಷ ಕೊಂದು ಪೊಲೀಸರಿಗೆ ಶರಣಾದ ನಾಲ್ವರು ಆರೋಪಿಗಳು!!

ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಊಟ ಮುಗಿಸಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಕಾರಿನಲ್ಲಿ ಹಿಂಬಾಲಿಸಿದ ಗುಂಪೊಂದು ವೆಂಕಟೇಶ್‌ರನ್ನು ಕೊಲೆಗೈದಿದೆ.ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಭೀಮ ಅಲಿಯಾಸ್ ಭರತ್, ಸಲೀಂ, ವಿಜಯ್, ಧನರಾಜ್ ಕಂಪ್ಲಿ ಪೊಲೀಸರಿಗೆ ತಾವಾಗಿಯೇ ಶರಣಾಗಿದ್ದಾರೆ. ಆದರೆ, ಇನ್ನಿಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು ಲಕ್ಷ್ಮಣ ತಲೆಮರೆಸಿಕೊಂಡಿದ್ದಾರೆ. ಗಂಗಾವತಿ ಪೊಲೀಸರು ಶರಣಾದ …

Read More »

ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್‌ ಸೆರೆ!

ರೌಡಿಶೀಟರ್ ಅಕ್ಟರ್ (21) ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತ ಚೇತರಿಸಿಕೊಂಡಿದ್ದು, ಶೀಘ್ರದಲ್ಲಿಯೇ ವಿಚಾರಣೆಗೆ ಒಳಪಡಿಸೋ ಸಾಧ್ಯತೆ ಇದೆ.ಶಿವಮೊಗ್ಗ ನಗರ ಹೊರವಲಯದ ಪುರಲೆ ಬಳಿ ಘಟನೆ ನಡೆದಿದೆ. ನ್ಯೂಮಂಡ್ಲಿಯ ನಿವಾಸಿ ಅಕ್ಟರ್ ಮೇಲೆ ಈಗಾಗಲೇ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಮ್ಮದ್ ಕೊಲೆ ಪ್ರಕರಣದಲ್ಲಿ ಸಹ ಈತ ಆರೋಪಿಯಾಗಿದ್ದಾನೆ.ಅಕ್ಟರ್‌ನನ್ನು ಬಂಧಿಸಲು ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ದೊಡ್ಡಪೇಟೆ ಠಾಣೆ ಪಿಎಸ್‌ಐ ಮಂಜುನಾಥ್ ಅಕ್ಟರ್‌ಗೆ …

Read More »

ಕಲಬುರಗಿ | ವ್ಯಕ್ತಿ ಕೊಲೆ; ಮೂವರ ಬಂಧನ.

ನಗರದ ಕುಷ್ಠರೋಗಿಗಳ ಕಾಲೊನಿಯಲ್ಲಿ ಇತ್ತೀಚೆಗೆ ನಡೆದ ಆಟೊ ಚಾಲಕ ಚಾಂದ್‌ಸಾಬ್ ಮೂಲಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಸೈಬಣ್ಣಾ ಕುಂಬಾರ (25), ಸೈಬಣ್ಣ ಪುರದಾಳ (22) ಹಾಗೂ 16 ವರ್ಷದ ಬಾಲಕ ಬಂಧಿತ ಆರೋಪಿಗಳು.ಆರೋಪಿಗಳು ಕೊಲೆ ಮಾಡಿದ ಬಗೆಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂದೇಹದ ಮೇಲೆ ಸಾಬವ್ವಳ ಸಹೋದರ ಸೈಬಣ್ಣಾ ಕುಂಬಾರ ಸೇರಿ ಇತರ ಇಬ್ಬರನ್ನು ಸೇರಿಸಿಕೊಂಡು ಕೊಲೆ ಮಾಡಿದ್ದಾರೆ …

Read More »

ಹೃದಯವಿದ್ರಾವಕ ಘಟನೆ : ಲಿಫ್ಟ್ ನಲ್ಲಿ ಕುತ್ತಿಗೆ ತುಂಡಾಗಿ ಯುವಕ ಸ್ಥಳದಲ್ಲೇ ಸಾವು.!

ಕಾನ್ಪುರದ ನೌಬಸ್ತಾ ಪೊಲೀಸ್ ಠಾಣೆ ಪ್ರದೇಶದ ಹನ್ಸ್ಪುರಂ ಪ್ರದೇಶದ ಒಳ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಕುತ್ತಿಗೆ ಲಿಫ್ಟ್ನಲ್ಲಿ ಸಿಲುಕಿಕೊಂಡಿತು.ಕುತ್ತಿಗೆ ತುಂಡಾಗಿ ಸಾವನ್ನಪ್ಪಿದ ಪರಿಣಾಮವಾಗಿ ಅವನು ಸಾವನ್ನಪ್ಪಿದನು. ಈ ಅಪಘಾತವು ಕಾರ್ಖಾನೆಯಲ್ಲಿ ಭೀತಿಯನ್ನು ಉಂಟುಮಾಡಿತು. ಕಾರ್ಮಿಕರು ತಕ್ಷಣ ಕಾರ್ಖಾನೆ ಮಾಲೀಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.ಕುಟುಂಬವು ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ದಕ್ಷಿಣದ ಎಡಿಸಿಪಿ ಯೋಗೇಶ್ ಕುಮಾರ್ …

Read More »

ಮುತ್ತಿಡಲು ಹೋದ ಯುವಕನ ತುಟಿಗೆ ಕಚ್ಚಿದ `ನಾಗರಹಾವು’.

ಯುವಕ ತನ್ನ ಸ್ನೇಹಿತರಲ್ಲಿ ಧೈರ್ಯಶಾಲಿಯಾಗಿರಲು ಪ್ರಯತ್ನಿಸಿದನು. ಅವನು ಕ್ಯಾಮೆರಾ ಮುಂದೆ ಹಾವಿನೊಂದಿಗೆ ಆಟವಾಡಿದನು. ನಂತರ ಅವನು ಅದನ್ನು ನಿಧಾನವಾಗಿ ತನ್ನ ಮುಖದ ಹತ್ತಿರ ತಂದನು. ಇದರೊಂದಿಗೆ, ಕೆಲವೇ ಕ್ಷಣಗಳಲ್ಲಿ ಹಾವು ಅವನ ತುಟಿಗಳಿಗೆ ಕಚ್ಚಿತು. ಯುವಕನ ಮುಖ ತಕ್ಷಣವೇ ನೋವಿನಿಂದ ಕೂಡಿತು.ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಆದರೆ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಅಂತಹ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು …

Read More »